Kannada News: ಕ್ರಾಂತಿ ಬಿಡುಗಡೆಗೆ ಕೆಲವೇ ಕ್ಷಣಗಳು ಇರುವಾಗ ಚಪ್ಪಲಿ ಎಸೆದವರಿಗೆ ಖಡಕ್ ವಾರ್ನಿಂಗ್ ಜೊತೆ ಷಾಕಿಂಗ್ ವಿಚಾರ ಬಯಲಿಗೆಳೆದ ದರ್ಶನ್, ಹಿಂದೆ ಇರುವ ದೊಡ್ಡವರು ಯಾರು??
Kannada News: ನಟ ದರ್ಶನ್ (Darshan) ಅವರ ಬಹುನಿರೀಕ್ಷಿತ ಕ್ರಾಂತಿ (Kranti) ಚಿತ್ರವು ಇಂದು ಭರ್ಜರಿಯಾಗಿ ರಾಜ್ಯದ್ಯಂತ ತೆರೆ ಕಂಡಿದೆ. ಮೊದಲ ದಿನವೇ ತಮ್ಮ ಮೆಚ್ಚಿನ ನಟನ ಚಿತ್ರ ನೋಡಲು ಅಭಿಮಾನಿಗಳು ನೂಕು ನೂಕಲಿನಿಂದ ಚಿತ್ರಮಂದಿರಕ್ಕೆ ಆಗಮಿಸುತ್ತಿದ್ದಾರೆ. ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆಯಿದ್ದು ಇಂದು ಅಭಿಮಾನಿಗಳು ಚಿತ್ರಕ್ಕೆ ಎಷ್ಟು ಮಾರ್ಕ್ಸ್ ಕೊಡುತ್ತಾರೆ ಎಂದು ಕಾದು ನೋಡಬೇಕಿದೆ. ಬರೋಬ್ಬರಿ 22 ತಿಂಗಳ ನಂತರ ನಟ ದರ್ಶನ್ ಅವರ ಚಿತ್ರ ತೆರೆಕಂಡಿದ್ದು ಈ ಚಿತ್ರವನ್ನು ಅಭಿಮಾನಿಗಳು ಹೇಗೆ ತೆಗೆದುಕೊಳ್ಳುತ್ತಾರೆ ಎನ್ನುವ ಕುತೂಹಲ ಮೂಡಿದೆ. ಇನ್ನೂ ನೆನ್ನೆಯಷ್ಟೇ ದರ್ಶನವರು ಯೌಟ್ಯೂಬ್ ವಾಹಿನಿ ಒಂದಕ್ಕೆ ಸಂದರ್ಶನ ನೀಡಿರುವ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಅವರು ಹೊಸಪೇಟೆಯಲ್ಲಿ ಅವರಿಗೆ ಚಪ್ಪಲಿ ಎಸೆದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ತಮಗೆ ಚಪ್ಪಲಿ ಎಸೆದಿದ್ದು ಯಾರು, ಇದರ ಹಿಂದೆ ಯಾರಿದ್ದಾರೆ ಎನ್ನುವುದರ ಕುರಿತಾಗಿ ಮೊದಲ ಬಾರಿಗೆ ಮಾತನಾಡಿದ್ದಾರೆ.
ಡಿಸೆಂಬರ್ 18ರಂದು ಹೊಸಪೇಟೆಯಲ್ಲಿ ಕ್ರಾಂತಿ ಚಿತ್ರದ ಬೊಂಬೆ ಬೊಂಬೆ ಹಾಡಿನ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವೇದಿಕೆ ಮೇಲೆ ನಟಿ ರಚಿತಾರಾಮ್ ಮಾತನಾಡುವಾಗ ಪಕ್ಕದಲ್ಲಿ ನಿಂತಿದ್ದ ದರ್ಶನ್ ಅವರಿಗೆ ಕಿಡಿಗೇಡಿ ಚಪ್ಪಲಿ ಎಸೆದಿದ್ದ. ಆನಂತರ ಅದನ್ನು ಸಮಾಧಾನವಾಗಿಯೇ ತೆಗೆದುಕೊಂಡಿದ್ದ ದರ್ಶನ್ ನಾನು ಇಂಥದ್ದನ್ನೆಲ್ಲ ಬಹಳಷ್ಟು ನೋಡಿದ್ದೇನೆ, ಪರವಾಗಿಲ್ಲ ಚಿನ್ನ ಎಂದೆ ಹೇಳಿದರು. ಆದರೆ ಇದರ ಬಗ್ಗೆ ದರ್ಶನ್ ಅಭಿಮಾನಿಗಳಿಗೆ ಬೇಸರ, ಕೋಪ ಎರಡು ಮೂಡಿತ್ತು. ಅಲ್ಲದೆ ದರ್ಶನ್ಗೆ ಚಪ್ಪಲಿ ಎಸಿದ ಘಟನೆಯ ಕುರಿತು ಸ್ಯಾಂಡಲ್ವುಡ್ ತಾರೆಯರೆಲ್ಲ ಆಕ್ಷೇಪ ವ್ಯಕ್ತಪಡಿಸಿದರು. ಇದೊಂದು ಘಟನೆ ದರ್ಶನ್ ಮತ್ತು ಪುನೀತ್ ಅಭಿಮಾನಿಗಳ ನಡುವೆ ವೈಮನಷ್ಯ ಇನ್ನಷ್ಟು ಹೆಚ್ಚಾಗಲು ಕಾರಣವಾಯಿತು ಎಂದೇ ಹೇಳಬಹುದು. ಇದನ್ನು ಓದಿ.. Kannada News: ಅಂದು ಅಭಿಮಾನಿಯನ್ನು ಮದುವೆಯಾಗಿ ಪೋಸ್ ನೀಡಿದ್ದ ಇಂದು ಖ್ಯಾತ ನಟಿಯ ಹಿಂದೆ ಬಿದ್ದರೆ ವಿಜಯ್: ಆ ಬೆಣ್ಣೆಯಂತಹ ನಟಿ ಯಾರು ಗೊತ್ತೇ? ವಿಚ್ಚೇದನ ಕೊಟ್ಟು ಮದುವೆ ಆಗ್ತಾರಾ?
ಕ್ರಾಂತಿ ಚಿತ್ರ ಇಂದು ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ನೆನ್ನೆ ದರ್ಶನ್ ಅವರ ಸಂದರ್ಶನ ಒಂದು ಡಿ ಮ್ಯೂಸಿಕ್ ಕಂಪನಿ ಯೂಟ್ಯೂಬ್ ವಾಹಿನಿಯಲ್ಲಿ ಪ್ರಸಾರವಾಗಿದೆ. ಇದರಲ್ಲಿ ಸಂದರ್ಶಕರು ದರ್ಶನ್ ಅವರಿಗೆ ಚಪ್ಪಲಿ ಎಸೆದಿರುವ ಘಟನೆಯ ಕುರಿತಾಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಅವರು ಚಪ್ಪಲಿಯಿಂದ ಒಡಿಸಿಕೊಳ್ಳುವಂಥದ್ದು ನಾನು ಏನು ಮಾಡಿಲ್ಲ. ನಾನು ಯಾರಿಗೂ ಯಾವ ಮೋಸ ಅನ್ಯಾಯವನ್ನು ಮಾಡಿಲ್ಲ. ಆದರೂ ನನಗೆ ಹೀಗೆ ಆಗುತ್ತದೆ ಎಂದರೆ ಚಪ್ಪಲಿ ಎಸೆದವನು ಅವನ ಸ್ವಂತ ಬುದ್ಧಿಯಿಂದ ಅಂತೂ ಈ ಕೆಲಸ ಮಾಡಿರುವುದಿಲ್ಲ. ಯಾರೋ ಇದನ್ನು ಹೇಳಿ ಕೊಟ್ಟೆ ಮಾಡಿಸಿದ್ದಾರೆ. ಇದರ ಹಿಂದೆ ಬಹಳ ದೊಡ್ಡವರೇ ಇದ್ದಾರೆ ಎನ್ನುವುದು ನನಗೆ ಚೆನ್ನಾಗಿ ಗೊತ್ತು. ಅವರು ಯಾರು ಎನ್ನುವುದನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಆದಷ್ಟು ಬೇಗ ಇದರ ಹಿಂದೆ ಯಾರೆಲ್ಲ ಇದ್ದಾರೆ ಎಂದು ಖಂಡಿತ ಗೊತ್ತಾಗುತ್ತದೆ ಎಂದು ಅವರು ಹೇಳಿದ್ದಾರೆ. ದರ್ಶನವರ ಈ ಮಾತುಗಳನ್ನು ಕೇಳಿ ಅಭಿಮಾನಿಗಳಿಗೆ ಈ ಘಟನೆಯ ಹಿಂದೆ ಇರುವುದು ಯಾರು ಎನ್ನುವ ಕುತೂಹಲ ಮತ್ತು ಪ್ರಶ್ನೆ ಮೂಡಿದೆ. ಈ ಕುರಿತಾಗಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ಇದನ್ನು ಓದಿ..Kannada News: ಹಣಕ್ಕಾಗಿ ಅಡ್ಡ ದಾರಿ ಹಿಡಿದು, ರೆಡ್ ಹ್ಯಾಂಡ್ ಆಗಿ ಹೋಟೆಲ್ ನಲ್ಲಿ ಸಿಕ್ಕಿ ಬಿದ್ದಿದ ನಟಿ ಈಗ ಏನಾಗಿದ್ದಾರೆ ಗೊತ್ತೇ? ಇವೆಲ್ಲ ಎಲ್ಲಿಂದ ಬರ್ತಾರೆ.?
Comments are closed.