Cricket News: IPL ನಲ್ಲಿ ನಾನೇ ಎಲ್ಲ ನನ್ನದೇ ಎಲ್ಲ ಎಂದು ಮೆರೆದಿದ್ದ ಆಟಗಾರನ ಜೀವನ ಅಂತ್ಯ. 26 ವರ್ಷಕ್ಕೆ ಕ್ರಿಕೆಟ್ ಗೆ ಬ್ರೇಕ್. ಕಳಪೆ ಆಟಕ್ಕೆ ಬೆಲೆತೆತ್ತ ಆಟಗಾರ. ಯಾರು ಗೊತ್ತೇ??
Cricket News: ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದಲ್ಲಿ ಪ್ರಸ್ತುತ ಟಿ20 ಭಾರತದ ಯುವ ಆಟಗಾರರ ತಂಡವು ನ್ಯೂಜಿಲೆಂಡ್ (India vs New Zealand) ವಿರುದ್ಧದ ಮೂರು ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಆಡುತ್ತಿದೆ. 2022ರ ಟಿ ಟ್ವೆಂಟಿ ವಿಶ್ವಕಪ್ (T20 World Cup) ಬಳಿಕ ಇದೀಗ ಟಿ 20 ಸರಣಿಯಲ್ಲಿ ಯುವ ಆಟಗಾರರ ಮೇಲೆ ಹೆಚ್ಚಿನ ವಿಶ್ವಾಸವನ್ನು ಇರಿಸಲಾಗುತ್ತಿದೆ. ಆದರೆ ಟಿ ಟ್ವೆಂಟಿಯ ಯುವ ಆಟಗಾರರ ಆಯ್ಕೆಯಲ್ಲಿ ಸದಾ ಮುಂಚೂಣಿಯಲ್ಲಿದ್ದ 26 ವರ್ಷದ ಯುವ ಆಟಗಾರರೊಬ್ಬರಿಗೆ ಇದೀಗ ಟಿ 20 ಪಂದ್ಯಗಳಲ್ಲಿ ಸ್ಥಾನ ಪಡೆಯಲು ಸಾಧ್ಯವಾಗುತ್ತಿಲ್ಲ. ಕೆಲವು ದಿನಗಳಿಂದ ಅವರಿಗೆ ಟಿ ಟ್ವೆಂಟಿ ಪದ್ಯದ ಭಾಗವಾಗಲು ಸಾಧ್ಯವಾಗುತ್ತಿಲ್ಲ. ಈ ಆಟಗಾರ 2022ರ ಏಷ್ಯಾ ಕಪ್ ಟಿ20 ಪಂದ್ಯದಲ್ಲಿ ತಮ್ಮ ಕೊನೆಯ ಟಿ ಟ್ವೆಂಟಿ ಆಡಿದ್ದರು. ಹಾಗಿದ್ದರೆ ಆ ಆಟಗಾರ ಯಾರು ಎನ್ನುವುದರ ವಿವರಣೆ ಇಲ್ಲಿದೆ.
26 ವರ್ಷದ ಆವೇಶ್ ಖಾನ್ (Avesh Khan) 2022ರ ಏಷ್ಯಾ ಕಪ್ (Asiacup 2022) ಸಮಯದವರೆಗೂ ಆಯ್ಕೆ ಸಮಿತಿಯ ಮೊದಲ ಆದ್ಯತೆಯಾಗಿ ಉಳಿದುಕೊಂಡಿದ್ದರು. ಆದರೆ ವೇಗದ ಬೌಲರ್ ಆಗಿರುವ ಅವರಿಗೆ ಇದೀಗ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ. ತಮ್ಮ ಕಳಪೆ ಪ್ರದರ್ಶನದಿಂದಾಗಿ ಅವರು ತಂಡದಿಂದ ಹೊರಗುಳಿಯುತ್ತಿದ್ದಾರೆ. ಕಳೆದ ಅಕ್ಟೋಬರ್ ನಲ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಇಂಡಿಯಾ ಪರ ಕೊನೆಯ ಏಕದಿನ ಪಂದ್ಯ ಆಡಿದ್ದರು. ಏಷ್ಯಾಕಪ್ ಗೂ ಮೊದಲು ಆವೇಶ್ ಖಾನ್ ಎಲ್ಲ ಪಂದ್ಯಗಳಲ್ಲಿಯೂ ತಂಡದ ಜೊತೆಗಿರುತ್ತಿದ್ದರು. ಆದರೆ ತಮಗೆ ಸಿಕ್ಕ ಉತ್ತಮ ಅವಕಾಶವನ್ನು ಅವರು ಸರಿಯಾಗಿ ಬಳಸಿಕೊಳ್ಳುತ್ತಿರಲಿಲ್ಲ. ಏಷ್ಯಾ ಕಪ್ 2022ರ ತಂಡದ ಸೋಲಿಗೆ ಆವೇಶ್ ಅತಿ ಪ್ರಮುಖ ಕಾರಣವೆಂದು ಇಂದಿಗೂ ಸಹ ಟೀಕೆಗಳು ಕೇಳಿ ಬರುತ್ತದೆ. ಇದನ್ನು ಓದಿ..Cricket News: ಮತ್ತದೇ ತಪ್ಪು ಮಾಡಲು ಆರಂಭಿಸಿದ ಬಿಸಿಸಿಐ: ಒಂದು ಕಣ್ಣಿಗೆ ಬೆಣ್ಣೆ ಬಳಿದು, ಮೂರು ಕಣ್ಣಿಗೆ ಸುಣ್ಣ ಬಳಿದದ್ದು ಹೇಗೆ ಗೊತ್ತೇ??
ಪಾಕಿಸ್ತಾನದ (India vs Pakistan) ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ ಅವರು ಎರಡು ಓವರ್ ಗಳಲ್ಲಿ 19 ಬೌಲಿಂಗ್ ಮಾಡಿ ಕೇವಲ ಒಂದು ವಿಕೆಟ್ ಪಡೆದಿದ್ದರು. ಆವೇಶ್ ಇದುವರೆಗೆ ಟೀಮ್ ಇಂಡಿಯಾ (Team India) ಪರ 15 ಟಿ – 20 ಹಾಗೂ 5 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಈ ಟಿ 20 ಪಂದ್ಯಗಳಲ್ಲಿ ಅವರು 9.11 ಎಕನಾಮಿಯಲ್ಲಿ ರನ್ ನೀಡುವಾಗ 13 ವಿಕೆಟ್ ಕಬಳಿಸಿದ್ದಾರೆ. ಇನ್ನೂ ಏಕದಿನ ಪಂದ್ಯಗಳಲ್ಲಿ ಅವರು ಕೇವಲ ಮೂರು ವಿಕೆಟ್ಗಳನ್ನು ಅಷ್ಟೇ ಪಡೆದಿದ್ದಾರೆ. ಐಪಿಎಲ್ (IPL) ನಲ್ಲಿ ಅದ್ಭುತ ಪ್ರದರ್ಶನ ತೋರಿದ ನಂತರ ಅವರಿಗೆ ತಂಡದಲ್ಲಿ ಉತ್ತಮ ಅವಕಾಶಗಳನ್ನು ನೀಡಲಾಯಿತು. ಜೊತೆಗೆ ತಂಡಕ್ಕೆ ಅವರನ್ನು ಸೇರಿಸಿಕೊಳ್ಳಲಾಯಿತು. ಆದರೆ ಟೀಮ್ ಇಂಡಿಯಾದಲ್ಲಿ ಅವರ ವೈಫಲ್ಯ ಮುಂದುವರೆದಿದೆ. ಐಪಿಎಲ್ ನಲ್ಲಿ ತೋರಿದ ಅದ್ಭುತ ಪ್ರದರ್ಶನವನ್ನು ಅವರು ಇದೀಗ ತೋರಿಸಲು ಸಾಧ್ಯವಾಗದೆ ಫಾರ್ಮ್ ಕಳೆದುಕೊಂಡಿದ್ದಾರೆ. ಇದನ್ನು ಓದಿ..Cricket News: ಮೆರೆಯುತ್ತಿದ್ದ ಸೂರ್ಯನ ಆಟ ಮುಗಿಯಿತಾ?? ಖಡಕ್ ಬ್ಯಾಟಿಂಗ್ ಮಾಡುತ್ತಿದ್ದ ಸೂರ್ಯ ಕುಮಾರ್ ಅಂತ್ಯ ಬಂದೆ ಬಿಡ್ತಾ?? ಏನಾಗಿದೆ ಗೊತ್ತೇ?
Comments are closed.