News from ಕನ್ನಡಿಗರು

Kannada News: ವೀಕೆಂಡ್ ವಿಥ್ ರಮೇಶ್: ಮೊದಲ ಎಪಿಸೋಡ್ ನಲ್ಲಿ ರಿಷಬ್ ಅಲ್ಲ, ಬರುತ್ತಿರುವುದು ಸ್ವರ್ಗದಿಂದ ಧರೆಗಿಳಿದ ಅಪ್ಸರೆ. ಯಾರು ಗೊತ್ತೆ ಆ ಚೆಲುವೆ??

324

Kannada News: ಜಿ ವಾಹಿನಿಯ (Zee Kannada) ಜನಪ್ರಿಯ ಟಾಕ್ ಶೋ ವೀಕೆಂಡ್ ವಿತ್ ರಮೇಶ್ (Weekend with Ramesh) ಯಶಸ್ವಿ ನಾಲ್ಕು ಸೀಸನ್ಗಳನ್ನು ಪೂರೈಸಿ ಐದನೇ ಸೀಸನ್ ಗೆ ಕಾಲಿರಿಸುತ್ತಿದೆ. ಕರ್ನಾಟಕದ ಅತ್ಯಂತ ಯಶಸ್ವಿ ಕಾರ್ಯಕ್ರಮವಾದ ಈ ಶೋ ಬಗ್ಗೆ ಜನರಿಗೆ ಅಪಾರವಾದ ಮೆಚ್ಚುಗೆ ಇದೆ. ಏಕೆಂದರೆ ಈ ಕಾರ್ಯಕ್ರಮದಲ್ಲಿ ಪ್ರತಿ ಸಂಚಿಕೆಯಲ್ಲೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಪರಿಚಯಿಸುವ ಪ್ರಯತ್ನ ಮಾಡಲಾಗುತ್ತದೆ. ನಟ ರಮೇಶ್ ಅರವಿಂದ್ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ವಿವಿಧ ಸಾಧಕರ ಬದುಕು ಬವಣೆ, ಅವರ ಸವಾಲುಗಳು ಹೀಗೆ ಹಲವಾರು ವಿಚಾರಗಳನ್ನು ಜನರಿಗೆ ಪರಿಚಯಿಸುವ ಮೂಲಕ ಅವರ ಬದುಕಿಗೂ ಸ್ಪೂರ್ತಿ ತುಂಬುವ ಪ್ರಯತ್ನ ಈ ಕಾರ್ಯಕ್ರಮದಲ್ಲಿದೆ. ಇನ್ನು ನಾಲ್ಕು ಸೀಸನ್ ಗಳ ನಂತರ 5ನೇ ಸೀಸನ್ಗೆ ತಯಾರಿ ನಡೆದಿದ್ದು, ನೆನ್ನೆಯಷ್ಟೇ ಕಾರ್ಯಕ್ರಮದ ಪ್ರೊಮೋ ಬಿಡುಗಡೆಗೊಂಡಿದ್ದು ,ವೀಕ್ಷಕರ ನಿರೀಕ್ಷೆ ದುಪಟ್ಟ ಆಗಿದೆ.

ಸಿನಿಮಾ, ಸಾಹಿತ್ಯ, ಕಲೆ, ರಾಜಕಾರಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಪರೂಪದ ಸಾಧಕರನ್ನು ಇಲ್ಲಿಯವರೆಗೂ ಈ ಷೋ ಮೂಲಕ ಜನರಿಗೆ ಇನ್ನಷ್ಟು ಪರಿಚಯಿಸಲಾಗಿದೆ. ನಮ್ಮ ಮೆಚ್ಚಿನ ಸಾಧಕರ ಸಂಪೂರ್ಣ ವಿವರ ನಮಗೆ ತಿಳಿದಿರುವುದಿಲ್ಲ. ಅವರ ಸಾಧನೆಯ ಹಾದಿಯಲ್ಲಿ ಎಷ್ಟೆಲ್ಲ ಸವಾಲುಗಳಿದ್ದವು, ಅವರ ಬದುಕು ಹೇಗಿತ್ತು, ಏನಿಲ್ಲ ಕಷ್ಟಗಳನ್ನು ಎದುರಿಸಬೇಕಾಗಿತ್ತು ಹೀಗೆ ಹಲವಾರು ವಿಚಾರಗಳನ್ನು ನೇರವಾಗಿ ಜನರ ಮುಂದಿಡುವ ಪ್ರಯತ್ನವನ್ನು ಈ ಶೋ ಮಾಡುತ್ತಾ ಬಂದಿದೆ. ಇನ್ನು ನಾಲ್ಕು ಸೀಸನ್ಗಳ ಬಳಿಕ 5ನೇ ಸೀಸನ್ ಬಗ್ಗೆ ಸಾಕಷ್ಟು ಕುತೂಹಲ ವ್ಯಕ್ತವಾಗಿತ್ತು. ಇನ್ನು ಕೆಲವೇ ದಿನಗಳಲ್ಲಿ ಐದನೇ ಸೀಸನ್ ಶುರುವಾಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಅದರಂತೆ ನೆನ್ನೆ ಅಷ್ಟೇ ಸೀಸನ್ ಫೈವ್ ಮೊದಲ ಪ್ರೋಮೋ ಬಿಡುಗಡೆಗೊಂಡಿದೆ. ಸಾಕಷ್ಟು ಕುತೂಹಲಗಳನ್ನು ಈ ಪ್ರೋಮೋ ಹುಟ್ಟುಹಾಕಿದೆ. ಇದನ್ನು ಓದಿ..Kannada News: ಚಿರಂಜೀವಿ ಧರಿಸಿರುವ ಈ ವಾಚ್ ಕೇಳಿದರೆ, ಒಂದು ಕ್ಷಣ ಬೆಚ್ಚಿ ಬೆರಗಾಗಿ ನಿಂತು ಬಿಡ್ತೀರಾ. ಒಂದು ವಾಚ್ ಗೆ ಇಷ್ಟೊಂದಾ??

ಸೀಸನ್ 5 ಮೊದಲ ಸಾಧಕರ ಸೀಟ್ನಲ್ಲಿ ರಿಷಬ್ ಶೆಟ್ಟಿ (Rishab Shetty) ಕೂರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಸದ್ಯ ರಿಷಬ್ ಶೆಟ್ಟಿ ಕಾಂತಾರ ಚಿತ್ರದ ಯಶಸ್ಸಿನಿಂದಾಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ನಿಜಕ್ಕೂ ಒಂದು ಕನ್ನಡ ನೆಲದ ಸಾಮಾನ್ಯ ಕಥೆ ಇಡೀ ಜಗತ್ತೇ ಮೆಚ್ಚಿಕೊಂಡಿದ್ದು ಸಣ್ಣ ವಿಷಯವೇನಲ್ಲ. ಹೀಗಾಗಿ ಅವರ ಯಶಸ್ಸಿನ ಕಥೆಯನ್ನು ಕೇಳಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಡಾಲಿ ಧನಂಜಯ್ ಕೂಡ ಈ ಸೀಸನ್ ನಲ್ಲಿ ಆದಷ್ಟು ಬೇಗ ಕಾಣಿಸಿಕೊಳ್ಳಲಿದ್ದಾರೆ ಎಂಬ ಚರ್ಚೆಯಾಗುತ್ತಿದೆ. ಇನ್ನು ನೆನ್ನೆ ಅಷ್ಟೇ ಸೀಸನ್ ಫೈವ್ ಪ್ರೊಮೋ ಬಿಡುಗಡೆಯಾಗಿದ್ದು, ವಿಶೇಷವೆಂದರೆ ಇದರಲ್ಲಿ ರಮೇಶ್ ಅರವಿಂದ್ ಪತ್ನಿಯಾಗಿ ರಾಧಿಕಾ ನಾರಾಯಣ್ (Radhika Narayan) ಕಾಣಿಸಿಕೊಂಡಿದ್ದಾರೆ. ಎಲ್ಲಾದರೂ ಹೊರಗಡೆ ವೆಕೇಷನ್ ಹೋಗಿ ಬರೋಣ ಎಂದು ರಾಧಿಕಾ ಕೇಳಿದರೆ ರಮೇಶ್ ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್ ಬರುತ್ತಿರುವ ಸುಳಿವು ನೀಡುತ್ತಾರೆ. ಆದರೆ ಯಾವಾಗ ಎಂದರೆ ಆ ಗುಟ್ಟು ಬಿಟ್ಟುಕೊಡುವುದಿಲ್ಲ. ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ವೀಕೆಂಡ್ ವಿತ್ ರಮೇಶ್ 5ನೇ ಸೀಸನ್ ಆರಂಭವಾಗಲಿದೆ. ಈ ಸೀಸನ್ ಬಗ್ಗೆ ಜನರಿಗೆ ಸಾಕಷ್ಟು ನಿರೀಕ್ಷೆ ವ್ಯಕ್ತವಾಗಿದೆ. ಇದನ್ನು ಓದಿ..ಅಲ್ಲಿ ನಿನಗೆ ಕಂಡ ಕಡಿಮೆ ಇದೆ, ಅದನ್ನು ಬೆಳಸಿಕೊ ಮುಂದಿನ ಇಲಿಯಾನ ಆಗುತ್ತೀಯ ಎಂದು ನೇರವಾಗಿ ಶ್ರೀ ಲೀಲಾಗೆ ಹೇಳಿ ಬಿಟ್ಟ ಡೈರೆಕ್ಟರ್. ಚಿಕ್ಕ ಹುಡುಗಿಗೆ ಹೀಗಾ ಹೇಳೋದು??

Comments are closed, but trackbacks and pingbacks are open.