Kannada News: ವಿಷ್ಣು ಸರ್ ಹೆಸರು ಹೇಳಿಕೊಂಡು ಬೆಳೆದ ಯಶ್, ಸುದೀಪ್ ವಿಷ್ಣು ಸ್ಮಾರಕ ಉದ್ಘಾಟನೆಗೆ ಬರಲ್ವಾ? ಉತ್ತರ ಸಿಕ್ಕೇ ಬಿಡ್ತು.
Kannada News: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದ ಮೇರುನಟ. ಇವರು ಅಗಲಿ ಹಲವು ವರ್ಷಗಳು ಕಳೆದಿದ್ದರು, ಅಭಿಮಾನಿಗಳ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ನಿಂತಿದ್ದಾರೆ. ಇಂದಿಗೂ ವಿಷ್ಣುವರ್ಧನ್ ಅವರನ್ನು ಕಂಡರೆ ಅಭಿಮಾನಿಗಳಿಗೆ ಅಷ್ಟೇ ಪ್ರೀತಿ ಇದೆ. ವಿಷ್ಣುವರ್ಧನ್ ಅವರು ಅಗಲಿದ ನಂತರ ಅವರ ಸ್ಮಾರಕದ ವಿಚಾರ ಬಹಳಷ್ಟು ಗೊಂದಲ ವಿವಾದಕ್ಕೆ ಕಾರಣವಾಗಿತ್ತು. ವಿಷ್ಣುವರ್ಧನ್ ಅವರ ಅಂತ್ಯಸಂಸ್ಕಾರ ನಡೆದದ್ದು ಅಭಿಮಾನ್ ಸ್ಟುಡಿಯೋದಲ್ಲಿ.
ಅದೇ ಜಾಗದಲ್ಲಿ ಅವರ ಸ್ಮಾರಕ ನಿರ್ಮಾಣ ಮಾಡಬೇಕು ಎನ್ನುವುದು ಅವರ ಕುಟುಂಬ ಮತ್ತು ಅಭಿಮಾನಿಗಳ ಆಸೆ ಆಗಿತ್ತು. ಆದರೆ ಆ ಜಾಗದ ಮೇಲೆ ಹಲವು ಸಮಸ್ಯೆಗಳು ಇದ್ದ ಕಾರಣ, ಅಲ್ಲಿ ಸ್ಮಾರಕ ನಿರ್ಮಾಣ ಮಾಡಲು ಸಾಧ್ಯ ಆಗಲೇ ಇಲ್ಲ, ಎಲ್ಲಾ ಮುಖ್ಯಮಂತ್ರಿಗಳು ಪ್ರಯತ್ನಪಟ್ಟರೂ ಸಹ, ವಿಷ್ಣುವರ್ಧನ್ ಅವರ ಸ್ಮಾರಕದ ವಿಚಾರ ಇತ್ಯರ್ಥ ಆಗಿರಲಿಲ್ಲ. ಆದರೆ ಈಗ ಕೊನೆಗೂ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಾಣ ಮಾಡಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸ್ಮಾರಕದ ಉದ್ಘಾಟನೆ ನಡೆಯಲಿದ್ದು, ಇದಕ್ಕೆ ಸ್ಯಾಂಡಲ್ ವುಡ್ ನಟರಾದ ಯಶ್ ಅವರು ಮತ್ತು ಸುದೀಪ್ ಅವರು ಬರುತ್ತಾರಾ ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ. ಇದನ್ನು ಓದಿ..Kannada News: ಒಂದು ಕಾಲದ ಟಾಪ್ ನಟಿಯಾಗಿ ಮೆರೆದು ಈಗ ಪದ್ಮಾವತಿ ಧಾರಾವಾಹಿಯ ತುಳಸಿ ಏನು ಮಾಡುತ್ತಿದ್ದಾರೆ ಗೊತ್ತೇ?? ಕೊನೆಗೂ ಕಾಣಿಸಿದ್ದು ಎಲ್ಲಿ ಗೊತ್ತೇ??
ಇವರಿಬ್ಬರು ವಿಷ್ಣುವರ್ಧನ್ ಅವರ ಅಭಿಮಾನಿ ಎಂದು ಹೇಳಿಕೊಂಡವರು, ವಿಷ್ಣುವರ್ಧನ್ ಅವರ ನೆರಳಲ್ಲೇ ಬೆಳೆದವರು. ಹಾಗಾಗಿ ಬರುತ್ತಾರಾ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಪ್ರತ್ರಿಕಾಗೋಷ್ಠಿಯಲ್ಲಿ ಸಿಕ್ಕಿರುವ ಮಾಹಿತಿಯ ಪ್ರಕಾರ, ಸುದೀಪ್ ಅವರಿಗೆ ಅದೇ ಸಮಯಕ್ಕೆ ಬೇರೆ ಆಹ್ವಾನ ಇದ್ದು, ಫೆಬ್ರವರಿ ತಿಂಗಳಿನಲ್ಲಿ ಖಂಡಿತವಾಗಿ ಬರುತ್ತೇನೆ ಎಂದು ಹೇಳಿದ್ದಾರಂತೆ. ಸುದೀಪ್ ಅವರು ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ ಆಗಿದ್ದು, ಬಂದೇ ಬರುತ್ತೇನೆ ಎಂದು ಹೇಳಿದ್ದಾರಂತೆ. ಇನ್ನು ಯಶ್ ಅವರನ್ನು ಸಂಪರ್ಕ ಮಾಡೋದಕ್ಕೆ ಆಗಿಲ್ಲ, ಅವರಿಗೆ ಪರಿಚಯ ಇರುವವರು ನಮಗೂ ಗೊತ್ತಿದ್ದಾರೆ, ಸಂಪರ್ಕ ಮಾಡುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ. ಯಶ್ ಅವರು ಮಾಡುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಈ ವಯಸ್ಸಿನಲ್ಲಿಯೂ ಮದುವೆ ಕನಸು ಕಟ್ಟಿಕೊಂಡಿದ್ದ ನರೇಶ್ ಗೆ ಶಾಕ್. ಆದರೂ ಪವಿತ್ರ ಮೇಡಂ ಫುಲ್ ಕುಶಿಯಾಗಿದ್ದು ಯಾಕೆ ಗೊತ್ತೇ??
Comments are closed.