Kannada News: ಬುದ್ದಿವಾದ ಹೇಳಿದ ಸುದೀಪ್ ಸರಿಯಾಗಿಯೇ ಟಾಂಗ್ ಕೊಟ್ಟ ರಶ್ಮಿಕಾ: ಸುದೀಪ್ ಸರ್ ಗೆ ಬಾರಿ ಮುಜುಗರ. ಏನಾಗಿದೆ ಗೊತ್ತೇ??
Kannada News: ರಶ್ಮಿಕಾ ಮಂದಣ್ಣ (Rashmika Mandanna) ಬಾಯಿ ಬಿಟ್ಟರೆ ಅದು ವಿವಾದವೇ ಆಗುತ್ತದೆ. ಅಷ್ಟರಮಟ್ಟಿಗೆ ಅವರು ಆಡುವ ಎಲ್ಲ ಮಾತುಗಳು ವಿವಾದಕ್ಕೆ ಕಾರಣವಾಗುತ್ತದೆ. ಏನೋ ಹೇಳಲು ಹೋಗಿ ಮತ್ತೇನನ್ನು ಹೇಳಿ ಪೇಚಿಗೆ ಸಿಲುಕುವ ಅನೇಕ ಸಂದರ್ಭಗಳನ್ನು ಸ್ವತಹ ರಶ್ಮಿಕ ಈಗಾಗಲೇ ಹಲವಾರು ಬಾರಿ ತಂದುಕೊಂಡಿದ್ದಾರೆ. ಆನಂತರ ಅವರು ಆಡಿದ ಮಾತುಗಳ ಬಗ್ಗೆ ಟೀಕೆಗಳು ಕೇಳಿ ಬಂದಾಗ ನನ್ನ ಉದ್ದೇಶ ಹಾಗಿರಲಿಲ್ಲ ಎಂದು ಮತ್ತೇ ಸಮರ್ಥನೆ ಕೊಡಲು ಹೋಗಿ ಸಮಸ್ಯೆಗೆ ಸಿಲುಕುತ್ತಾರೆ. ಅದರಲ್ಲೂ ಕರ್ನಾಟಕದಲ್ಲಿ ಅಂತೂ ರಶ್ಮಿಕಾ ಮಂದಣ್ಣ ಪದೇಪದೇ ಟ್ರೋಲ್ ಆಗುತ್ತಲೇ ಇರುತ್ತಾರೆ. ಇತ್ತೀಚಿಗೆ ನಟ ಸುದೀಪ್ (Sudeep) ಅವರು ಸಂದರ್ಶನ ಒಂದರಲ್ಲಿ ಸ್ಟಾರ್ ಗಳು ಎಂದ ಮೇಲೆ ಅವರಿಗೆ ಹಾರವು ಹಾಕುತ್ತಾರೆ, ಮೊಟ್ಟೆ ಕಲ್ಲು ಎಲ್ಲವೂ ಬೀಳುತ್ತದೆ. ಇದೆಲ್ಲವನ್ನು ಸ್ವೀಕರಿಸಬೇಕು ಎಂಬ ಅರ್ಥದ ಮಾತುಗಳನ್ನು ಹೇಳಿದ್ದರು. ಇದನ್ನು ನಟ ಸುದೀಪ್ ರಶ್ಮಿಕಾ ಅವರಿಗೆ ಹೇಳಿದ್ದರು. ಇನ್ನೂ ಈ ಸಂದರ್ಶನದ ಕುರಿತಾಗಿ, ಸುದೀಪ್ ಅವರ ಮಾತುಗಳ ಕುರಿತಾಗಿ ಇದೀಗ ರಶ್ಮಿಕ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚಿಗೆ ನಟ ಸುದೀಪ್ ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪ್ರಶ್ನೆ ಒಂದಕ್ಕೆ ಉತ್ತರಿಸಿದ್ದ ಅವರು ಪಬ್ಲಿಕ್ ಫಿಗರ್ ಎಂದ ಮೇಲೆ ಬರಿ ಹಾರ ಮಾತ್ರವಲ್ಲ, ಮೊಟ್ಟೆ ಕಲ್ಲು ಎಲ್ಲವೂ ಬೀಳುತ್ತವೆ. ಇಂತಹ ಸನ್ನಿವೇಶಗಳನ್ನು ಎದುರಿಸುವುದನ್ನು ಕಲಿಯಬೇಕು. ನಾವು ಸ್ಟ್ರಾಂಗ್ ಆಗಬೇಕು. ಏನು ಮಾತಾಡಬೇಕು ಹೇಗೆ ಮಾತನಾಡಬೇಕು ಎನ್ನುವುದನ್ನು ಕಲಿಯಬೇಕು. ಬಹಳ ಎಚ್ಚರಿಕೆವಹಿಸಿ ಮಾತನಾಡಬೇಕು. ಆರಂಭದಿಂದ ನೀವು ಇದರ ಕಡೆಗೆ ಗಮನಹರಿಸಿ ಎಚ್ಚರಿಕೆ ವಹಿಸಿದರೆ ಯಾವ ಸಮಸ್ಯೆಯೂ ಆಗುವುದಿಲ್ಲ. ಸೋಶಿಯಲ್ ಮೀಡಿಯಾ ಬಳಸಬೇಕು, ಅದರಲ್ಲಿ ಅಕೌಂಟ್ ಇರಬೇಕು. ನಮ್ಮನ್ನು 2 ಮಿಲಿಯನ್, 20 ಮಿಲಿಯನ್ ಜನರು ಫಾಲೋ ಮಾಡಬೇಕು ಎಂದು ಬಯಸುವುದಾದರೆ, ಅದರ ಜೊತೆಗೆ ಜನರ ಟೀಕೆ ನಕರಾತ್ಮಕ ಪ್ರತಿಕ್ರಿಯೆಗಳನ್ನು ತೆಗೆದುಕೊಳ್ಳಬೇಕು. ನೆಗೆಟಿವಿಟಿ ಮಾತ್ರ ಬೇಡ ಎಂದರೆ ಹೇಗೆ ಎಂದು ಅವರು ಹೇಳಿದ್ದರು.
ಇದೀಗ ಇತ್ತೀಚಿಗೆ ನಟಿ ರಶ್ಮಿಕಾ ಮಂದಣ್ಣ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಅವರು ಮಿಷನ್ ಮಜ್ನು ಪ್ರಚಾರದ ವೇಳೆ ಬಾಲಿವುಡ್ ಸಾಂಗ್ಸ್ ಮತ್ತು ಸೌತ್ ಸಾಂಗ್ಸ್ ಕುರಿತಾಗಿ ಹೇಳಿದ್ದ ಹೇಳಿಕೆ ವಿವಾದದ ರೂಪ ತಳೆದಿದ್ದರ ಕುರಿತಾಗಿ ಸ್ಪಷ್ಟನೆ ನೀಡಿದರು. ತಮ್ಮ ಹಾಗೂ ವಿಜಯ್ ದೇವರಕೊಂಡ ಅವರ ಸಂಬಂಧದ ಕುರಿತ ವದಂತಿಗಳ ಬಗ್ಗೆ ಕೂಡ ಅವರು ಕ್ಲಾರಿಟಿ ನೀಡಿದರು. ಈ ವೇಳೆ ಈ ಹಿಂದೆ ಸುದೀಪ್ ರಶ್ಮಿಕ ಕುರಿತಾಗಿ ಆಡಿದ ಮಾತುಗಳು ಎಂದು ಹೇಳಲಾದ ಸಂದರ್ಶನದ ಹೇಳಿಕೆಯ ಕುರಿತಾಗಿ ಅವರು ಪ್ರತಿಕ್ರಿಯಿಸಿದ್ದಾರೆ. “ನಾನು ಇತ್ತೀಚಿಗೆ ನನ್ನ ನೆಚ್ಚಿನ ನಟರೊಬ್ಬರ ಸಂದರ್ಶನವನ್ನು ನೋಡಿದೆ. ಅದರಲ್ಲಿ ಅವರು ಸ್ಟಾರ್ ಸೆಲೆಬ್ರೆಟಿಗಳಿಗೆ ಹಾರ, ಕಲ್ಲು, ಮೊಟ್ಟೆ ಎಲ್ಲವೂ ಬೀಳುತ್ತವೆ. ಎಲ್ಲವನ್ನು ಎದುರಿಸಲು ಕಲಿಯಬೇಕು ಎಂದು ಹೇಳಿದ್ದರು. ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ಪಬ್ಲಿಕ್ ಫಿಗರ್ ಎಂದ ಮೇಲೆ ಎಲ್ಲವನ್ನು ಸ್ವೀಕರಿಸಲೇ ಬೇಕಾಗುತ್ತದೆ. ಆದರೆ ನನ್ನ ಮೇಲೆ ಬೀಳುವ ಕಲ್ಲು ನನಗೆ ಪೆಟ್ಟು ಮಾಡುತ್ತದೆ, ಅದರಿಂದ ನನಗೆ ನೋವಾಗಿ ರಕ್ತ ಸುರಿಯುತ್ತದೆ ಎಂದರೆ ನಾನು ಅದನ್ನು ಒಪ್ಪಲು ಸಾಧ್ಯವಿಲ್ಲ. ಅದಕ್ಕಾಗಿ ನಾನು ಏನಾದರೂ ಮಾಡಲೇಬೇಕಾಗುತ್ತದೆ” ಎಂದು ನಟಿ ರಶ್ಮಿಕ ಪ್ರತಿಕ್ರಿಯಿಸಿದ್ದಾರೆ.
Comments are closed.