Kannada News: ಅದೆಷ್ಟೋ ಸುಳ್ಳು ಮಾಹಿತಿಗಳ ನಡುವೆ ಕ್ರಾಂತಿ ಸಿನಿಮಾ ನಿಜಕ್ಕೂ ಕಲೆಕ್ಷನ್ ಮಾಡಿದ್ದು ಎಷ್ಟು ಗೊತ್ತೇ?? ಫ್ಯಾನ್ಸ್ ಸುಳ್ಳು ಹೇಳುತ್ತಿದ್ದಾರೆಯೇ? ಆಗಿದ್ದರೆ ಕಲೆಕ್ಷನ್ ಎಷ್ಟು ಗೊತ್ತೇ??
Kannada News: ನಟ ದರ್ಶನ್ (Darshan) ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ (Kranti) ಕಳೆದ ಜನವರಿ 26ರಂದು ಭರ್ಜರಿಯಾಗಿ ರಾಜ್ಯಾದ್ಯಂತ ತೆರೆ ಕಂಡಿದೆ. ಹೆಚ್ಚು ಕಡಿಮೆ ನಟ ದರ್ಶನ್ ಅವರನ್ನು ಅಭಿಮಾನಿಗಳು ಎರಡು ವರ್ಷಗಳ ನಂತರ ತೆರೆಯ ಮೇಲೆ ನೋಡಲು ಸಾಧ್ಯವಾಗಿದೆ. ಕಳೆದ 22 ತಿಂಗಳುಗಳಿಂದ ಅವರ ಯಾವುದೇ ಚಿತ್ರ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿರಲಿಲ್ಲ. ಹಾಗಾಗಿ ಕ್ರಾಂತಿ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಉಂಟಾಗಿತ್ತು. ಅದರಂತೆ ಚಿತ್ರ ತೆರೆಕಂಡಿದೆ. ಚಿತ್ರ ಬಿಡುಗಡೆಗೊಂಡ ದಿನದಿಂದಲೂ ಕೂಡ ಈ ಚಿತ್ರ ಇಷ್ಟು ಕೋಟಿ ಕಲೆಕ್ಷನ್ ಮಾಡಿದೆ, ಅಷ್ಟು ಕಲೆಕ್ಷನ್ ಮಾಡಿದೆ ಎನ್ನುವ ಸುದ್ದಿಗಳು ಹರಿದಾಡುತ್ತಲೇ ಇವೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಈ ಚಿತ್ರ ಎಷ್ಟು ಕೋಟಿ ಕಲೆಕ್ಷನ್ ಮಾಡಿದೆ ಎಂದೆಲ್ಲ ಪೋಸ್ಟರ್ಗಳು ಹರಿದಾಡುತ್ತಿವೆ. ಆದರೆ ಇವುಗಳಲ್ಲಿ ಬಹುತೇಕ ಎಲ್ಲವೂ ಫೇಕ್ ಸುದ್ದಿಗಳಾಗಿದೆ. ಹಾಗಾಗಿ ನಿಜಕ್ಕೂ ಕ್ರಾಂತಿ ಚಿತ್ರ ಎಷ್ಟು ಕಲೆಕ್ಷನ್ ಮಾಡಿದೆ, ಇದುವರೆಗೆ ಕ್ರಾಂತಿಯ ಒಟ್ಟು ಗಳಿಕೆ ಎಷ್ಟು ಎನ್ನುವ ಪಕ್ಕ ಲೆಕ್ಕ ಇಲ್ಲಿದೆ.
ಗಣರಾಜ್ಯೋತ್ಸವದ ದಿನದಂದು ಬಿಡುಗಡೆಯಾಗಿದ್ದ ಈ ಚಿತ್ರ ಸರ್ಕಾರಿ ರಜಾದಿನ ಹಾಗೂ ವೀಕೆಂಡ್ ಕಾರಣದಿಂದ ಹೆಚ್ಚಿನ ಜನರು ಚಿತ್ರವನ್ನು ನೋಡಿದ್ದಾರೆ. ಚಿತ್ರಮಂದಿರದಲ್ಲಿ ನೂಕು ನುಗ್ಗಲು ಉಂಟಾಗುವ ಮಟ್ಟಿಗೆ ಚಿತ್ರಮಂದಿರ ತುಂಬಿ ತುಳುಕುತ್ತಿದೆ ಎಂದು ವರದಿಯಾಗಿದೆ. ನಿರೀಕ್ಷೆಯಂತೆ ಕ್ರಾಂತಿ ಚಿತ್ರವು ಬಾಕ್ಸ್ ಆಫೀಸ್ ಲೂಟಿ ಮಾಡುತ್ತಿದೆ. ನಟ ದರ್ಶನ್, ರಚಿತಾ ರಾಮ್ (Rachita Ram), ರವಿಚಂದ್ರನ್ (Ravichandran), ರವಿಶಂಕರ್ (Ravishankar) ಹೀಗೆ ಬಹು ತಾರಾಗಣವಿರುವ ಈ ಚಿತ್ರ ಜನರನ್ನು ಆಕರ್ಷಿಸುತ್ತಿದೆ. ಸರ್ಕಾರಿ ಭೂಮಿಯನ್ನು ಕಬಳಿಸಲು ಪ್ರಯತ್ನಿಸುವ ದುಷ್ಟರ ವಿರುದ್ಧ ಹೋರಾಡುವ ನಾಯಕನ ಕಥೆಯನ್ನು ಕ್ರಾಂತಿ ಒಳಗೊಂಡಿದೆ. ಸರ್ಕಾರಿ ಶಾಲೆ, ಅಲ್ಲಿನ ವ್ಯವಸ್ಥೆ, ಶಿಕ್ಷಣ ಹೀಗೆ ಅನೇಕ ಅಂಶಗಳ ಕುರಿತು ಬೆಳಕು ಚೆಲ್ಲಲಾಗಿದೆ. ಒಂದೆಡೆ ತಮ್ಮ ಮೆಚ್ಚಿನ ನಟನನ್ನು ತೆರೆಯ ಮೇಲೆ ನೋಡಿ ಅಭಿಮಾನಿಗಳು ಖುಷಿ ಪಡುತ್ತಿದ್ದರೆ, ಮತ್ತೊಂದೆಡೆ ಈ ಚಿತ್ರದ ಸಂದೇಶ ಎಲ್ಲರಿಗೂ ಇಷ್ಟವಾಗುತ್ತಿದೆ. ಅದರಲ್ಲೂ ಸರ್ಕಾರಿ ಶಾಲೆಯಲ್ಲಿ ಓದಿದವರಿಗೆ ಈ ಚಿತ್ರ ಇನ್ನಷ್ಟು ಆಪ್ತವಾಗುತ್ತದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಇದನ್ನು ಓದಿ..Kannada News: ಕಿರುತೆರೆಯಲ್ಲಿ ಸಂಚಲನ ಸೃಷ್ಟಿಸಿರುವ ಮಾಧವ್ ರವರ ಕುಟುಂಬ ಹೇಗಿದೆ ಗೊತ್ತೇ? ಪತ್ನಿ ಹಾಗೂ ಮಗ ಹೇಗಿದ್ದಾರೆ ಗೊತ್ತೇ??
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರದ ಗಳಿಕೆಯ ಕುರಿತಾಗಿ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಮೊದಲ ದಿನದಿಂದಲೂ ಕೂಡ ಇಲ್ಲಿಯವರೆಗೆ ಈ ಚಿತ್ರ ಇಷ್ಟು ಕೋಟಿ ಗಳಿಸಿದೆ, ಅಷ್ಟು ಕೋಟಿ ಗಳಿಸಿದ ಎಂದೆಲ್ಲ ಪೋಸ್ಟರ್ಗಳು ಹರಿದಾಡುತ್ತಿವೆ. ಆದರೆ ನಿಜಕ್ಕೂ ಕ್ರಾಂತಿ ಚಿತ್ರವು ಇವತ್ತಿನವರೆಗೆ ಎಷ್ಟು ಕೋಟಿ ಗಳಿಕೆ ಮಾಡಿದೆ ಗೊತ್ತಾ? ಅಧಿಕೃತ ನಿಖರ ಲೆಕ್ಕವನ್ನು ನಾವು ಇಲ್ಲಿ ಹೇಳಲಿದ್ದೇವೆ. ಅಂದ ಹಾಗೆ ಕ್ರಾಂತಿ ಚಿತ್ರ ಬಿಡುಗಡೆಗೊಂಡ ಮೊದಲ ದಿನ 35.3 ಕೋಟಿ ಕಲೆಕ್ಷನ್ ಮಾಡಿದೆ. ಎರಡನೇ ದಿನ ಚಿತ್ರವು 19.7 ಕೋಟಿ ಗಳಿಸಿದೆ. ಮೂರನೇ ದಿನ ಚಿತ್ರ 23.4 ಕೋಟಿ ಗಳಿಸಿದೆ. ಇನ್ನು ನಾಲ್ಕನೇ ದಿನದ ಅಂತ್ಯದಲ್ಲಿ ಚಿತ್ರ 30.6 ಕೋಟಿ ಲೂಟಿ ಮಾಡಿದೆ ಎಂದು ಅಧಿಕೃತವಾಗಿ ತಿಳಿದು ಬಂದಿದೆ. ಈಗಾಗಲೇ ಚಿತ್ರವು 110 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಲೂಟಿ ಮಾಡಿದ್ದು ಇನ್ನೂ ಸಹ ಈ ಚಿತ್ರ ದೊಡ್ಡ ಮಟ್ಟದ ಗಳಿಕೆ ಕಾಣುವುದು ನಿಶ್ಚಿತ. ಇದನ್ನು ಓದಿ..Kannada News: ಯಶಸ್ಸು ಗಳಿಸಿದ ತಕ್ಷಣ, ಚಿಕ್ಕ ವಯಸ್ಸಿನಲ್ಲಿಯೇ ಆ ರೀತಿ ಮಾಡಲು ಸಿದ್ದ ಎಂದ ಶ್ರೀ ಲೀಲಾ; ಈ ವಯಸ್ಸಿಗೆ ಈ ಗಟ್ಟಿ ನಿರ್ಧಾರ ಬೇಕಾ ಎಂದ ಫ್ಯಾನ್ಸ್.? ಏನಂತೀರಿ??
Comments are closed.