Kannada News: ಮದುವೆ ಸುದ್ದಿ ಘೋಷಣೆ ಮಾಡಿದ ಪವಿತ್ರ: ಆದರೆ ಈ ಮದುವೆ ಮುರಿದು ಬಿದ್ದರೆ, ನರೇಶ್ ಎಷ್ಟು ಕೋಟಿ ಪರಿಹಾರ ಕೊಡಬೇಕು ಗೊತ್ತೇ? ಒಪ್ಪಂದವೇನು ಗೊತ್ತೇ?
Kannada News: ಕಳೆದ ಕೆಲವು ತಿಂಗಳುಗಳಿಂದ ನಟಿ ಪವಿತ್ರ ಲೋಕೇಶ್ ಮತ್ತು ಟಾಲಿವುಡ್ ನಟ ನರೇಶ್ ಅವರ ನಡುವೆ ಸಾಕಷ್ಟು ಗಾಸಿಪ್ ಗಳು ಕೇಳಿ ಬರುತ್ತಲೆ ಇವೆ. ಮೈಸೂರಿನ ಹೋಟೆಲ್ ಒಂದರಲ್ಲಿ ನಟಿ ಪವಿತ್ರ ಮತ್ತು ನರೇಶ್ ಒಟ್ಟಿಗೆ ಮಾಧ್ಯಮದವರ ಜೊತೆಗೆ ಸಿಕ್ಕಿಹಾಕಿಕೊಂಡಿದ್ದರು. ಸ್ವತಃ ನರೇಶ್ ಅವರ ಪತ್ನಿ ಮಾಧ್ಯಮದವರ ಜೊತೆಗೆ ಏಕಾಏಕಿ ನರೇಶ್ ಮತ್ತು ಪವಿತ್ರ ಅವರು ಉಳಿದುಕೊಂಡಿದ್ದ ರೂಂಗೆ ದಾಳಿ ಮಾಡಿಸಿದ್ದರು. ಈ ಘಟನೆ ಕೇವಲ ಕರ್ನಾಟಕದ ಮಾಧ್ಯಮಗಳು ಮಾತ್ರವಲ್ಲದೆ ತೆಲುಗು ಸುದ್ದಿ ಮಾಧ್ಯಮಗಳು ಸೇರಿದಂತೆ ದೇಶಾದ್ಯಂತ ದೊಡ್ಡ ಸಂಚಲನ ಸೃಷ್ಟಿಸಿತ್ತು. ಈ ಜೋಡಿಯ ಬಗ್ಗೆ ಸಾಕಷ್ಟು ವದಂತಿಗಳು ಸಹ ಕೇಳಿಬಂದಿದ್ದವು. ಇನ್ನು ಇದೀಗ ಈ ಜೋಡಿ ಮದುವೆಯಾಗಲು ನಿಶ್ಚಯಿಸಿದ್ದಾರೆ. ಆದರೆ ಈ ಮದುವೆ ಒಂದು ರೀತಿ ಒಪ್ಪಂದದ ಮದುವೆಯಾಗಿದ್ದು ನರೇಶ್ ಅವರಿಗೆ ಪವಿತ್ರ ಒಂದು ಷರತ್ತು ಹಾಕಿದ್ದಾರೆ ಎಂದು ಸುದ್ದಿಯಾಗಿದೆ.
ನಟಿ ಪವಿತ್ರ ಲೋಕೇಶ್ ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಯಾಗಿ ಅಭಿನಯಿಸಿದ್ದಾರೆ. ಅಲ್ಲದೆ ಅವರು ಪೋಷಕ ನಟಿಯಾಗಿ ಹೆಚ್ಚಿನ ಜನಪ್ರಿಯತೆಯನ್ನು ಸಹ ಪಡೆದುಕೊಂಡಿದ್ದಾರೆ. ಕನ್ನಡ, ತೆಲುಗುನಲ್ಲಿ ಅವರು ಬಹಳ ಬೇಡಿಕೆಯ ನಟಿಯಾಗಿ ಹೆಸರು ಮಾಡಿದ್ದಾರೆ. ಇಷ್ಟು ಮಾತ್ರವಲ್ಲದೆ ಪವಿತ್ರ, ನರೇಶ್ ಜೋಡಿಯಾಗಿ ಹಲವಾರು ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಸಾಕಷ್ಟು ತಿಂಗಳುಗಳಿಂದ ಪವಿತ್ರ ಹಾಗೂ ನರೇಶ ಅವರ ಕುರಿತಾದ ಹಲವಾರು ಸುದ್ದಿಗಳು ಹರಿದಾಡುತ್ತಲೇ ಇವೆ. ನರೇಶ್ ತಮ್ಮ ಪತ್ನಿಯನ್ನು ಬಿಟ್ಟು ಪವಿತ್ರ ಅವರ ಜೊತೆಗೆ ಸುತ್ತಾಡುತ್ತಿರುವುದರ ಕುರಿತಾಗಿ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಅಲ್ಲದೆ ನರೇಶ್ ಅವರ ವಿರುದ್ಧ ಅವರ ಪತ್ನಿ ಬಹಿರಂಗವಾಗಿ ಜಗಳವಾಡಿದ ಅನೇಕ ಪ್ರಕರಣಗಳು ನಡೆದಿದ್ದವು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ನರೇಶ್ ಅವರು ಪವಿತ್ರ ಅವರ ಜೊತೆಗೆ ಕಾಣಿಸಿಕೊಳ್ಳುತ್ತಿದ್ದರು. ಇನ್ನು ನಟಿ ಪವಿತ್ರ ಅವರು ಸಹ ನರೇಶ್ ಅವರ ಪರವಾಗಿಯೇ ಮಾತನಾಡುತ್ತಿದ್ದರು. ಇದನ್ನು ಓದಿ..Kannada News: ಶಿವಣ್ಣ ರವರ ಹೇಳಿಕೆ ಸರಿಯಾಗಿಯೇ ಟಾಂಗ್ ಕೊಟ್ಟ ದರ್ಶನ್ ಫ್ಯಾನ್ಸ್: ದೊಡ್ಮನೆ vs ಡಿ ಬಾಸ್ ಅಸಲಿ ಆಟ ಶುರು. ಏನಾಗಿದೆ ಗೊತ್ತೇ??
ಇನ್ನು ಈ ಜೋಡಿ ಇದೀಗ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ. ಸ್ವತಹ ಪವಿತ್ರ ಅವರೇ ಇಂತಹ ಒಂದು ಸುದ್ದಿಯನ್ನು ಘೋಷಣೆ ಮಾಡಿದ್ದಾರೆ. ತಾನು ನರೇಶ್ ಅವರ ಜೊತೆಗೆ ಮದುವೆಯಾಗುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಇದೀಗ ಬರಿ ಮದುವೆ ಮಾತ್ರವಲ್ಲ ಮದುವೆಯ ಜೊತೆಗೆ ಅವರು ಒಂದು ಒಪ್ಪಂದ ಮಾಡಿಕೊಂಡಿರುವುದರ ಕುರಿತಾಗಿಯೂ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಹೌದು, ಈ ಜೋಡಿ ಏನೋ ಮದುವೆ ಆಗುತ್ತಿರುವುದರ ಕುರಿತಾಗಿ ಘೋಷಣೆ ಮಾಡಿದೆ ಆದರೆ ಪವಿತ್ರ ಅವರು ಈ ಮದುವೆಯ ಮೊದಲು ಒಪ್ಪಂದವನ್ನು ನರೇಶ್ ಅವರ ಜೊತೆಗೆ ಮಾಡಿಕೊಂಡಿದ್ದಾರೆ. ಒಂದು ವೇಳೆ ಏನಾದರೂ ಈ ಮದುವೆ ಮುರಿದು ಬಿದ್ದರೆ ಅದಕ್ಕೆ ಪರಿಹಾರವಾಗಿ ನರೇಶ್ ಪವಿತ್ರ ಅವರಿಗೆ ಬರೋಬರಿ 10 ಕೋಟಿ ರೂ ಪರಿಹಾರ ಧನವನ್ನು ನೀಡಬೇಕಂತೆ. ಪರಿಹಾರ ಮೊತ್ತ ಮಾತ್ರವಲ್ಲದೆ ಆನಂತರ ಬದುಕಿರುವವರೆಗೂ ಪ್ರತಿ ತಿಂಗಳು ಕೂಡ 25 ಲಕ್ಷ ರೂಪಾಯಿಯನ್ನು ನರೇಶ್ ಪವಿತ್ರಾಗೆ ನೀಡಬೇಕಾಗಿದೆ. ಇಂಥದೊಂದು ಷರತ್ತು ವಿಧಿಸಿ, ಒಪ್ಪಂದ ಮಾಡಿಕೊಂಡೆ ನರೇಶ್ ಮತ್ತು ಪವಿತ್ರ ಅವರು ಮದುವೆಯಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನು ಓದಿ..Biggboss Kannada: ಪಾಪ ಗೆಲ್ಲುವ ಸಮಯದಲ್ಲಿ ರೂಪೇಶ್ ರಾಜಣ್ಣಗೆ ಇವೆಲ್ಲ ಬೇಕಿತ್ತಾ?? ಎಲ್ಲರ ಮುಂದೇನೆ ರಾಜಣ್ಣ ಪತ್ನಿ ಮರ್ಯಾದೆ ತೆಗೆದದ್ದು ಹೇಗೆ ಗೊತ್ತೇ??
Comments are closed.