Biggboss Kannada: ಅಂದು ಬಿಗ್ ಬಾಸ್ ಇಷ್ಟವಿಲ್ಲದೆ ಹೋಗಿದ್ದ ರಾಜಣ್ಣ, ಹೊರಹೋದಾಗ ಮುಲಾಜಿಲ್ಲದೆ ಪಡೆದ ಸಂಭಾವನೆ ಎಷ್ಟು ಗೊತ್ತೇ??

Biggboss Kannada: ಕುತೂಹಲ ಮೂಡಿಸಿದ್ದ ಬಿಗ್ ಬಾಸ್ ಸೀಸನ್ 9 (Bigg Boss Kannada Season 9) ಗ್ರಾಂಡ್ ಫಿನಾಲೆ ಮೂಲಕ ಮುಕ್ತಾಯಗೊಂಡಿದೆ. ಈ ಕಾರ್ಯಕ್ರಮದಲ್ಲಿ ರೂಪೇಶ್ ರಾಜಣ್ಣ (Roopesh Rajanna) ಮೂರನೇ ರನ್ನರ್ ಅಪ್ ಆಗಿದ್ದಾರೆ. ರೂಪೇಶ್ ರಾಜಣ್ಣ ಈ ಮೊದಲು ಕನ್ನಡಪರ ಹೋರಾಟಗಾರರಾಗಿ ಗುರುತಿಸಿಕೊಂಡವರು. ಕನ್ನಡ, ಕರ್ನಾಟಕದ ವಿಷಯವಾಗಿ ಯಾವುದೇ ಕಾರ್ಯಕ್ರಮ, ಅನ್ಯಾಯ, ಹೋರಾಟಗಳಿದ್ದರೂ ಅವುಗಳಲ್ಲಿ ಮುಂಚೂಣಿಯಾಗಿ ರೂಪೇಶ್ ರಾಜಣ್ಣ ಕಾಣಿಸಿಕೊಳ್ಳುತ್ತಿದ್ದರು. ಈ ಮೂಲಕ ಅವರು ಕನ್ನಡದ ಪರವಾಗಿ ಅಪಾರ ಕಳಕಳಿ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಇನ್ನು ಯಾವುದೇ ಹಿನ್ನೆಲೆ ಮತ್ತು ಜನಪ್ರಿಯತೆ ಇಲ್ಲದೆ ಬಿಗ್ ಬಾಸ್ (Bigg Boss) ಮನೆಗೆ ಎಂಟ್ರಿ ಕೊಟ್ಟ ರೂಪೇಶ್ ರಾಜಣ್ಣ ಗ್ರಾಂಡ್ ಫಿನಾಲೆವರೆಗೂ ಇದ್ದು ಇದೀಗ ಯಶಸ್ವಿಯಾಗಿಸಿದ್ದಾರೆ. ಅಂದ ಹಾಗೆ ಇದುವರೆಗೆ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದುದ್ದಕ್ಕಾಗಿ ಪಡೆದ ಸಂಭಾವನೆಯ ಕುರಿತಾಗಿ ಚರ್ಚೆ ನಡೆಯುತ್ತಿದೆ.

ಕನ್ನಡಪರ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ರೂಪೇಶ್ ರಾಜಣ್ಣ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಇವರು ಹೆಚ್ಚು ದಿನಗಳ ಕಾಲ ಇರಲಾರರು ಎಂದೇ ಭಾವಿಸಲಾಗಿತ್ತು. ಸಾಮಾನ್ಯವಾಗಿ ಉಳಿದ ಸ್ಪರ್ಧಿಗಳಿಗೆ ಹೋಲಿಸಿದರೆ ಇವರಿಗೆ ಹೆಚ್ಚಿನ ಜನಪ್ರಿಯತೆ ಇರಲಿಲ್ಲ. ಆದರೆ ಇವರ ಸ್ವಂತ ಪ್ರತಿಭೆ ಮತ್ತು ಆಟ ಆಡುವ ಶೈಲಿಯಿಂದಾಗಿ ದಿನೇ ದಿನೇ ಇವರ ಜನಪ್ರಿಯತೆ ಹೆಚ್ಚಾಗ ತೊಡಗಿತ್ತು. ವಾರದಿಂದ ವಾರಕ್ಕೆ ಅವರು ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದರು. ಆಟ, ಮನರಂಜನೆ, ಸ್ಪರ್ಧೆ, ಜಗಳ ಎಲ್ಲ ವಿಷಯದಲ್ಲಿಯೂ ಇವರು ಸದಾ ಮುಂದಿದ್ದರು. ಅಲ್ಲದೆ ಜನರಿಗೆ ರಾಜಣ್ಣ ಅವರ ಮುಗ್ಧತೆ ಹಾಗೂ ಮಗುವಿನಂತ ಮನಸ್ಸು ಸಹ ಇಷ್ಟವಾಯಿತು ಎಂದರೆ ತಪ್ಪಾಗಲಾರದು. ಇದೇ ಕಾರಣಕ್ಕೆ ಅವರನ್ನು ಪ್ರತಿವಾರವೂ ಅಭಿಮಾನಿಗಳು ವೋಟ್ ಮೂಲಕ ಉಳಿಸಿಕೊಂಡರು. ಆ ಮೂಲಕ ಅವರು ಗ್ರಾಂಡ್ ಫಿನಾಲೆವರೆಗೂ ತಲುಪಿದರು. ಇದನ್ನು ಓದಿ..Biggboss Kannada: ರೂಪೇಶ್ ರಾಜಣ್ಣ ಅಲ್ಲ, ರೂಪೇಶ್ ಶೆಟ್ಟಿ ನು ಅಲ್ಲ, ನಿಜಕ್ಕೂ ಯಾರು ಗೆಲ್ಲಬೇಕಾಗಿತ್ತು ಗೊತ್ತೇ? ಜನರು ಏನು ಹೇಳುತ್ತಿದ್ದಾರೆ ಗೊತ್ತೇ??

biggboss kannada roopesh rajanna 3 | Biggboss Kannada: ಅಂದು ಬಿಗ್ ಬಾಸ್ ಇಷ್ಟವಿಲ್ಲದೆ ಹೋಗಿದ್ದ ರಾಜಣ್ಣ, ಹೊರಹೋದಾಗ ಮುಲಾಜಿಲ್ಲದೆ ಪಡೆದ ಸಂಭಾವನೆ ಎಷ್ಟು ಗೊತ್ತೇ??
Biggboss Kannada: ಅಂದು ಬಿಗ್ ಬಾಸ್ ಇಷ್ಟವಿಲ್ಲದೆ ಹೋಗಿದ್ದ ರಾಜಣ್ಣ, ಹೊರಹೋದಾಗ ಮುಲಾಜಿಲ್ಲದೆ ಪಡೆದ ಸಂಭಾವನೆ ಎಷ್ಟು ಗೊತ್ತೇ?? 2

ರೂಪೇಶ್ ರಾಜಣ್ಣ ಅವರ ವಿಷಯದಲ್ಲಿ ಮತ್ತೊಂದು ವಿಶೇಷ ಅಂಶವೇನೆಂದರೆ ಗ್ರಾಂಡ್ ಫಿನಾಲೆಗೆ ತಲುಪಿದ ಅವರು, ಸ್ಪರ್ಧಿಗಳಲ್ಲಿ ನವೀನರ ವಿಭಾಗದಲ್ಲಿ ಗ್ರಾಂಡ್ ಫಿನಾಲೆವರೆಗೂ ಬಂದಿದ್ದ ಏಕೈಕ ವ್ಯಕ್ತಿ ಎಂದರೆ ಅದು ರಾಜಣ್ಣ. ಉಳಿದ ಎಲ್ಲಾ ಸ್ಪರ್ಧಿಗಳಿಗೆ ಈ ಮೊದಲೇ ಬಿಗ್ ಬಾಸ್ ಮನೆಯ ಕುರಿತ ಅನುಭವವಿತ್ತು. ಆದರೆ ಬಿಗ್ ಬಾಸ್ ಮನೆ ಹೇಗಿರುತ್ತದೆ ಎಂದೇ ಗೊತ್ತಿಲ್ಲದೆ ಮನೆಗೆ ಎಂಟ್ರಿಕೊಟ್ಟು ಗ್ರಾಂಡ್ ಫಿನಾಲೆವರೆಗೂ ತಲುಪಿದ್ದು ರೂಪೇಶ್ ರಾಜಣ್ಣ ಎನ್ನುವುದು ವಿಶೇಷವೇ ಸರಿ. ರಾಜಣ್ಣ ಬಿಗ್ ಬಾಸ್ ಸೀಸನ್ 9ರ 3ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇವರಿಗೆ ಗೆಲುವಿನ ಮೊತ್ತದ ರೂಪದಲ್ಲಿ ಮೂರು ಲಕ್ಷ ರೂಪಾಯಿ ಮೊತ್ತವನ್ನು ನೀಡಲಾಗಿದೆ. ಕೇವಲ ಇದು ಮಾತ್ರವಲ್ಲ ರಾಜಣ್ಣ ಅವರಿಗೆ ಪ್ರತಿ ವಾರವೂ 30,000 ರೂಪಾಯಿಯನ್ನು ಸಂಭಾವನೆಯ ರೂಪದಲ್ಲಿ ನೀಡಲಾಗುತ್ತಿತ್ತು. ಈ ಮೂಲಕ ಅವರು ಬಿಗ್ ಬಾಸ್ ಕಾರ್ಯಕ್ರಮದಿಂದ ಲಕ್ಷಾಂತರ ರೂಪಾಯಿ ಹಣವನ್ನು ಪಡೆದಿದ್ದಾರೆ. ಇದನ್ನು ಓದಿ.. Kannada News: ಆತನಿಗೆ ಅಷ್ಟು ವಯಸ್ಸಾಗಿದ್ದರೂ ಪವಿತ್ರ ರವರಿಗೆ ನರೇಶ್ ಮೇಲೆ ಪ್ರೀತಿ ಹುಟ್ಟಿದ್ದು ಹೇಗೆ ಗೊತ್ತೇ?? ಇದಕೆಲ್ಲ ಕಾರಣ ಏನು ಗೊತ್ತೇ??

Comments are closed.