Kannada News: ಜುಜುಬಿ ಹಣ ಖರ್ಚು ಮಾಡಿ ಮದುವೆ ಮುಗಿಸಿಕೊಂಡ ಹರಿಪ್ರಿಯಾ ಹಾಗೂ ವಸಿಷ್ಠ: ಮದುವೆಗೆ ಖರ್ಚು ಮಾಡಿದ್ದು ಎಷ್ಟು ಗೊತ್ತೇ??
Kannada News: ಕನ್ನಡ ಚಿತ್ರರಂಗದ ಹೊಸ ಜೋಡಿ ನಟ ವಸಿಷ್ಠ ಸಿಂಹ (Vasishta Simha) ಮತ್ತು ನಟಿ ಹರಿಪ್ರಿಯಾ (Haripriya) ಜೋಡಿ. ಇವರಿಬ್ಬರು ಮದುವೆ ಆಗುತ್ತಾರೆ, ಪ್ರೀತಿ ಮಾಡುತ್ತಿದ್ದಾರೆ ಎನ್ನುವ ಒಂದು ಸಣ್ಣ ಸುಳಿವು ಕೂಡ ಇರಲಿಲ್ಲ. ಇದೀಗ ಈ ಜೋಡಿ, ಜನವರಿ 26ರಂದು ಮೈಸೂರಿನಲ್ಲಿ ಮದುವೆಯಾಗಿದ್ದಾರೆ. ಈ ಜೋಡಿಗೆ ಸ್ಯಾಂಡಲ್ ವುಡ್ ನ ತಾರೆಯರು ವಿಶ್ ಮಾಡಿದ್ದಾರೆ. ಬಹಳ ಸಿಂಪಲ್ ಆಗಿ ಮದುವೆಯಾದ ಈ ಜೋಡಿ ತಮ್ಮ ಮದುವೆಗಾಗಿ ಖರ್ಚು ಮಾಡಿದ್ದು ಎಷ್ಟು ಹಣ ಗೊತ್ತಾ?
ಒಂದೆರಡು ತಿಂಗಳುಗಳ ಹಿಂದೆ ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ಏರ್ ಪೋರ್ಟ್ ನಲ್ಲಿ ಕೈಕೈ ಹಿಡಿದು ಹೋಗುತ್ತಿರುವ ಫೋಟೋಗಳು ವೈರಲ್ ಆಗಿದ್ದವು, ಆಗಿನಿಂದ ಇವರಿಬ್ಬರು ಪ್ರೀತಿ ಮಾಡುತ್ತಿದ್ದಾರೆ ಎನ್ನುವ ವರದಿ ಕೇಳಿಬಂದಿತ್ತು. ಅದಾದ ಕೆಲವೇ ದಿನಗಳಲ್ಲಿ ಇಬ್ಬರು ಎಂಗೇಜ್ಮೆಂಟ್ ಮಾಡಿಕೊಂಡು, ತಮ್ಮ ಪ್ರೀತಿಯನ್ನು ಅಧಿಕೃತ ಗೊಳಿಸಿದರು. ಅಷ್ಟೇ ಬೇಗ ಕುಟುಂಬದವರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾದರು. ವಸಿಷ್ಠ ಸಿಂಹ ಮೈಸೂರಿನವರು ಹಾಗಾಗಿ ಈ ಜೋಡಿಯ ಮದುವೆ ಮೈಸೂರಿನ ಗಣಪತಿ ಸಚ್ಚಿದಾದನಂದ ಆಶ್ರಮದಲ್ಲಿ ನಡೆಯಿತು. ಇದನ್ನು ಓದಿ..Kannada News: ಚೆನ್ನಾಗಿ ಇರುವ ಸಿನೆಮಾಗೆ ಸಾಲು ಸಾಲು ಹೊಡೆತ: ದರ್ಶನ್ ಗೆ ಮತ್ತೊಂದು ಬಿಗ್ ಶಾಕ್. ಚಿತ್ರದ ಪರಿಸ್ಥಿತಿ ದಿನೇ ದಿನೇ ಏನಾಗಿದೆ ಗೊತ್ತೇ?
ಈ ಅಪರೂಪದ ಜೋಡಿಯ ಮದುವೆಗೆ ಚಂದನವನದ ಖ್ಯಾತ ಕಲಾವಿದರು ಬಂದು ವಿಶ್ ಮಾಡಿದರು, ಅವರಿಬ್ಬರ ಕುಟುಂಬದವರು ಹಾಗೂ ಸ್ನೇಹಿತರು ಸಹ ಇದ್ದರು. ಈ ಮದುವೆ ಬಗ್ಗೆ ನೆಟ್ಟಿಗರ ವಲಯದಲ್ಲಿ ಚರ್ಚೆಯಾಗುತ್ತಿದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳ ಮದುವೆ ಎಂದರೆ, ಕೋಟಿ ಕೋಟಿ ಹಣ ಖರ್ಚು ಮಾಡಿ, ಆಡಂಬರ ವೈಭವದಿಂದ ಮದುವೆಯಾಗುತ್ತಾರೆ. ಆದರೆ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ, ತಮ್ಮ ಮದುವೆಗೆ ಖರ್ಚು ಮಾಡಿರುವುದು ಕೇವಲ 2 ಕೋಟಿ ರೂಪಾಯಿಗಳು ಮಾತ್ರ. ಈ ಜೋಡಿಯ ಮದುವೆ ಬಹಳ ವಿಶೇಷವಾಗಿದೆ, ಇದು ಒಳ್ಳೆಯ ವಿಚಾರ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದನ್ನು ಓದಿ..Lakshana: ಬಿಗ್ ನ್ಯೂಸ್: RJ ಸಖಿ ನಕ್ಷತ್ರ ಎಂದು ಗೊತ್ತಾಗಿಲ್ಲ: ಹಾಗಿದ್ದರೆ ಕೊನೆಯ ಎಪಿಸೋಡ್ ನಲ್ಲಿ ತೋರಿಸಿದ್ದು ಏನು? ಅಸಲಿ ಕಥೆ ಏನು ಗೊತ್ತೇ?
Comments are closed.