Kannada News: ಎಲ್ಲವನ್ನು ತಾಳ್ಮೆಯಿಂದ ನೋಡುತ್ತಲೇ ರಶ್ಮಿಕಾ ಗೆ ಬಿಗ್ ಶಾಕ್ ಕೊಟ್ಟ ಅಲ್ಲೂ ಅರ್ಜುನ್: ಮೆರೆಯುತ್ತಿದ್ದ ರಶ್ಮಿಕಾ ನೇರವಾಗಿ ಪಾತಾಳಕ್ಕೆ. ಏನಾಗಿದೆ ಗೊತ್ತೆ??
Kannada News: 2021ರ ಡಿಸೆಂಬರ್ ತಿಂಗಳಲ್ಲಿ ತೆರೆಕಂಡಿದ್ದ ಪುಷ್ಪ (Pushpa) ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಲೂಟಿ ಮಾಡಿತ್ತು. ಅಲ್ಲು ಅರ್ಜುನ್ ಮತ್ತು ರಶ್ಮಿಕ ಮಂದಣ್ಣ ಅಭಿನಯದ ಈ ಚಿತ್ರ ಗಳಿಕೆಯಲ್ಲಿ ದೊಡ್ಡ ಮಟ್ಟದ ದಾಖಲೆಯನ್ನು ಬರೆದಿತ್ತು. ಚಿತ್ರದ ಯಶಸ್ಸಿನಿಂದಾಗಿ ಪುಷ್ಪ ಚಿತ್ರದ ಮುಂದಿನ ಸೀಕ್ವೆಲ್ ಕೂಡ ಬರಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದರು. ಅಷ್ಟರಮಟ್ಟಿಗೆ ಚಿತ್ರ ಜನಪ್ರಿಯತೆ ಪಡೆದುಕೊಂಡಿತ್ತು. ಇದೇ ಕಾರಣಕ್ಕಾಗಿ ಕಳೆದ ಆಗಸ್ಟ್ ನಲ್ಲೆ ಪುಷ್ಪ 2 (Pushpa2) ಚಿತ್ರದ ಮುಹೂರ್ತ ಕೂಡ ನೆರವೇರಿತ್ತು. ಆದರೆ ಚಿತ್ರೀಕರಣ ಕುಂಟುತ್ತಾ ಸಾಗುತ್ತಿದೆ ಎಂದು ಹೇಳಬಹುದು. ಆದರೆ ಇದರ ಜೊತೆಗೆ ಇದೀಗ ಪುಷ್ಪ ಚಿತ್ರದಲ್ಲಿ ಶ್ರೀವಲ್ಲಿ ಪಾತ್ರದ ಮೂಲಕ ಮೋಡಿ ಮಾಡಿದ್ದ ರಶ್ಮಿಕ ಮಂದಣ್ಣ ಅವರಿಗೆ ಚಿತ್ರತಂಡ ದೊಡ್ಡ ಶಾಕ್ ನೀಡುತ್ತಿದೆ. ಅವರನ್ನು ಈ ಚಿತ್ರದಿಂದ ಹೊರಗಿಡಲಾಗುತ್ತಿದೆ, ಅವರ ಬದಲಿಗೆ ಮತ್ತೊಬ್ಬ ನಟಿಯನ್ನು ಕರೆದು ತರಲಾಗಿದೆ ಎಂಬ ವದಂತಿಗಳು ಕೇಳಿ ಬರುತ್ತಿವೆ.
ನಟಿ ರಶ್ಮಿಕಾ ಮಂದಣ್ಣ ಅಲ್ಲು ಅರ್ಜುನ್ (Allu Arjun) ಅವರ ಜೊತೆಗೆ ಶ್ರೀವಲ್ಲಿ ಪಾತ್ರದಲ್ಲಿ ಮಿಂಚಿದರು. ಡಿ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರು ಸಾಮಿ ಸಾಮಿ ಎಂದು ಚಿತ್ರದ ಹಾಡೊಂದಕ್ಕೆ ಸೊಂಟ ಬಳುಕಿಸಿದ್ದರು. ಅಲ್ಲು ಅರ್ಜುನ್ ರಶ್ಮಿಕ ಇಬ್ಬರ ನಟನೆಗೂ ಅಭಿಮಾನಿಗಳು ಫಿದಾ ಆಗಿದ್ದರು. ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ಈ ಚಿತ್ರ 350 ಕೋಟಿ ಅಧಿಕ ಕಲೆಕ್ಷನ್ ಕಾಣುವಲ್ಲಿ ಯಶಸ್ವಿಯೂ ಆಯ್ತು. ಪುಷ್ಪ ಚಿತ್ರದ ಮುಂದಿನ ಸೀಕ್ವೆಲ್ ತೆರೆಗೆ ತರಲೇಬೇಕು ಎನ್ನುವ ಬೇಡಿಕೆಯಿಂದಾಗಿ ಚಿತ್ರ ತಂಡ ಪುಷ್ಪ 2 ಚಿತ್ರ ನಿರ್ಮಿಸುವ ಯೋಚನೆ ಮಾಡಿತು. ಕಳೆದ ಆಗಸ್ಟ್ ನಲ್ಲೆ ಈ ಚಿತ್ರದ ಮುಹೂರ್ತ ನೆರವೇರಿದೆ. ಇನ್ನಾದರೂ ಈ ಚಿತ್ರದ ಚಿತ್ರೀಕರಣ ವೇಗವಾಗಿ ಸಾಗುತ್ತದೆ ಎಂದು ಅಭಿಮಾನಿಗಳು ಅಂದಾಜಿಸುತ್ತಿರುವಾಗ ಚಿತ್ರತಂಡ ಒಂದು ಶಾಕ್ ನೀಡಿದೆ. ನಟಿ ರಶ್ಮಿಕಾ ಮಂದಣ್ಣ ಅವರನ್ನು ಈ ಚಿತ್ರದಿಂದ ಕೈ ಬಿಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದನ್ನು ಓದಿ.. Kannada News: ಶಿವಣ್ಣ ರವರ ಹೇಳಿಕೆ ಸರಿಯಾಗಿಯೇ ಟಾಂಗ್ ಕೊಟ್ಟ ದರ್ಶನ್ ಫ್ಯಾನ್ಸ್: ದೊಡ್ಮನೆ vs ಡಿ ಬಾಸ್ ಅಸಲಿ ಆಟ ಶುರು. ಏನಾಗಿದೆ ಗೊತ್ತೇ??
350 ಕೋಟಿ ಕಲೆಕ್ಷನ್ ಮಾಡಿದ್ದ ಪುಷ್ಪ ಚಿತ್ರದ ಮೊದಲ ಸೀಕ್ವೆಲ್ ಇದೀಗ ಎರಡನೇ ಸೀಕ್ವೆಲ್ ನಲ್ಲಿ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಗುರಿ ಹೊಂದಲಾಗಿದೆಯಂತೆ. ಅಲ್ಲದೆ ದೊಡ್ಡ ಮಟ್ಟದ ಬಜೆಟ್ ನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಹಾಗೆಯೇ ಕಲಾವಿದರಿಗೂ ಕೂಡ ಈ ಮೊದಲಿಗಿಂತಲೂ ಹೆಚ್ಚಿನ ಸಂಭಾವನೆಯನ್ನು ಸಹ ನೀಡಲಾಗುತ್ತಿದೆಯಂತೆ. ಅದೇನೇ ಇರಲಿ ಆದರೆ ಇದೀಗ ಪುಷ್ಪ 2 ಚಿತ್ರದಲ್ಲಿ ರಶ್ಮಿಕ ಮಂದಣ್ಣ ಅವರನ್ನು ಕೈ ಬಿಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅವರ ಜಾಗಕ್ಕೆ ಬೇರೆ ನಟಿಯನ್ನು ಕರೆದು ತರಲಾಗಿದೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗಷ್ಟೇ ಸಾಯಿ ಪಲ್ಲವಿ ಅವರು ಈ ಚಿತ್ರಕ್ಕೆ ಸೇರಿಕೊಂಡಿರುವುದರ ಕುರಿತು ಸುದ್ದಿಯಾಗಿತ್ತು. ಆದರೆ ಸಾಯಿ ಪಲ್ಲವಿ (Sai Pallavi) ರಶ್ಮಿಕ ಅವರ ಶ್ರೀವಲ್ಲಿ ಪಾತ್ರವನ್ನೇ ಮಾಡುತ್ತಿದ್ದಾರೆ. ಹೀಗಾಗಿ ರಶ್ಮಿಕ ಮಂದಣ್ಣಗೆ ಪುಷ್ಪ 2 ಚಿತ್ರದಲ್ಲಿ ಜಾಗವಿಲ್ಲ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಸಾಯಿ ಪಲ್ಲವಿ ಶ್ರೀವಲ್ಲಿ ಪಾತ್ರವನ್ನು ಮಾಡುತ್ತಿಲ್ಲ, ಅವರು ಬೇರೊಂದು ಪ್ರಮುಖ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕ ಬದಲಿಗೆ ನಟಿ ಐಶ್ವರ್ಯ ರಾಜೇಶ್ (Aishwarya Rajesh) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಹ ಹೇಳಲಾಗುತ್ತಿದೆ. ಒಟ್ಟಿನಲ್ಲಿ ನಟಿ ರಶ್ಮಿಕಾ ಮಂದಣ್ಣ ಪುಷ್ಪ 2 ಚಿತ್ರದಲ್ಲಿ ಶ್ರೀವಲ್ಲಿ ಪಾತ್ರದ ಮೂಲಕ ಮುಂದುವರೆಯುತ್ತಾರೋ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಿದೆ. ಇದನ್ನು ಓದಿ.. Kannada News: ಮದುವೆ ಸುದ್ದಿ ಘೋಷಣೆ ಮಾಡಿದ ಪವಿತ್ರ: ಆದರೆ ಈ ಮದುವೆ ಮುರಿದು ಬಿದ್ದರೆ, ನರೇಶ್ ಎಷ್ಟು ಕೋಟಿ ಪರಿಹಾರ ಕೊಡಬೇಕು ಗೊತ್ತೇ? ಒಪ್ಪಂದವೇನು ಗೊತ್ತೇ?
Comments are closed.