Kannada Astrology: ಈ ಐದು ರಾಶಿಗಳಿಗೆ ಕಷ್ಟ ಮುಗಿಯುವ ಕಾಲ ಬಂದೆ ಬಿಡ್ತು: ಫೆಬ್ರವರಿ ತಿಂಗಳಿನಲ್ಲಿ ಅದೃಷ್ಟ ಬಂದು ಕುಬೇರರಾಗುವುದು ಯಾವ ರಾಶಿಯವರು ಗೊತ್ತೇ??
Kannada Astrology: ಇನ್ನೇನು ಜನವರಿ ತಿಂಗಳು ಮುಗಿದು ಫೆಬ್ರವರಿ ತಿಂಗಳು ಶುರುವಾಗಲಿದೆ. ಫೆಬ್ರವರಿ ತಿಂಗಳಿನಲ್ಲಿ ನಡೆಯುವ ಕೆಲವು ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ, ದೇಶಗಳ ಮೇಲೆ ಪ್ರಭಾವ ಬೀರಲಿದೆ. ಬುಧ ಗುರು ಶುಕ್ರ ಮತ್ತು ಇನ್ನಿತರ ಗ್ರಹಗಳ ಸ್ಥಾನ ಬದಲಾವಣೆ ಆಗಲಿದೆ. ಫೆಬ್ರವರಿ 7ರಂದು ಬುಧ ಗ್ರಹ ಮಕರ ರಾಶಿಯನ್ನು ಪ್ರವೇಶ ಮಾಡಲಿದೆ, ಇದರಿಂದ ಬುಧಾದಿತ್ಯ ಯೋಗ ರೂಪುಗೊಳ್ಳಲಿದೆ, ಬುಧ ಗ್ರಹವು ಫೆಬ್ರವರಿ 27ರಂದು ಕುಂಭ ರಾಶಿಗೆ ಪ್ರವೇಶ ಮಾಡಲಿದ್ದು, ಅಲ್ಲಿ ಈಗಾಗಲೇ ಸೂರ್ಯ ಮತ್ತು ಶನಿ ಗ್ರಹ ಇದೆ, ಈ ಎರಡರ ಜೊತೆ ಸೇರಿ ತ್ರಿಗಾಹಿ ಯೋಗ ರೂಪುಗೊಳ್ಳಲಿದೆ. ಫೆಬ್ರವರಿ 13ರಂದು ಸೂರ್ಯಗ್ರಹವು ಕುಂಭ ರಾಶಿಗೆ ಪ್ರವೇಶ ಮಾಡುತ್ತದೆ. ಫೆಬ್ರವರಿ 15ರಂದು ಶುಕ್ರ ಗ್ರಹ ಮೀನ ರಾಶಿಗೆ ಪ್ರವೇಶಿಸುತ್ತದೆ. ಮೀನ ರಾಶಿಯಲ್ಲಿ ಗುರು ಮತ್ತು ಶುಕ್ರ ಗ್ರಹದ ಸಂಯೋಗ ಆಗಲಿದೆ. ಈ ಎಲ್ಲಾ ಗ್ರಹಗಳ ಸ್ಥಾನ ಬದಲಾವಣೆ ಯಾವ ರಾಶಿಗಳಿಗೆ ಅದೃಷ್ಟ ತರುತ್ತದೆ ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಗ್ರಹಗಳ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಲಾಭವಾಗುತ್ತದೆ. ಬೇರೆ ಕಡೆ ಸಿಕ್ಕಿಹಾಕಿಕೊಂಡಿರುವ. ನಿಮ್ಮ ಹಣ ವಾಪಸ್ ಬರುತ್ತದೆ. ನೀವು ಮಾಡುವ ಹೂಡಿಕೆಗೆ ಲಾಭ ಸಿಗುತ್ತದೆ, ತಂದೆ ತಾಯಿಯರ ಬೆಂಬಲ ನಿಮಗೆ ಸಿಗುತ್ತದೆ. ಸರ್ಕಾರಿ ಕೆಲಸಗಳೆಲ್ಲ ಒಳ್ಳೆಯ ರೀತಿಯಲ್ಲಿ ಮುಕ್ತಾಯವಾಗುತ್ತದೆ. ಹೊಸ ಬ್ಯುಸಿನೆಸ್ ಶುರು ಮಾಡಲು ಇದು ಒಳ್ಳೆಯ ಸಮಯ. ಸ್ನೇಹಿತರ ಬೆಂಬಲ ನಿಮಗೆ ಸಿಗುತ್ತದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ, ಹೆಚ್ಚಿನ ಸೌಕರ್ಯ ನಿಮ್ಮದಾಗುತ್ತದೆ. ಪ್ರವಾಸಕ್ಕೆ ಹೋಗುವ ಪ್ಲಾನ್ ನಡೆಯಬಹುದು. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಒತ್ತಡ ತೆಗೆದುಕೊಳ್ಳಬೇಡಿ.
ಕರ್ಕಾಟಕ ರಾಶಿ :- ಗ್ರಹಗಳ ಸ್ಥಾನ ಬದಲಾವಣೆ ಈ ರಾಶಿಯವರಿಗೂ ಲಾಭ ನೀಡುತ್ತದೆ. ಪೂರ್ವಿಕರ ಆಸ್ತಿ ನಿಮಗೆ ಸಿಗಬಹುದು. ಹಣದ ವಿಚಾರದಲ್ಲಿ ಹುಷಾರಾಗಿರಿ, ನಿಮ್ಮ ಸಂಗಾತಿಯ ಪೂರ್ತಿ ಬೆಂಬಲ ನಿಮಗೆ ಸಿಗುತ್ತದೆ. ಪ್ರೀತಿ ಪ್ರೇಮದ ವಿಚಾರದಲ್ಲಿ ಸಮಸ್ಯೆಗಳು ಪರಿಹಾರ ಆಗುತ್ತದೆ. ಸೂರ್ಯದೇವನ ಪ್ರಭಾವದಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ. ಉನ್ನತ ಅಧಿಕಾರಿಗಳ ಸಹಕಾರ ಸಿಗುತ್ತದೆ, ಕೆಲಸದ ಬಗ್ಗೆ ಶ್ರಮ ಪಡುತ್ತೀರಿ.
ಕನ್ಯಾ ರಾಶಿ :- ನಾಲ್ಕು ಗ್ರಹಗಳ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಅದೃಷ್ಟ ತರುತ್ತದೆ. ಸರ್ಕಾರಿ ಕೆಲಸಕ್ಕಾಗಿ ತಯಾರಿ ನಡೆಸುತ್ತಿರುವವರಿಗೆ ಒಳ್ಳೆಯ ಅವಕಾಶ ಸಿಗುತ್ತದೆ. ಮನೆಯಲ್ಲಿ ನೀವು ಧಾರ್ಮಿಕ ಕೆಲಸಗಳನ್ನು ಮಾಡಬಹುದು. ಹೊಸ ಕೆಲಸಕ್ಕೆ ನೀವು ಹುಡುಕಾಟ ಶುರು ಮಾಡಬಹುದು. ನ್ಯಾಯದ ವಿಚಾರಕ್ಕೆ ಹೋರಾಟ ನಡೆಯುತ್ತಿದ್ದರೆ, ಅದು ನಿಮ್ಮ ಪರವಾಗಿಯೇ ಆಗುತ್ತದೆ. ಕೆಲವರ ಸಹಾಯದಿಂದ ಕೆಲಸಗಳು ಪೂರ್ತಿಯಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ, ಹೆಚ್ಚು ಲಾಭ, ಹೊಸ ಆರ್ಡರ್ ಪಡೆಯುತ್ತೀರಿ.
ತುಲಾ ರಾಶಿ :- ನಾಲ್ಕು ಗ್ರಹಗಳ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಶುಭಫಲ ತರುತ್ತದೆ. ನಿಮ್ಮ ಸಂಗಾತಿಯ ಜೊತೆಗಿನ ಬಂಧ ಸ್ಟ್ರಾಂಗ್ ಆಗುತ್ತದೆ. ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ, ಹಣಕಾಸಿನ ವಿಚಾರದಲ್ಲಿ ಲಾಭ ಪಡೆಯುತ್ತೀರಿ. ಮನೆಯವರ ಜೊತೆಗೆ ಧಾರ್ಮಿಕ ಸ್ಥಳಕ್ಕೆ ನೀವು ಭೇಟಿ ನೀಡಬಹುದು. ನೀವು ಮಾಡುವ ಕೆಲಸಕ್ಕೆ ಪ್ರಶಂಸೆ ಪಡೆಯುತ್ತೀರಿ. ಬೇರೆ ದೇಶಕ್ಕೆ ಹೋಗಲು ಬಯಸುತ್ತಿರುವವರ ಆಸೆ ಈಡೇರುತ್ತದೆ, ನಿಮ್ಮ ಇಷ್ಟಗಳು ಪೂರ್ತಿಯಾಗುತ್ತದೆ.
ಕುಂಭ ರಾಶಿ :- ಗ್ರಹಗಳ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಮಂಗಳಕರಫಲ ನೀಡುತ್ತದೆ. ಸೂರ್ಯ, ಶುಕ್ರ ಮತ್ತು ಬುಧ ಗ್ರಹದ ಸ್ಥಾನ ಬದಲಾವಣೆ ಪಾಸಿಟಿವಿಟಿ ತರುತ್ತದೆ. ಬಹಳ ಸಮಯದಿಂದ ಉಳಿದಿರುವ ಕೆಲಸ ಪೂರ್ತಿಯಾಗುತ್ತದೆ. ಸರ್ಕಾರಿ ಅಧಿಕಾರಿಗಳು ನಿಮಗೆ ಸಹಾಯ ಮಾಡುತ್ತಾರೆ. ಮನೆಯವರ ಜೊತೆಗೆ ಪುಣ್ಯಕ್ಷೇತ್ರಗಳಿಗೆ ಹೋಗುವ ಅವಕಾಶ ಸಿಗಬಹುದು. ಗ್ರಹಗಳ ಪ್ರಭಾವದಿಂದ ಸ್ಟ್ರಾಂಗ್ ಆಗಿರುತ್ತೀರಿ. ಯಾವುದೇ ವಿಚಾರಕ್ಕೆ ನಿರ್ಧಾರ ತೆಗೆದುಕೊಳ್ಳಲು ನಿಮ್ಮ ಸಾಮರ್ಥ್ಯ ಹೆಚ್ಚಾಗುತ್ತದೆ. ನಿಮ್ಮ ಸಂಗಾತಿಯ ಜೊತೆಗೆ ಚೆನ್ನಾಗಿರುತ್ತೀರಿ.
Comments are closed.