Kannada News: ನೀವು ಪ್ಲಾಸ್ಟಿಕ್ ಅಕ್ಕಿ ತಿನ್ನುತ್ತಿದ್ದೀರಾ?? ಸಾಮಾನ್ಯ ಅಕ್ಕಿಯೇ ಅಥವಾ ಪ್ಲಾಸ್ಟಿಕ್ ಅಕ್ಕಿಯೇ ಎಂದು ಪರೀಕ್ಷೆ ಮಾಡುವುದು ಹೇಗೆ ಗೊತ್ತೇ??

Kannada News: ಈಗ ಮಾರುಕಟ್ಟೆಯಲ್ಲಿ ಕಲಬೆರಕೆ ಒಂದು ದೊಡ್ಡ ದಂಧೆಯಾಗಿ ಹೋಗಿದೆ. ತಿನ್ನುವ ಆಹಾರ, ಪಾನೀಯ, ನೀರು, ಸಾಂಬಾರ ಪದಾರ್ಥಗಳು, ತರಕಾರಿ ಎಲ್ಲೆಂದರಲ್ಲಿ ವಿಷಯುಕ್ತ ಕಲಬೆರಕೆಯ ಹಾವಳಿ ಅತಿಯಾಗಿದೆ. ಅಲ್ಲದೆ ನಾವು ತಿನ್ನುವ ಅಕ್ಕಿ ಕೂಡ ಕಲಬೆರಕೆ ಆಗಿದ್ದು, ಪ್ಲಾಸ್ಟಿಕ್ ಅಕ್ಕಿ ದಂಧೆ ಶುರುವಾಗಿರುವುದು ಆಗಾಗ ವರದಿಯಾಗುತ್ತಲೇ ಇರುತ್ತದೆ. ಪ್ಲಾಸ್ಟಿಕ್ ಅಕ್ಕಿ ಅತ್ಯಂತ ವಿಷಯುಕ್ತ ಆಗಿದ್ದು ಇದನ್ನು ತಿನ್ನುವುದರಿಂದಾಗಿ ಕ್ಯಾನ್ಸರ್ ಸೇರಿದಂತೆ ವಿವಿಧ ಮಾರಣಾಂತಿಕ ಕಾಯಿಲೆಗಳಿಗೆ ಗುರಿಯಾಗುವ ಸಾಧ್ಯತೆ ದಟ್ಟವಾಗಿದೆ. ಆದರೆ ಇದರಿಂದ ಆತಂಕ ಪಡುವ ಅಗತ್ಯವಿಲ್ಲ, ಏಕೆಂದರೆ ನಾವು ತಿನ್ನುವ ಅಕ್ಕಿ ಪ್ಲಾಸ್ಟಿಕ್ ಅಥವಾ ನೈಸರ್ಗಿಕವಾದದ್ದು ಎನ್ನುವುದನ್ನು ಪತ್ತೆ ಹಚ್ಚಲು ಕೆಲವು ವಿಧಾನಗಳನ್ನು ತಿಳಿದುಕೊಂಡರೆ ಸಾಕು.

ಪ್ಲಾಸ್ಟಿಕ್ ಅಕ್ಕಿಯನ್ನು ಬೇಯಿಸಿದ ನಂತರವೂ ಸಹ ಇದು ಸ್ವಾಭಾವಿಕವಾದದ್ದ ಅಥವಾ ಪ್ಲಾಸ್ಟಿಕ್ ಅಕ್ಕಿಯೇ ಎಂದು ಗುರುತಿಸುವುದು ಕಷ್ಟಕರ ಎಂದು ಹೇಳಬಹುದು. ಒಂದು ಬಟ್ಟಲಿನಲ್ಲಿ ಸುಣ್ಣದೊಂದಿಗೆ ಇರಿಸಿದ ಅಕ್ಕಿಗಳನ್ನು ತೆಗೆದುಕೊಳ್ಳಿ. ಸುಣ್ಣ ಮತ್ತು ನೀರನ್ನು ಬೆರೆಸಿ ಮಿಶ್ರಣ ತಯಾರಿಸಿಕೊಳ್ಳಿ. ಈ ನೀರಿನ ಮಿಶ್ರಣಕ್ಕೆ ಅಕ್ಕಿಯನ್ನು ಹಾಕಿರಿ, ಸ್ವಲ್ಪಕಾಲ ಈ ಅಕ್ಕಿ ಮಿಶ್ರಣದಲ್ಲಿ ನೆನೆಯಲು ಬಿಡಿ. ಒಂದು ವೇಳೆ ಕೆಲವು ಹೊತ್ತಿನ ನಂತರ ಅಕ್ಕಿ ಬಣ್ಣವನ್ನು ಕಳೆದುಕೊಂಡರೆ ಅಥವಾ ಬಣ್ಣ ಬದಲಾದರೆ ಅದು ಖಂಡಿತವಾಗಿಯೂ ಪ್ಲಾಸ್ಟಿಕ್ ಅಕ್ಕಿ ಆಗಿರುತ್ತದೆ. ಇದನ್ನು ಓದಿ..Kannada News: ಚಿರಂಜೀವಿ ಧರಿಸಿರುವ ಈ ವಾಚ್ ಕೇಳಿದರೆ, ಒಂದು ಕ್ಷಣ ಬೆಚ್ಚಿ ಬೆರಗಾಗಿ ನಿಂತು ಬಿಡ್ತೀರಾ. ಒಂದು ವಾಚ್ ಗೆ ಇಷ್ಟೊಂದಾ??

kannada news rice | Kannada News: ನೀವು ಪ್ಲಾಸ್ಟಿಕ್ ಅಕ್ಕಿ ತಿನ್ನುತ್ತಿದ್ದೀರಾ?? ಸಾಮಾನ್ಯ ಅಕ್ಕಿಯೇ ಅಥವಾ ಪ್ಲಾಸ್ಟಿಕ್ ಅಕ್ಕಿಯೇ ಎಂದು ಪರೀಕ್ಷೆ ಮಾಡುವುದು ಹೇಗೆ ಗೊತ್ತೇ??
Kannada News: ನೀವು ಪ್ಲಾಸ್ಟಿಕ್ ಅಕ್ಕಿ ತಿನ್ನುತ್ತಿದ್ದೀರಾ?? ಸಾಮಾನ್ಯ ಅಕ್ಕಿಯೇ ಅಥವಾ ಪ್ಲಾಸ್ಟಿಕ್ ಅಕ್ಕಿಯೇ ಎಂದು ಪರೀಕ್ಷೆ ಮಾಡುವುದು ಹೇಗೆ ಗೊತ್ತೇ?? 2

ಮತ್ತೊಂದು ವಿಧಾನವೆಂದರೆ ಅಕ್ಕಿಯನ್ನು ಗ್ಯಾಸ್ ಅಥವಾ ಬೆಂಕಿಯ ಮೇಲೆ ಹಾಕಿ. ಒಂದು ವೇಳೆ ಅಕ್ಕಿ ಬೆಂಕಿಯಲ್ಲಿ ಸುಡುವಾಗ ಪ್ಲಾಸ್ಟಿಕ್ ಸುಡುವ ವಾಸನೆ ಬಂದರೆ ಅದು ಖಂಡಿತವಾಗಿಯೂ ಪ್ಲಾಸ್ಟಿಕ್ ಅಕ್ಕಿ ಅನ್ನುವುದು ಖಚಿತ. ಅಲ್ಲದೆ ಕಾದ ಎಣ್ಣೆಗೆ ಪ್ಲಾಸ್ಟಿಕ್ ಅಕ್ಕಿಯನ್ನು ಹಾಕಿದರೆ ಆ ಅಕ್ಕಿ ಕರಗುತ್ತದೆ. ಸ್ವಾಭಾವಿಕ ಅಕ್ಕಿಯಾದರೆ ಕರಗುವುದಿಲ್ಲ. ಈ ಮೂಲಕವೂ ಪ್ಲಾಸ್ಟಿಕ್ ಅಕ್ಕಿಯನ್ನು ಪತ್ತೆ ಹಚ್ಚಬಹುದು. ಪ್ಲಾಸ್ಟಿಕ್ ಅಕ್ಕಿಯನ್ನು ನೀರಿಗೆ ಹಾಕಿದಾಗ ಅದು ಕೆಳಗಡೆ ತಳಕ್ಕೆ ಸೇರುವ ಬದಲು ನೀರಿನಲ್ಲಿ ತೇಲುತ್ತದೆ. ಇನ್ನು ಪ್ಲಾಸ್ಟಿಕ್ ಅಕ್ಕಿಯನ್ನು ಕುದಿಸುವಾಗ ಪಾತ್ರೆಯ ಮೇಲ್ಭಾಗ ದಪ್ಪನೆಯ ಪದರದ ರೀತಿಯಲ್ಲಿ ಕಾಣಿಸುತ್ತದೆ. ಅಕ್ಕಿಯನ್ನು ಬೇಯಿಸಿದ ನಂತರ ಅದನ್ನು ಬಳಸದೆ ಕೆಲವು ದಿನಗಳವರೆಗೆ ಇಡಬೇಕು. ಪ್ಲಾಸ್ಟಿಕ್ ಅಕ್ಕಿ ಆದರೆ ಅದು ಕೆಡುವುದಿಲ್ಲ, ಹಾಳಾಗುವುದಿಲ್ಲ. ಜೊತೆಗೆ ಯಾವುದೇ ರೀತಿಯ ವಾಸನೆಯೂ ಬರುವುದಿಲ್ಲ. ಆ ಮೂಲಕವೂ ಪ್ಲಾಸ್ಟಿಕ್ ಅಕ್ಕಿಯೆ ಎನ್ನುವುದನ್ನು ಪತ್ತೆ ಹಚ್ಚಬಹುದಾಗಿದೆ. ಇದನ್ನು ಓದಿ..Tips: ತಾಜಾ ಮೀನು ಆಯ್ಕೆ ಮಾಡುವುದು ಹೇಗೆ ಗೊತ್ತೇ?? ಮೀನು ಫ್ರೆಶ್ ಆಗಿದೆಯೋ ಇಲ್ಲವೋ ಎಂದು ಸುಲಭವಾಗಿ ಕಂಡು ಹಿಡಿಯುವುದು ಹೇಗೆ ಗೊತ್ತೇ??

Comments are closed.