Biggboss Kannada: ರೂಪೇಶ್ ರಾಜಣ್ಣ ಅಲ್ಲ, ರೂಪೇಶ್ ಶೆಟ್ಟಿ ನು ಅಲ್ಲ, ನಿಜಕ್ಕೂ ಯಾರು ಗೆಲ್ಲಬೇಕಾಗಿತ್ತು ಗೊತ್ತೇ? ಜನರು ಏನು ಹೇಳುತ್ತಿದ್ದಾರೆ ಗೊತ್ತೇ??
Biggboss Kannada: ಸಾಕಷ್ಟು ವಿಶೇಷತೆಗಳಿಗೆ ಕಾರಣವಾಗಿದ್ದ ಕಲರ್ಸ್ ಕನ್ನಡದ ಬಿಗ್ ಬಾಸ್ ಸೀಸನ್ 9 ಭರ್ಜರಿಯಾಗಿ ನೆನ್ನೆ ಗ್ರಾಂಡ್ ಫಿನಾಲೆ ನಡೆಸುವ ಮೂಲಕ ಮುಕ್ತಾಯಗೊಂಡಿದೆ. ಜೊತೆಗೆ ಇದೇ ಮೊದಲ ಬಾರಿಗೆ ಓಟಿಟಿ ಸೀಸನ್ ಸ್ಪರ್ಧಿಗಳನ್ನು ಹಾಗೂ ಹಳೇ ಸೀಜನ್ ಸ್ಪರ್ಧಿಗಳ ಜೊತೆಗೆ ಹೊಸ ಸ್ಪರ್ಧಿಗಳನ್ನು ಕೂಡ ಬಳಸಿಕೊಂಡು ವಿಶೇಷವಾಗಿ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಗ್ರಾಂಡ್ ಫಿನಾಲೆ ಹಂತಕ್ಕೆ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ದಿವ್ಯ ಉರುಡುಗ ಮತ್ತು ದೀಪಿಕಾ ದಾಸ್ ಅವರು ತಲುಪಿದರು. ಇವರ ಪೈಕಿ ರೂಪೇಶ್ ರಾಜಣ್ಣ ಮಾತ್ರ ಹೊಸ ಸ್ಪರ್ಧಿಯಾಗಿ ಇಷ್ಟು ದಿನ ಉಳಿದುಕೊಂಡಿದ್ದು ಎಲ್ಲರ ಮೆಚ್ಚುಗೆ ಕಾರಣವಾಗಿತ್ತು. ಇನ್ನು ಗ್ರಾಂಡ್ ಫಿನಾಲೆಯಲ್ಲಿ ರೂಪೇಶ್ ಶೆಟ್ಟಿ, ವಿನ್ನರ್ ಆಗಿ ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಜನರು ಅವರ ಬದಲಿಗೆ ಗೆಲ್ಲಬೇಕಿದ್ದ ಆಟಗಾರ ಬೇರೆಯೇ ಇದ್ದಾರೆ ಎಂದು ಹೇಳುತ್ತಿದ್ದಾರೆ. ಇಷ್ಟಕ್ಕೂ ಈ ಗೆಲುವಿನ ವಿಷಯವಾಗಿ ಜನರ ಅಭಿಪ್ರಾಯವೇನು ಎನ್ನುವುದು ಇಲ್ಲಿ ಚರ್ಚಿಸಲಾಗಿದೆ.
ಹಲವಾರು ವಿಶೇಷಗಳನ್ನು ಒಳಗೊಂಡ ಈ ಬಿಗ್ ಬಾಸ್ ಸೀಸನ್ ಒಂಬತ್ತು ಕಲರ್ಸ್ ಕನ್ನಡದಲ್ಲಿ ಯಶಸ್ವಿಯಾಗಿ ಪ್ರಸಾರಗೊಂಡು ನೆನ್ನೆ ಗ್ರಾಂಡ್ ಫಿನಾಲೆ ನಡೆಸುವ ಮೂಲಕ ಮುಕ್ತಾಯಗೊಂಡಿದೆ. ಕೊನೆಯದಾಗಿ ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಅವರು ಉಳಿದುಕೊಂಡಿದ್ದರು. ಬಿಗ್ ಬಾಸ್ ಮನೆಯಿಂದ ನೇರವಾಗಿ ವೇದಿಕೆಗೆ ಈ ಸ್ಪರ್ಧೆಗಳನ್ನು ಕರೆದು ತರಲಾಯಿತು. ಆನಂತರ ಎಂದಿನಂತೆ ಅವರ ಜೊತೆಗೆ ಸುದೀಪ್ ಮಾತನಾಡಿದರು, ನಂತರ ಎಲ್ಲಾ ಸೀಸನ್ ಗಳಲ್ಲಿ ನಡೆಸುವಂತೆ ಕಿಚ್ಚ ಸುದೀಪ್ ಇಬ್ಬರೂ ಸ್ಪರ್ಧಿಗಳ ಕೈ ಹಿಡಿದುಕೊಂಡು ಗ್ರಾಂಡ್ ಫಿನಾಲೆಯಲ್ಲಿ ರೂಪೇಶ್ ಶೆಟ್ಟಿಯವರನ್ನು ವಿನ್ನರ್ ಎಂದು ಘೋಷಿಸಿದರು. ಆ ಮೂಲಕ ಅವರು ಈ ಸೀಸನ್ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ. ಆದರೆ ಇದೀಗ ರೂಪೇಶ್ ಶೆಟ್ಟಿ ಅವರು ವಿನ್ನಾದ ಕುರಿತಾಗಿ ಸಾಕಷ್ಟು ಅಭಿಪ್ರಾಯಗಳು ಕೇಳಿ ಬರುತ್ತಿವೆ. ಅಲ್ಲದೆ ಅವರ ಬದಲಿಗೆ ಬೇರೆ ಸ್ಪರ್ಧಿ ಗೆಲ್ಲಬೇಕಿತ್ತು ಎಂದು ಜನರು ಹೇಳುತ್ತಿದ್ದಾರೆ. ಇದನ್ನು ಓದಿ..Kannada News: ಶಿವಣ್ಣ ರವರ ಹೇಳಿಕೆ ಸರಿಯಾಗಿಯೇ ಟಾಂಗ್ ಕೊಟ್ಟ ದರ್ಶನ್ ಫ್ಯಾನ್ಸ್: ದೊಡ್ಮನೆ vs ಡಿ ಬಾಸ್ ಅಸಲಿ ಆಟ ಶುರು. ಏನಾಗಿದೆ ಗೊತ್ತೇ??
ನೆನ್ನೆ ಕಿಚ್ಚ ಸುದೀಪ್ ರೂಪೇಶ್ ಶೆಟ್ಟಿ ಅವರನ್ನು ಬಿಗ್ ಬಾಸ್ ಸೀಸನ್ 9 ರ ವಿಜಯ್ ಶಾಲಿ ಎಂದು ಅನೌನ್ಸ್ ಮಾಡಿದ್ದಾರೆ. ಆದರೆ ಆನಂತರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಬೇರೆಬೇರೆ ರೀತಿಯ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಅದೇನೆಂದರೆ, ರೂಪೇಶ್ ಶೆಟ್ಟಿ ಅವರ ಬದಲಿಗೆ ರಾಕೇಶ್ ಅಡಿಗ ಗೆಲ್ಲಬೇಕಿತ್ತು ಎಂದು ಜನರು ಅಂದುಕೊಳ್ಳುತ್ತಿದ್ದಾರೆ. ರಾಕೇಶ್ ಶೆಟ್ಟಿ, ಮೊದಲಿನಿಂದಲೂ ಅತ್ಯಂತ ಸಮಾಧಾನ ಹಾಗೂ ಸೌಮ್ಯ ವ್ಯಕ್ತಿಯಾಗಿದ್ದರು. ಎಲ್ಲರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದರು. ಯಾರೊಂದಿಗೂ ಅನಗತ್ಯವಾಗಿ ಕಚ್ಚಾಡುತ್ತಿರಲಿಲ್ಲ. ಆಟ, ಮನರಂಜನೆ ಎಲ್ಲದರಲ್ಲೂ ಮುಂದಿದ್ದರು. ಹಾಗಾಗಿ ಅವರೇ ಗೆಲ್ಲಬೇಕಿತ್ತು ಎಂದು ಸಾವಿರಾರು ಜನರು ಕಲರ್ಸ್ ಕನ್ನಡದ ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡುವ ಮೂಲಕ ತಿಳಿಸುತ್ತಿದ್ದಾರೆ. ಅಲ್ಲದೆ ಕಳೆದ ಸೀಸನ್ ಅಲ್ಲೂ ಕೂಡ ಟಾಪ್ 3 ಸ್ಪರ್ಧಿಯಾಗಿದ್ದ ದಿವ್ಯ ಉರುಡುಗ ಗೆಲ್ಲಬೇಕಿತ್ತು ಎಂದು ಜನರು ಅಭಿಪ್ರಾಯ ಪಡುತ್ತಿದ್ದಾರೆ. ರಾಕೇಶ್ ಅಡಿಗ ಅಥವಾ ದಿವ್ಯ ಉರುಡುಗ ಅವರು ಗೆಲ್ಲಬೇಕಿತ್ತು ಎಂದು ಕಲರ್ಸ್ ಕನ್ನಡದ ಪೇಜ್ ನಲ್ಲಿ ಲಕ್ಷಾಂತರ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಈ ಕುರಿತಾಗಿ ದೊಡ್ಡಮಟ್ಟದ ಚರ್ಚೆಯೇ ನಡೆಯುತ್ತಿದೆ. ಅಂದಹಾಗೆ ನಿಮ್ಮ ಪ್ರಕಾರ ಬಿಗ್ ಬಾಸ್ ಸೀಸನ್ 9 ಯಾರು ಗೆಲ್ಲಬೇಕಿತ್ತು ಎಂದು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ. ಇದನ್ನು ಓದಿ.. Kannada News: ಮದುವೆ ಸುದ್ದಿ ಘೋಷಣೆ ಮಾಡಿದ ಪವಿತ್ರ: ಆದರೆ ಈ ಮದುವೆ ಮುರಿದು ಬಿದ್ದರೆ, ನರೇಶ್ ಎಷ್ಟು ಕೋಟಿ ಪರಿಹಾರ ಕೊಡಬೇಕು ಗೊತ್ತೇ? ಒಪ್ಪಂದವೇನು ಗೊತ್ತೇ?
Comments are closed.