Kannada News: ಬಲವಂತ ಮಾಡಿ ದಿವ್ಯ ಸುರೇಶ್ ರವರನ್ನು ಕರೆದು ತಂದಿರುವ ವಾಹಿನಿ, ತ್ರಿಪುರ ಸುಂದರಿಗೆ ಕೊಡುತ್ತಿರುವ ಸಂಭಾವನೆ ಎಷ್ಟು ಗೊತ್ತೇ??
Kannada News: ಕಲರ್ಸ್ ಕನ್ನಡದಲ್ಲಿ (Colors Kannada) ಇನ್ನು ಕೆಲವೇ ದಿನಗಳಲ್ಲಿ ಬಹುನಿರೀಕ್ಷಿತ ತ್ರಿಪುರ ಸುಂದರಿ (Tripura Sundari) ಎನ್ನುವ ಧಾರವಾಹಿ ಶುರುವಾಗಲಿದೆ. ಸದ್ಯ ಪ್ರಸಾರವಾಗುತ್ತಿರುವ ಬಿಗ್ ಬಾಸ್ (Bigg Boss) ಮುಗಿದ ನಂತರ ಆ ಸಮಯಕ್ಕೆ ಈ ಧಾರಾವಾಹಿ ಪ್ರಸಾರಗೊಳ್ಳಲಿದೆ. ಅಂದ ಹಾಗೆ ಈ ದಾರವಾಹಿಯಲ್ಲಿ ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ (Divya Suresh) ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಸೀಸನ್ ಬಿಗ್ ಬಾಸ್ ಮುಗಿದಾಗಲೇ ಇಂತಹದೊಂದು ಧಾರವಾಹಿ ಚಿತ್ರೀಕರಣ ನಡೆಯುತ್ತಿರುವುದಾಗಿ ಸುದ್ದಿ ಬಂದಿತ್ತು. ಆದರೂ ಒಂದು ವರ್ಷಗಳಿಗಿಂತಲೂ ಹೆಚ್ಚು ಕಾಲ ಈ ಧಾರಾವಾಹಿ ಟಿವಿ ಪರದೆ ಮೇಲೆ ಕಾಣಿಸಿಕೊಳ್ಳಲು ತೆಗೆದುಕೊಂಡಿದ್ದು ಎಂದು ಹೇಳಬಹುದು. ಕಿರುತೆರೆಯಲ್ಲಿ ಹಿಂದೆಂದೂ ಬರದ ರೀತಿಯ ಕಥೆಯೊಂದನ್ನು ಕಲರ್ಸ್ ಕನ್ನಡ ತನ್ನ ವೀಕ್ಷಕರಿಗೆ ಹೇಳಲು ಸಿದ್ಧವಾಗಿದೆ. ಇದೇ ಜನವರಿ ಎರಡರಿಂದ ಕಲರ್ಸ್ ಕನ್ನಡದಲ್ಲಿ ತ್ರಿಪುರ ಸುಂದರಿ ವಿಭಿನ್ನ ಕಥೆ ಪ್ರಸಾರಗೊಳ್ಳಲಿದೆ. ಅಂದ ಹಾಗೆ ಈ ವಿಭಿನ್ನ ಕಥಾ ಹಂದರ ಹೊಂದಿರುವ ತ್ರಿಪುರ ಸುಂದರಿಯಲ್ಲಿ ಕಥಾ ನಾಯಕಿಯಾಗಿ ಅಭಿನಯಿಸಲು ದಿವ್ಯ ಸುರೇಶ್ ಪಡೆಯುತ್ತಿರುವ ಸಂಭಾವನೆ ಸಾಮಾನ್ಯವೇನಲ್ಲ.
ಇಷ್ಟು ದಿನ ಸಾಮಾನ್ಯ ಕಥೆಗಳನ್ನು ಕೇಳಿದ್ದ ವೀಕ್ಷಕರು ಇದೇ ಮೊದಲ ಬಾರಿ ಗಂಧರ್ವ ಲೋಕದ ಕಥೆಯನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಇಂತಹದೊಂದು ವಿಭಿನ್ನ ಪ್ರಯತ್ನಕ್ಕೆ ಕಲರ್ಸ್ ಕನ್ನಡ ಮುಂದಾಗಿದೆ. ಅಂದ ಹಾಗೆ ಒಂದು ವರ್ಷದ ಹಿಂದೆಯೇ ಈ ಕಥೆ ಸೆಟ್ಟೇರಿತ್ತು. ಆದರೆ ಕೊನೆಗೂ ಇದೀಗ ಈ ದಾರವಾಹಿ ಪ್ರೇಕ್ಷಕರ ಕಣ್ಣೆದುರಿಗೆ ಬರಲು ಇನ್ನು ದಿನಗಣನೆ ಶುರುವಾಗಿದೆ. ಈ ಧಾರವಾಹಿಯಲ್ಲಿ ದೊಡ್ಡ ತಾರಾ ಬಳಗವೇ ಇದ್ದು ಮೊದಲ ಬಾರಿಗೆ ಪ್ರಣಯರಾಜ ಶ್ರೀನಾಥ್ ಅವರ ಮಗ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಅಲ್ಲದೆ ನಟಿ ಸ್ಪರ್ಶ ರೇಖಾ (Sparsha Rekha) ಅವರು ಕೂಡ ವಿಶೇಷ ಪಾತ್ರವೊಂದನ್ನು ಈ ಧಾರವಾಹಿಯಲ್ಲಿ ಮಾಡಿದ್ದಾರೆ. ಇನ್ನೂ ಸಾಕಷ್ಟು ಕಲಾವಿದರು ಈ ಧಾರಾವಾಹಿ ಬಳಗದಲ್ಲಿದ್ದು ನಾಯಕನ ಪಾತ್ರವನ್ನು ನನ್ನರಸಿ ರಾಧೆ ಖ್ಯಾತಿಯ ಅಭಿನವ್ ಮಾಡುತ್ತಿದ್ದಾರೆ. ಇದನ್ನು ಓದಿ..Kannada News: ಹುಡುಗರ ಮೈಂಡ್ ಬ್ಲಾಕ್ ಆಗುವಂತೆ, ಚಳಿಗಾಲಯದಲ್ಲಿಯೂ ಬಿಸಿ ಹೆಚ್ಚಿಸುವ ವಿಡಿಯೋ ಬಿಡುಗಡೆ ಮಾಡಿದ ಕೀರ್ತಿ: ಯೋಗ ಮಾಡಿದ್ದು ಹೇಗಿದೆ ಗೊತ್ತೇ??
ಪ್ರಾಣಪಾಯವಿರುವ ಗಂಧರ್ವ ಲೋಕದ ಕಥಾನಾಯಕನನ್ನು ಆತನ ತಾಯಿ ಅವನ ಸುರಕ್ಷತೆಗಾಗಿ ಭೂಮಿಗೆ ಕಳುಹಿಸಿಕೊಡುತ್ತಾಳೆ. ಆನಂತರ ಆತನನ್ನು ಹುಡುಕುವುದಕ್ಕಾಗಿ ಗಂಧರ್ವ ಕನ್ಯೆ ಆಮ್ರಪಾಲಿ (ನಾಯಕಿ) ಭೂಲೋಕಕ್ಕೆ ಬಂದಾಗ ಯಾವ ರೀತಿ ಕಥೆ ತಿರುವನ್ನು ಪಡೆದುಕೊಳ್ಳುತ್ತದೆ ಎನ್ನುವುದೇ ತ್ರಿಪುರ ಸುಂದರಿ. ಈಗಾಗಲೇ ಈ ಧಾರಾವಾಹಿಯ ಪ್ರೋಮೋಗಳು ಬಿಡುಗಡೆಗೊಂಡಿದ್ದು ವೀಕ್ಷಕರು ಒಳ್ಳೆಯ ರೆಸ್ಪಾನ್ಸ್ ನೀಡುತ್ತಿದ್ದಾರೆ. ಅಂದ ಹಾಗೆ ಈ ಧಾರವಾಹಿಯಲ್ಲಿ ನಟಿಸಲು ದಿವ್ಯಾ ಸುರೇಶ್ ಅವರಿಗೆ ಕಲರ್ಸ್ ಕನ್ನಡ ಭರ್ಜರಿ ಸಂಭಾವನೆಯನ್ನು ನೀಡುತ್ತಿದೆ. ಪ್ರತಿ ಒಂದು ಕಂತಿಗೆ ದಿವ್ಯ ಸುರೇಶ್ ಅವರಿಗೆ 60 ಸಾವಿರ ರೂಪಾಯಿ ನೀಡುತ್ತಿದ್ದಾರೆ. ಅಂದರೆ ಒಂದು ಎಪಿಸೋಡ್ ನಟಿಸುವುದಕ್ಕಾಗಿ ದಿವ್ಯ ಸುರೇಶ್ 60 ಸಾವಿರ ರೂಪಾಯಿ ಸಂಭಾವನೆಯ ರೂಪದಲ್ಲಿ ಪಡೆದುಕೊಳ್ಳುತ್ತಿದ್ದಾರೆ. ಇದನ್ನು ಓದಿ.. Kannada Astrology: ಈ ನಾಲ್ಕು ರಾಶಿಗಳು ಎಂದರೆ ಹನುಮಂತನಿಗೆ ಅಚ್ಚು ಮೆಚ್ಚು. ಕುದ್ದು ಅವನೇ ಕಾಯಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?
Comments are closed.