Kannada News: ಆಗಿನ ಕಾಲದಲ್ಲಿಯೇ ಅಣ್ಣಾವ್ರ ಮದುವೆ ಕಾರ್ಡ್ ನಲ್ಲಿ ಏನೆಲ್ಲಾ ಬರೆದಿದ್ದರು ಎಂದರೆ ಮೈಯೆಲ್ಲಾ ಜುಮ್ ಅನ್ನುತ್ತದೆ. ಏನು ಬರೆದಿದ್ದಾರೆ ಗೊತ್ತೇ??

Kannada News: ಡಾಕ್ಟರ್ ರಾಜಕುಮಾರ್ (Dr Rajkumar) ಅವರು ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಸರ್ವಶ್ರೇಷ್ಠ ನಟ. ಭಾರತ ಕಂಡ ಅದೆಷ್ಟೋ ಸ್ಟಾರ್ ನಟರು ರಾಜಕುಮಾರ್ ಅವರ ಅಭಿಮಾನಿಗಳಾಗಿದ್ದರು. ಅವರ ನಟನೆಯನ್ನು ನೋಡಿ ನಟನೆಯ ಪಾಠ ಕಲಿಯುತ್ತಿದ್ದರು. ರಾಜಕುಮಾರ್ ಎಂದರೆ ಕನ್ನಡ, ಕನ್ನಡ ಎಂದರೆ ರಾಜಕುಮಾರ್ ಎಂಬ ಮಟ್ಟಿಗೆ ಅವರು ಕನ್ನಡ ನಾಡಿನಲ್ಲಿ ಹಾಸು ಹೊಕ್ಕಾಗಿದ್ದರು. ರಾಜಕುಮಾರ್ ಮಾತನಾಡುವ ಕನ್ನಡವೇ ಸರಿಯಾದ ಕನ್ನಡ ಎನ್ನುವಷ್ಟರ ಮಟ್ಟಿಗೆ ಅವರು ಅಷ್ಟು ಸುಂದರವಾಗಿ ಕನ್ನಡದಲ್ಲಿ ಮಾತನಾಡುತ್ತಾ ನಟಿಸುತ್ತಿದ್ದರು. ಅಭಿಮಾನಿಗಳು ಅವರನ್ನು ನಟಸಾರ್ವಭೌಮ, ಅಣ್ಣಾವ್ರು, ಅಪ್ಪಾಜಿ ಎಂದೆಲ್ಲ ಕರೆಯುತ್ತಿದ್ದರು. ಸರಳತೆಯ ಮತ್ತೊಂದು ರೂಪವೇ ರಾಜಕುಮಾರ್ ಎಂಬ ಹಾಗೆ ಬದುಕಿದವರು ವರನಟ.

ಎಷ್ಟೇ ವರ್ಷಗಳು ಕಳೆದರೂ ರಾಜಕುಮಾರ್ ಕನ್ನಡ ಭಾಷೆ ಇರುವವರೆಗೂ, ಕನ್ನಡ ಚಿತ್ರರಂಗ ಉಳಿದಿರುವವರೆಗೂ ಯಾವತ್ತಿಗೂ ಸರ್ವ ಶ್ರೇಷ್ಠ ನಟನಾಗಿ ವ್ಯಕ್ತಿಯಾಗಿ ಉಳಿದಿರುತ್ತಾರೆ. ಇತ್ತೀಚಿಗೆ ಡಾ. ರಾಜಕುಮಾರ್ ಅವರ ಮದುವೆಯ ಲಗ್ನ ಪತ್ರಿಕೆ ಎಲ್ಲೆಡೆ ವೈರಲ್ ಆಗುತ್ತಿದೆ. ಸುಮಾರು 69 ವರ್ಷಗಳಷ್ಟು ಹಳೆಯ ಲಗ್ನ ಪತ್ರಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಅಷ್ಟೊಂದು ಹಳೆಯ ಲಗ್ನ ಪತ್ರಿಕೆಯ ಫೋಟೋ ಇದೀಗ ನೋಡಿ ಇದೀಗ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ. ಆಗಿನ ಕಾಲದಲ್ಲಿ ಯಾವ ರೀತಿ ಲಗ್ನಪತ್ರಿಕೆಯನ್ನು ಮುದ್ರಿಸಲಾಗುತ್ತಿತ್ತು, ಮತ್ತು ಲಗ್ನ ಪತ್ರಿಕೆಯಲ್ಲಿ ಏನೆಲ್ಲ ಬರೆದಿದ್ದಾರೆ ಎನ್ನುವುದನ್ನು ನೋಡಿ ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ಅಂದ ಹಾಗೆ ರಾಜಕುಮಾರ್ ರವರು ಸಿನಿಮಾ ರಂಗಕ್ಕೆ ಬರುವುದಕ್ಕೂ ಮೊದಲೇ ಪಾರ್ವತಮ್ಮ (Parvathamma Rajkumar) ಅವರೊಂದಿಗೆ ಮದುವೆಯಾಗಿದ್ದರು. ಆಗಿನ್ನು ಅವರ ಹೆಸರು ಮುತ್ತುರಾಜ್ ಎಂದಿತ್ತು. ಇದನ್ನು ಓದಿ..Biggboss Kannada: ಬಿಗ್ ಬಾಸ್ ವಿರುದ್ಧವವೇ ನಿಂತ ಸನ್ಯಾ ಐಯ್ಯರ್. ದಿಡೀರ್ ಎಂದು ಬಿಗ್ ಬಾಸ್ ಬಗ್ಗೆ ಹೇಳಿದ್ದೇನು ಗೊತ್ತೇ?? ಕೆಂಡ ಕಾರಿದ್ದು ಯಾಕೆ ಗೊತ್ತೇ?

kannada news wedding invitation | Kannada News: ಆಗಿನ ಕಾಲದಲ್ಲಿಯೇ ಅಣ್ಣಾವ್ರ ಮದುವೆ ಕಾರ್ಡ್ ನಲ್ಲಿ ಏನೆಲ್ಲಾ ಬರೆದಿದ್ದರು ಎಂದರೆ ಮೈಯೆಲ್ಲಾ ಜುಮ್ ಅನ್ನುತ್ತದೆ. ಏನು ಬರೆದಿದ್ದಾರೆ ಗೊತ್ತೇ??
Kannada News: ಆಗಿನ ಕಾಲದಲ್ಲಿಯೇ ಅಣ್ಣಾವ್ರ ಮದುವೆ ಕಾರ್ಡ್ ನಲ್ಲಿ ಏನೆಲ್ಲಾ ಬರೆದಿದ್ದರು ಎಂದರೆ ಮೈಯೆಲ್ಲಾ ಜುಮ್ ಅನ್ನುತ್ತದೆ. ಏನು ಬರೆದಿದ್ದಾರೆ ಗೊತ್ತೇ?? 2

ಸುಮಾರು 69 ವರ್ಷಗಳ ಹಳೆಯ ಮದುವೆಯ ಆಮಂತ್ರಣ ಪತ್ರಿಕೆ ಇದೀಗ ಸಿಕ್ಕಿದೆ. ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ರವರ ವಿವಾಹಕ್ಕಾಗಿ ಅಚ್ಚಾಗಿದ್ದ ಲಗ್ನಪತ್ರಿಕೆ ಈಗ ಎಲ್ಲೆಡೆ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಅಂದಹಾಗೆ ಈ ಲಗ್ನಪತ್ರಿಕೆಯಲ್ಲಿ ಸಾಲಿಗ್ರಾಮದ ಸಂಗೀತ ಮಾಸ್ಟರ್ ಅಪ್ಪಾಜಿ ಗೌಡ ಅವರ ಪುತ್ರಿ ಆಗಿರುವ ಪಾರ್ವತಿ ಎಂಬ ವಧುವಿಗೂ ನಾಟಕದ ಅಭಿನಯ ಶಿರೋಮಣಿ ಪುಟ್ಟಸ್ವಾಮೇ ಗೌಡರ ಪುತ್ರ ಮುತ್ತುರಾಜು ಎಂಬ ವರನ ವಿವಾಹ ಮಹೋತ್ಸವವನ್ನು ನಂಜನಗೂಡಿನ ತಾಣಪ್ಪರವರ ಛತ್ರದಲ್ಲಿ ನಡೆಸಲು ಗುರು ಹಿರಿಯರು ನಿಶ್ಚಯಶಿಸಿದ್ದಾರೆ ಎಂದು ಬರೆಯಲಾಗಿದೆ. ಜೂನ್ 25 ರಂದು ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮ ಹಸೆಮಣೆ ಏರಿದ್ದರು. ಇದನ್ನು ಓದಿ.. Biggboss Kannada: ಮನೆಯಲ್ಲಿ ಒಂದಾದ ಪ್ರಶಾಂತ್ – ರೂಪೇಶ್ ರಾಜಣ್ಣ: ಇಷ್ಟು ದಿವಸ ಇದ್ದಂಗೆ ಇವಾಗ ಇಲ್ಲ. ಯಾಕೆ ಗೊತ್ತೇ??

Comments are closed.