Kannada News: ಹೋಗುತ್ತಿದ್ದ ಕಾರ್ ಅನ್ನು ದಿಡೀರ್ ಎಂದು ನಿಲ್ಲಿಸಿ, ಹೆಣ್ಣುಮಕ್ಕಳಿಗೆ ಕೈ ಮುಗಿದು ದರ್ಶನ್ ಹೇಳಿದ್ದೇನು ಗೊತ್ತೇ??

Kannada News: ನಟ ಚಾಲೆಂಜಿಂಗ್ ಸ್ಟಾರ್ Darshan ಒಂದಿಲ್ಲೊಂದು ಕಾರಣಗಳಿಗೆ ಸದಾ ಸುದ್ದಿಯಾಗುತ್ತಲೇ ಇರುತ್ತಾರೆ. ಒಂದರ್ಥದಲ್ಲಿ ಜನಪ್ರಿಯತೆ ಮತ್ತು ವಿವಾದ ಎರಡು ಕೂಡ ಅವರ ಜೊತೆಗೆ ಬಿಟ್ಟುಬಿಡದೆ ಇರುತ್ತವೆ ಎಂದು ಹೇಳಬಹುದು. ತಮ್ಮ ನಟನೆ ಮತ್ತು ವ್ಯಕ್ತಿತ್ವದ ಕಾರಣದಿಂದಾಗಿ ಕರ್ನಾಟಕದಾದ್ಯಂತ ನಟ ದರ್ಶನ್ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಡಿ ಬಾಸ್ ಎಂದೇ ಕರೆಯುತ್ತಾರೆ. ದರ್ಶನ್ ಅವರಷ್ಟು ಮಾಸ್ ಫ್ಯಾನ್ ಫಾಲೋಯಿಂಗ್ ಹೊಂದಿರುವ ಮತ್ತೊಬ್ಬ ನಟ ಇಲ್ಲ ಎಂದರೆ ತಪ್ಪಾಗಲಾರದು. ದರ್ಶನ್ ಎಂದರೆ ಏನನ್ನು ಬೇಕಾದರೂ ಮಾಡಬಲ್ಲ ಅಪ್ಪಟ ಅಭಿಮಾನಿಗಳನ್ನು ಅವರು ಪಡೆದಿದ್ದಾರೆ. ಅಂದ ಹಾಗೆ ಇತ್ತೀಚಿಗೆ ಕ್ರಾಂತಿ (Kranthi) ಸಿನಿಮಾದ ಪ್ರಚಾರದ ವೇಳೆ ಕಾರಿನಲ್ಲಿ ತೆರಳುತ್ತಿದ್ದಾಗ ನಟ ದರ್ಶನ್ ಏಕಾಏಕಿ ಕಾರು ನಿಲ್ಲಿಸಿ ಯಾವುದೋ ಗ್ರಾಮದ ಮಹಿಳೆಯರನ್ನು ಮಾತನಾಡಿಸಿರುವ ವಿಡಿಯೋ ಸಖತ್ ವೈರಲ್ ಆಗಿದೆ.

ನಟ ದರ್ಶನ್ ತಮ್ಮ ಸರಳತೆಯಿಂದ ಹೆಸರು ಮಾಡಿದವರು. ಕಷ್ಟ ಎಂದು ಬಂದವರಿಗೆ ಕೈಲಾದಷ್ಟು ಸಹಾಯ ಮಾಡುವುದರಲ್ಲಿ ದರ್ಶನ್ ಸದಾ ಮುಂದು. ಹಾಗೆ ತಾವು ಸಹಾಯ ಮಾಡಿದ್ದನ್ನು ಅವರು ಎಲ್ಲಿಯೂ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಅದೆಷ್ಟೋ ವೇದಿಕೆಗಳಲ್ಲಿ ಅವರಿಂದ ಸಹಾಯ ಪಡೆದವರು ಏನನ್ನಾದರೂ ಹೇಳಲು ಬಂದಾಗ ಅವರನ್ನು ತಡೆದು ಏನನ್ನು ಹೇಳದಂತೆ ಗದರುತ್ತಾರೆ. ಅಷ್ಟರಮಟ್ಟಿಗೆ ಅವರು ಮಾಡಿದ ಸಹಾಯಕ್ಕೆ ಏನನ್ನು ಬಯಸುವುದಿಲ್ಲ. ಹಾಗೆಯೇ ದರ್ಶನ್ ತಮಗೆ ಅನಿಸಿದ್ದನ್ನು ನೇರನೇರ ಹೇಳಿಬಿಡುತ್ತಾರೆ. ಇದು ಕೆಲವರಿಗೆ ಇಷ್ಟವಾದರೆ, ಇನ್ನೂ ಯಾವ ವ್ಯಕ್ತಿಯ ಕುರಿತು ನೇರವಾಗಿ ಮಾತನಾಡುತ್ತಾರೋ ಅವರಿಗೆ ಇರಿಸು ಮುರಿಸು ಆಗುತ್ತದೆ. ಆದರೆ ಇದೇನೇ ಇರಲಿ ದರ್ಶನ್ ಅವರು ನೇರ ನಿಷ್ಠುರದ ವ್ಯಕ್ತಿತ್ವದವರು ಎಂದು ಹೇಳಬಹುದಾಗಿದೆ. ಇದನ್ನು ಓದಿ..Kannada News: ಬಲವಂತ ಮಾಡಿ ದಿವ್ಯ ಸುರೇಶ್ ರವರನ್ನು ಕರೆದು ತಂದಿರುವ ವಾಹಿನಿ, ತ್ರಿಪುರ ಸುಂದರಿಗೆ ಕೊಡುತ್ತಿರುವ ಸಂಭಾವನೆ ಎಷ್ಟು ಗೊತ್ತೇ??

kannada news darshan simplicity | Kannada News: ಹೋಗುತ್ತಿದ್ದ ಕಾರ್ ಅನ್ನು ದಿಡೀರ್ ಎಂದು ನಿಲ್ಲಿಸಿ, ಹೆಣ್ಣುಮಕ್ಕಳಿಗೆ ಕೈ ಮುಗಿದು ದರ್ಶನ್ ಹೇಳಿದ್ದೇನು ಗೊತ್ತೇ??
Kannada News: ಹೋಗುತ್ತಿದ್ದ ಕಾರ್ ಅನ್ನು ದಿಡೀರ್ ಎಂದು ನಿಲ್ಲಿಸಿ, ಹೆಣ್ಣುಮಕ್ಕಳಿಗೆ ಕೈ ಮುಗಿದು ದರ್ಶನ್ ಹೇಳಿದ್ದೇನು ಗೊತ್ತೇ?? 2

ಸಾಕಷ್ಟು ತಿಂಗಳುಗಳ ನಂತರ ದರ್ಶನ್ ರವರ ಮತ್ತೊಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಅವರ ಕ್ರಾಂತಿ ಚಿತ್ರ ಬಹು ನಿರೀಕ್ಷೆಯನ್ನು ಹುಟ್ಟು ಹಾಕಿದ್ದು, ಇದೇ ಜನವರಿ 26ರಂದು ಭರ್ಜರಿಯಾಗಿ ತೆರೆ ಕಾಣಲಿದೆ. ಇನ್ನು ಇಡೀ ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯದಲ್ಲಿ ಮಗ್ನವಾಗಿದೆ. ಈಗಾಗಲೇ ಚಿತ್ರದ ಮೂರು ಹಾಡುಗಳನ್ನು ಭರ್ಜರಿಯಾಗಿ ತಂಡ ಬಿಡುಗಡೆಗೊಳಿಸಿದೆ. ಇನ್ನು ದರ್ಶನ್ ರವರು ಕ್ರಾಂತಿ ಚಿತ್ರದ ಪ್ರಚಾರದ ವೇಳೆ ಯಾವುದೋ ಗ್ರಾಮದ ಮೂಲಕ ಕಾರಿನಲ್ಲಿ ಹೋಗುತ್ತಿದ್ದಾಗ ಅಲ್ಲಿನ ಮಹಿಳೆಯರನ್ನು ಕಂಡು ಕಾರು ನಿಲ್ಲಿಸಿ ಅವರಿಗೆ ಕೈ ಮುಗಿದಿರುವ ವಿಡಿಯೋ ಒಂದು ವೈರಲ್ ಆಗಿದೆ. ಕೆಲಸದ ನಿಮಿತ್ತ ಕಾರಿನಲ್ಲಿ ತೆರಳುತ್ತಿದ್ದ ನಟ ದರ್ಶನ್ ಅವರು ಕಾರು ನಿಲ್ಲಿಸಿ ಆ ಗ್ರಾಮದ ಮಹಿಳೆಯರಿಗೆ ಕೈ ಮುಗಿದು ಬಹಳ ಗೌರವ ಮತ್ತು ಪ್ರೀತಿಯಿಂದ ಮಾತನಾಡಿರುವ ವಿಡಿಯೋ ಸದ್ದು ಮಾಡುತ್ತಿದೆ. ಡಿ ಬಾಸ್ ದರ್ಶನ್ ಅವರ ಈ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಓದಿ.. Kannada Astrology: ಈ ನಾಲ್ಕು ರಾಶಿಗಳು ಎಂದರೆ ಹನುಮಂತನಿಗೆ ಅಚ್ಚು ಮೆಚ್ಚು. ಕುದ್ದು ಅವನೇ ಕಾಯಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?

Comments are closed.