Lakshana: ಬಿಗ್ ನ್ಯೂಸ್: RJ ಸಖಿ ನಕ್ಷತ್ರ ಎಂದು ಗೊತ್ತಾಗಿಲ್ಲ: ಹಾಗಿದ್ದರೆ ಕೊನೆಯ ಎಪಿಸೋಡ್ ನಲ್ಲಿ ತೋರಿಸಿದ್ದು ಏನು? ಅಸಲಿ ಕಥೆ ಏನು ಗೊತ್ತೇ?
Lakshana: ಲಕ್ಷಣ ಧಾರವಾಹಿಯಲ್ಲಿ ಹೊಸ ಹೊಸ ಟ್ವಿಸ್ಟ್ ಗಳನ್ನು ನೀಡುವ ಮೂಲಕ ವೀಕ್ಷಕರಲ್ಲಿ ಕುತೂಹಲ ಹೆಚ್ಚು ಮಾಡಲಾಗುತ್ತಿದೆ. ಈ ಧಾರವಾಹಿಯಲ್ಲಿ ಮೇಜರ್ ಟ್ವಿಸ್ಟ್ ಒಂದನ್ನು ಶುಕ್ರವಾರದ ಸಂಚಿಕೆಯಲ್ಲಿ ನೀಡಲಾಗಿತ್ತು. ನಿಜವಾದ ಆರ್.ಜೆ ಸಖಿ ಯಾರು ಎನ್ನುವ ವಿಚಾರ ಭೂಪತಿ ಮುಂದೆ ರಿವೀಲ್ ಆಗಿತ್ತು.. ಆದರೆ ಈಗ ಬೇರೆಯದೇ ಟ್ವಿಸ್ಟ್ ಒಂದನ್ನು ನೀಡಲಾಗಿದೆ, ಅಸಲಿಗೆ ಆರ್.ಜೆ ಸಖಿ ನಕ್ಷತ್ರ ಎಂದು ಭೂಪತಿ ಅವರಿಗೆ ಗೊತ್ತೇ ಆಗಿಲ್ಲ.
ಲಕ್ಷಣ ಧಾರವಾಹಿಯಲ್ಲಿ ಆರ್.ಜೆ ಸಖಿ ಶೋ ಶುರುವಾಗಿ, ಅದನ್ನು ಭೂಪತಿ ತುಂಬಾ ಇಷ್ಟಪಡುತ್ತಿದ್ದ, ಆದರೆ ಆರ್.ಜೆ ಸಖಿ ತಾನೇ ಎಂದು ಶ್ವೇತಾ ಸುಳ್ಳು ಹೇಳಿದ್ದಳು. ಈಗ ಇದ್ದಕ್ಕಿದ್ದ ಹಾಗೆ, ಆರ್.ಜೆ ಸಖಿ ಶೋ ರೀಸ್ಟಾರ್ಟ್ ಮಾಡೋಣ ಎಂದು ಭೂಪತಿ ಎಫ್.ಎಂ ಆಫೀಸ್ ಗೆ ನಕ್ಷತ್ರ ಜೊತೆಗೆ ಬರುತ್ತಾನೆ. ನಕ್ಷತ್ರ ತಾನೇ ಆರ್.ಜೆ ಸಖಿ ಎಂದು ಭೂಪತಿಗೆ ಗೊತ್ತಾಗಿದೆ ಎಂದುಕೊಂಡು ಖುಷಿ ಪಡುತ್ತಾಳೆ. ಆದರೆ ಭೂಪತಿಗೆ ಗೊತ್ತಾಗಿರುವುದಿಲ್ಲ. ಶ್ವೇತಾ ಅದೇ ಸಮಯಕ್ಕೆ ತನ್ನ ಬಂಡವಾಳ ಬಯಲಾಗುತ್ತದೆ ಎಂದುಕೊಂಡು, ಹುಷಾರಿಲ್ಲ ಶೋ ಶುರುಮಾಡಲು ಆಗುವುದಿಲ್ಲ ಎಂದು ನಾಟಕ ಅಡುತ್ತಾಳೆ. ಆಗ ಭೂಪತಿ ಕೂಡ, ಅದನ್ನು ಶೋ ಶುರು ಮಾಡಲು ಆಗುವುದಿಲ್ಲ ಎಂದುಕೊಳ್ಳುತ್ತಾನೆ. ಇದನ್ನು ಓದಿ..Kannada News: ವಿಷ್ಣು ಸರ್ ಹೆಸರು ಹೇಳಿಕೊಂಡು ಬೆಳೆದ ಯಶ್, ಸುದೀಪ್ ವಿಷ್ಣು ಸ್ಮಾರಕ ಉದ್ಘಾಟನೆಗೆ ಬರಲ್ವಾ? ಉತ್ತರ ಸಿಕ್ಕೇ ಬಿಡ್ತು.
ಆದರೆ ಶೋ ಶುರುವಾಗಿದ್ದು ನೋಡಿ ಭೂಪತಿಗೆ ಶಾಕ್ ಆಗಿ ಹೋಗಿ ನೋಡಿದಾಗ ಅಲ್ಲಿ ನಕ್ಷತ್ರ ಇರುತ್ತಾಳೆ. ಭೂಪತಿಗೆ ಅದನ್ನು ನಂಬಲು ಸಾಧ್ಯ ಆಗುವುದಿಲ್ಲ. ನಕ್ಷತ್ರಾ ಆರ್.ಜೆ ಸಖಿ ಎಂದು ತಿಳಿದು ಬಹಳ ಸಂತೋಷಪಡುವ ಹಾಗೆ ಶುಕ್ರವಾರದ ಸಂಚಿಕೆಯಲ್ಲಿ ತೋರಿಸುತ್ತಾರೆ. ಆದರೆ ಅದು ನಿಜವಲ್ಲ, ಭೂಪತಿಗೆ ಆರ್.ಜೆ ಸಖಿ ಯಾರು ಎನ್ನುವ ವಿಷಯ ಗೊತ್ತಾಗಿಲ್ಲ. ಬದಲಾಗಿ ಅದು ಶ್ವೇತಾ ಗೆ ಬಿದ್ದಿರುವ ಕನಸಾಗಿದೆ. ನಿಜವಾದ ಆರ್.ಜೆ ಸಖಿ ಯಾರು ಎನ್ನುವ ವಿಷಯ ಭೂಪತಿ. ಎದುರು ರಿವೀಲ್ ಆಗುವುದು ಇನ್ನಷ್ಟು ದಿನಗಳ ಕಾಲ ಮುಂದಕ್ಕೆ ಹೋಗಿದೆ. ಇದನ್ನು ಓದಿ..Kannada News: ಚೆನ್ನಾಗಿ ಇರುವ ಸಿನೆಮಾಗೆ ಸಾಲು ಸಾಲು ಹೊಡೆತ: ದರ್ಶನ್ ಗೆ ಮತ್ತೊಂದು ಬಿಗ್ ಶಾಕ್. ಚಿತ್ರದ ಪರಿಸ್ಥಿತಿ ದಿನೇ ದಿನೇ ಏನಾಗಿದೆ ಗೊತ್ತೇ?
Comments are closed.