Kannada News: ಚೆನ್ನಾಗಿ ಇರುವ ಸಿನೆಮಾಗೆ ಸಾಲು ಸಾಲು ಹೊಡೆತ: ದರ್ಶನ್ ಗೆ ಮತ್ತೊಂದು ಬಿಗ್ ಶಾಕ್. ಚಿತ್ರದ ಪರಿಸ್ಥಿತಿ ದಿನೇ ದಿನೇ ಏನಾಗಿದೆ ಗೊತ್ತೇ?
Kannada News: ನಟ ದರ್ಶನ್ ಅವರ ಕ್ರಾಂತಿ ಸಿನಿಮಾ ಜನವರಿ 26ರಂದು ಬಿಡುಗಡೆಯಾಗಿ ಒಳ್ಳೆಯ ಹೆಸರು ಪಡೆದುಕೊಂಡಿದೆ. ಅಭಿಮಾನಿಗಳು ಕ್ರಾಂತಿ ಸಿನಿಮಾಗೆ ಭರ್ಜರಿಯಾಗಿ ಓಪನಿಂಗ್ ನೀಡಿದ್ದಾರೆ. ಈಗ ಕ್ರಾಂತಿ ಸಿನಿಮಾಗೆ ಒಂದರ ಮೇಲೊಂದು ಹೊಡೆತಗಳು ಬೀಳುತ್ತಲೇ ಇದೆ, ಇದೀಗ ಕ್ರಾಂತಿ ಸಿನಿಮಾಗೆ ಬೆಂಗಳೂರಿನಲ್ಲಿ ಶೋಗಳಲ್ಲಿ ಕುಸಿತ ಕಂಡುಬಂದಿದೆ. ಕರ್ನಾಟಕದಲ್ಲಿ ಮೊದಲಿನಿಂದಲೂ ಎಲ್ಲಾ ಭಾಷೆಯ ಸಿನಿಮಾ ನೋಡುವ ಸಿನಿಪ್ರಿಯರು ಇರುವುದರಿಂದ ಪರಭಾಷೆಯ ಹಾವಳಿ ಕನ್ನಡ ಸಿನಿಮಾಗಳ ಬೀಳುವುದು ಸಾಮಾನ್ಯ ಎನ್ನುವ ಹಾಗೆ ಆಗಿದೆ. ಇದೀಗ ಮತ್ತೊಂದು ಸಾರಿ ಅದೇ ರೀತಿ ಆಗಿದೆ.
ನಟ ಶಾರುಕ್ ಖಾನ್ ಅಭಿನಯದ ಪಠಾಣ್ ಸಿನಿಮಾ ಜನವರಿ 25ರಂದು ತೆರೆಕಂಡಿತು. ಮೊದಲ ದಿನ ಕ್ರಾಂತಿ ಸಿನಿಮಾ ಪಠಾಣ್ ಗಿಂತ ಹೆಚ್ಚು ಶೋಗಳನ್ನು ಪಡೆದುಕೊಂಡಿತ್ತು, ಜನವರಿ 26ರಂದು ಬೆಂಗಳೂರಿನಲ್ಲಿ ಕ್ರಾಂತಿ 680 ಶೋಗಳು, ಪಠಾಣ್ 541 ಶೋ ಪಡೆದುಕೊಂಡಿತ್ತು. ಎರಡನೆಯ ದಿನ ಕ್ರಾಂತಿ 583 ಶೋಗಳು, ಪಠಾಣ್ 563 ಶೋ ಪಡೆದುಕೊಂಡಿತ್ತು. ಎರಡನೆಯ ದಿನ ಕ್ರಾಂತಿ ಸಿನಿಮಾದ ಶೋಗಳು ಕಡಿಮೆ ಆಗಿದ್ದರು ಸಹ, ಪಠಾಣ್ ಗಿಂತ ಹೆಚ್ಚು ಶೋಗಳಿತ್ತು, ಆದರೆ ಮೂರನೇ ದಿನ ಜನವರಿ 28ರಂದು ಕ್ರಾಂತಿ ಸಿನಿಮಾಗೆ 559 ಶೋಗಳು, ಹಾಗೂ ಪಠಾಣ್ ಸಿನಿಮಾಗೆ 581 ಶೋಗಳನ್ನು ನೀಡಲಾಗಿದೆ. ಇದನ್ನು ಓದಿ..Kannada News: ವಿಷ್ಣು ಸರ್ ಹೆಸರು ಹೇಳಿಕೊಂಡು ಬೆಳೆದ ಯಶ್, ಸುದೀಪ್ ವಿಷ್ಣು ಸ್ಮಾರಕ ಉದ್ಘಾಟನೆಗೆ ಬರಲ್ವಾ? ಉತ್ತರ ಸಿಕ್ಕೇ ಬಿಡ್ತು.
ಪಠಾಣ್ ಸಿನಿಮಾದ ಟಿಕೆಟ್ ಬುಕಿಂಗ್ ನಲ್ಲಿ ಕೂಡ ಮೇಲುಗೈ ಸಾಧಿಸಿದೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಟ್ರೆಂಡಿಂಗ್ ನಲ್ಲಿ ನಂಬರ್ 1ಸ್ಥಾನದಲ್ಲಿರುವ ಪಠಾಣ್ ಸಿನಿಮಾ ಹೆಚ್ಚು ಶೋಗಳನ್ನು ಪಡೆದುಕೊಂಡಿದೆ. ಆದರೆ ಮೈಸೂರಿನಲ್ಲಿ ಇಂದಿಗು ಕ್ರಾಂತಿ ಸಿನಿಮಾ ಮೇಲುಗೈ ಸಾಧಿಸಿದೆ, ಮೈಸೂರಿನಲ್ಲಿ ಇಂದು ಜನವರಿ 28ಕ್ಕೆ ಕ್ರಾಂತಿ 75 ಶೋಗಳು ಹಾಗೂ ಪಠಾಣ್ 54 ಶೋಗಳನ್ನು ಪಡೆದುಕೊಂಡಿದೆ. ಈ ರೀತಿಯಾಗಿ ಪರಭಾಷೆಯ ಸಿನಿಮಾಗಳು ಇಂದಿಗೂ ಕರ್ನಾಟಕದಲ್ಲಿ ಮೇಲುಗೈ ಸಾಧಿಸುತ್ತಿದೆ. ಇದರಿಂದ ಡಿಬಾಸ್ ಅಭಿಮಾನಿಗಳಿಗೆ ಬೇಸರವಾಗಿದೆ. ಇದನ್ನು ಓದಿ..Kannada News: ಒಂದು ಕಾಲದ ಟಾಪ್ ನಟಿಯಾಗಿ ಮೆರೆದು ಈಗ ಪದ್ಮಾವತಿ ಧಾರಾವಾಹಿಯ ತುಳಸಿ ಏನು ಮಾಡುತ್ತಿದ್ದಾರೆ ಗೊತ್ತೇ?? ಕೊನೆಗೂ ಕಾಣಿಸಿದ್ದು ಎಲ್ಲಿ ಗೊತ್ತೇ??
Comments are closed.