Kannada News: ಭಾಗ್ಯಲಕ್ಷ್ಮಿ ಧಾರಾವಾಹಿಯ ಲಕ್ಷ್ಮಿ ನಿಜಕ್ಕೂ ಯಾರು ಗೊತ್ತೇ?? ಈಕೆಯ ವಯಸ್ಸು, ಸಂಬಳ ಹಾಗೂ ಆಸ್ತಿ ಎಷ್ಟು ಗೊತ್ತೇ??

Kannada News: ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 7:00ಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ (Bhagyalakshmi) ಧಾರವಾಹಿ ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಶುರುವಾದ ಕೆಲವೇ ದಿನಗಳಲ್ಲಿ ವಾಹಿನಿಯ ನಂಬರ್ ಒನ್ ಧಾರವಾಹಿಯಾಗಿ ಮಿಂಚಿದ ಭಾಗ್ಯಲಕ್ಷ್ಮಿ ಸದ್ಯ ಕನ್ನಡದ ಟಾಪ್ 5 ಧಾರವಾಹಿಗಳ ಪೈಕಿ ಸ್ಥಾನ ಪಡೆದಿದೆ. ಇನ್ನೂ ಭಾಗ್ಯಲಕ್ಷ್ಮಿಯ ಕಥೆ ಜನರಿಗೆ ಮೆಚ್ಚುಗೆಯಾಗಿದ್ದು, ನಿತ್ಯವೂ ಲಕ್ಷಾಂತರ ಜನರಿಂದ ಧಾರವಾಹಿ ವೀಕ್ಷಣೆಯಾಗುತ್ತಿದೆ. ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡಿರುವ ಸುಷ್ಮಾ ಅವರು ಭಾಗ್ಯ ಪಾತ್ರವನ್ನು ಮಾಡುತ್ತಿದ್ದಾರೆ. ಇನ್ನೂ ಲಕ್ಷ್ಮಿ ಪಾತ್ರದಲ್ಲಿ ನಟಿಸುತ್ತಿರುವ ಪಾತ್ರಧಾರಿ ಕಿರುತೆರೆ ಲೋಕಕ್ಕೆ ಹೊಸಬರಾಗಿದ್ದು, ಇವರ ಹಿನ್ನೆಲೆ ಕೇಳಿದರೆ ನಿಜಕ್ಕೂ ಆಶ್ಚರ್ಯ ಎನಿಸುತ್ತದೆ.

ಕಲರ್ಸ್ ವಾಹಿನಿಯ ಟಾಪ್ ಮೋಸ್ಟ್ ಧಾರವಾಹಿಯಾದ ಮಂಗಳಗೌರಿ ಮದುವೆ (Mangalagowri Maduve) ನಂತರ ಅದೇ ಸಮಯಕ್ಕೆ ಶುರುವಾದ ಭಾಗ್ಯಲಕ್ಷ್ಮಿ ಧಾರವಾಹಿ ಸಹ ಅಷ್ಟೇ ಜನಪ್ರಿಯತೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸದ್ಯ ವಾಹಿನಿಯ ಟಾಪ್ ಧಾರವಾಹಿಯಾಗಿರುವ ಭಾಗ್ಯಲಕ್ಷ್ಮಿ ದಿನದಿಂದ ದಿನಕ್ಕೆ ಇನ್ನಷ್ಟು ಪ್ರಸಿದ್ಧಿ ಮತ್ತು ಜನರ ವೀಕ್ಷಣೆಯನ್ನು ಪಡೆದುಕೊಳ್ಳುತ್ತಿದೆ. ಇಬ್ಬರು ಅಕ್ಕ-ತಂಗಿಯರ ಅಪರೂಪದ ಬಾಂಧವ್ಯದ ಕಥೆಯನ್ನು ಆಧರಿಸಿ, ಅಕ್ಕತಂಗಿಯರು ಪರಸ್ಪರ ಎಷ್ಟು ಪ್ರೀತಿ ಹೊಂದಿರುತ್ತಾರೆ ಹಾಗೂ ವೈಯಕ್ತಿಕವಾಗಿ ಅವರ ಜೀವನದಲ್ಲಿ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾರೆ ಎನ್ನುವ ಅಂಶಗಳನ್ನು ಆಧರಿಸಿ ವಿಶೇಷವಾಗಿ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಈ ಕಥೆಯನ್ನು ಹೆಣೆಯಲಾಗಿದೆ. ಗುಪ್ತಗಾಮಿನಿ, ಸೊಸೆ ತಂದ ಸೌಭಾಗ್ಯ ಇನ್ನೂ ಮುಂತಾದ ಹಲವಾರು ಧಾರವಾಹಿಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಹಾಗೂ ನಿರೂಪಕಿ ಸುಷ್ಮಾ (Sushma) ಅವರು ಭಾಗ್ಯ ಪಾತ್ರದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದನ್ನು ಓದಿ..ಅಲ್ಲಿ ನಿನಗೆ ಕಂಡ ಕಡಿಮೆ ಇದೆ, ಅದನ್ನು ಬೆಳಸಿಕೊ ಮುಂದಿನ ಇಲಿಯಾನ ಆಗುತ್ತೀಯ ಎಂದು ನೇರವಾಗಿ ಶ್ರೀ ಲೀಲಾಗೆ ಹೇಳಿ ಬಿಟ್ಟ ಡೈರೆಕ್ಟರ್. ಚಿಕ್ಕ ಹುಡುಗಿಗೆ ಹೀಗಾ ಹೇಳೋದು??

kannada news bhagyalakshmi kannada serial update | Kannada News: ಭಾಗ್ಯಲಕ್ಷ್ಮಿ ಧಾರಾವಾಹಿಯ ಲಕ್ಷ್ಮಿ ನಿಜಕ್ಕೂ ಯಾರು ಗೊತ್ತೇ?? ಈಕೆಯ ವಯಸ್ಸು, ಸಂಬಳ ಹಾಗೂ ಆಸ್ತಿ ಎಷ್ಟು ಗೊತ್ತೇ??
Kannada News: ಭಾಗ್ಯಲಕ್ಷ್ಮಿ ಧಾರಾವಾಹಿಯ ಲಕ್ಷ್ಮಿ ನಿಜಕ್ಕೂ ಯಾರು ಗೊತ್ತೇ?? ಈಕೆಯ ವಯಸ್ಸು, ಸಂಬಳ ಹಾಗೂ ಆಸ್ತಿ ಎಷ್ಟು ಗೊತ್ತೇ?? 2

ಇನ್ನು ಲಕ್ಷ್ಮಿ ಪಾತ್ರದಲ್ಲಿ ನಟಿಸುತ್ತಿರುವವರು ಸಹ ಎಲ್ಲರಿಗೂ ಮೆಚ್ಚುಗೆಯಾಗಿದ್ದು, ಇವರ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ. ಲಕ್ಷ್ಮಿ ಅವರ ನಿಜವಾದ ಹೆಸರು ಭೂಮಿಕಾ ರಮೇಶ್ (Bhoomika Ramesh). ಇವರಿಗೆ ನಟನೆ ಹೊಸದು, ಇದೆ ಮೊದಲ ಬಾರಿಗೆ ಧಾರವಾಹಿ ಒಂದರಲ್ಲಿ ನಟಿಸುತ್ತಿದ್ದಾರೆ. ಆದರೆ ಇವರಿಗೆ ಕ್ಯಾಮೆರಾ ಎದುರಿಸಿ ಅನುಭವಿದೆ. ಏಕೆಂದರೆ ಈ ಹಿಂದೆ 2016ರಲ್ಲಿ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸಿಂಗ್ ಸ್ಟಾರ್ ಜೂನಿಯರ್ಸ್ ನಲ್ಲಿ ಇವರು ಭಾಗವಹಿಸಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದ ಶೋ ಅರ್ಧಕ್ಕೆ ಬಿಟ್ಟು ಹೊರ ನಡೆದಿದ್ದರು. ಆನಂತರ ಅವರು ತೆಲುಗಿನ ಡ್ಯಾನ್ಸಿಂಗ್ ರಿಯಾಲಿಟಿ ಶೋ ನಲ್ಲೂ ಸ್ಪರ್ಧಿಸಿದ್ದರು. ಅದ್ಭುತವಾಗಿ ಡಾನ್ಸ್ ಮಾಡಬಲ್ಲ ಇವರು ಭರತನಾಟ್ಯ ನೃತ್ಯಗಾರ್ತಿಯು ಹೌದು. ಇನ್ನು ಇವರ ವಯಸ್ಸಿನ ಬಗ್ಗೆ ಹೇಳುವುದಾದರೆ ನಿಜಕ್ಕೂ ಎಂತವರಿಗೂ ಆಶ್ಚರ್ಯ ಅನಿಸುತ್ತದೆ. ಏಕೆಂದರೆ ಇವರಿಗೆ ಕೇವಲ 19 ವರ್ಷ ವಯಸ್ಸು. ಇವರು ಇನ್ನೂ ಸಹ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸದ್ಯ ಬಿಸಿಎ ಪದವಿ ಓದುತ್ತಿದ್ದಾರೆ. ವಿದ್ಯಾಭ್ಯಾಸದ ಜೊತೆ ಜೊತೆಗೆ ನಟನೆಯಲ್ಲಿ ಮುಂದುವರೆದಿದ್ದಾರೆ. ಇದನ್ನು ಓದಿ..Kannada News: ವೀಕೆಂಡ್ ವಿಥ್ ರಮೇಶ್: ಮೊದಲ ಎಪಿಸೋಡ್ ನಲ್ಲಿ ರಿಷಬ್ ಅಲ್ಲ, ಬರುತ್ತಿರುವುದು ಸ್ವರ್ಗದಿಂದ ಧರೆಗಿಳಿದ ಅಪ್ಸರೆ. ಯಾರು ಗೊತ್ತೆ ಆ ಚೆಲುವೆ??

Comments are closed.