Kannada News: ಪಠಾಣ್ ಸಿನಿಮಾ ಬಾಯ್ ಕಾಟ್ ಮಾಡಿದವರ ವಿರುದ್ಧ ನಾಲಿಗೆ ಹರಿಬಿಟ್ಟ ಪ್ರಕಾಶ್ ರಾಜ್. ಹೇಳಿದ್ದೇನು ಗೊತ್ತೇ??
Kannada News: ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ಬಿಡುಗಡೆಗಿಂತ ಮೊದಲು ಭಾರಿ ವಿವಾದಗಳನ್ನು ಸೃಷ್ಟಿ ಮಾಡಿತ್ತು, ಆದರೆ ಬಿಡುಗಡೆಯಾದ ನಂತರ ದೊಡ್ಡ ಬ್ಲಾಕ್ ಬಸ್ಟರ್ ಹಿಟ್ ಎನ್ನಿಸಿಕೊಂಡಿದೆ. ಪಠಾಣ್ ಸಿನಿಮಾ ನೋಡಿದವರು ವಾವ್ ಎನ್ನುತ್ತಿದ್ದಾರೆ. ಬಿಡುಗಡೆಯಾಗಿ ನಾಲ್ಕೇ ದಿನಕ್ಕೆ 400 ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡಿದ್ದ ಪಠಾಣ್, ಈಗ 700 ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿದೆ ಎನ್ನುವುದು ವಿಶೇಷ. ಮೊದಲಿಗೆ ಈ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎಂದು ಹಲವರು ಅಂದುಕೊಂಡಿದ್ದರು. ಇದೀಗ ಈ ವಿಚಾರದ ಬಗ್ಗೆ ನಟ ಪ್ರಕಾಶ್ ರಾಜ್ ಅವರು ಹೇಳಿಕೆ ನೀಡಿದ್ದಾರೆ.
ಪ್ರಕಾಶ್ ರಾಜ್ ಅವರು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ, ಚಿತ್ರರಂಗ ಮತ್ತು ರಾಜಕೀಯ ಎರಡರಲ್ಲೂ ಸಕ್ರಿಯರಾಗಿರುವ ಇವರು ಆಗಾಗ ತಾವು ನೀಡುವ ಹೇಳಿಕೆಗಳಿಂದ ಸುದ್ದಿಯಾಗುತ್ತಾರೆ. ಕೆಲವರಿಗೆ ಇವರು ಮಾತನಾಡುವ ಶೈಲಿ ಇಷ್ಟ ಆಗುವುದಿಲ್ಲ. ಇದೀಗ ಪ್ರಕಾಶ್ ರಾಜ್ ಅವರು ಪಠಾಣ್ ಸಿನಿಮಾ ಬಾಯ್ಕಾಟ್ ಮಾಡಬೇಕು ಎಂದವರ ಬಗ್ಗೆ ಕಟುವಾಗಿ ಹೇಳಿಕೆ ನೀಡಿ, ಮೋದಿ ಅವರ ಬಯೋಪಿಕ್ ಅನ್ನು ಟೀಕೆ ಮಾಡಿದ್ದಾರೆ. “ಪಠಾಣ್ ಸಿನಿಮಾನ ಬಾಯ್ಕಾಟ್ ಮಾಡಬೇಕು ಅಂದುಕೊಂಡಿದ್ರು. ಆದರೆ ಆ ಸಿನಿಮಾ 700 ಕೋಟಿ ಕಲೆಕ್ಷನ್ ಮಾಡಿದೆ. ಇದನ್ನು ಓದಿ..Kannada News: ಆತ ನೋಡೋಕೆ ಹಾಗೆ ಇದ್ದರೂ ಕೂಡ ರಾಧಿಕಾ ರವರು ಅಂಬಾನಿ ಸೊಸೆಯಾಗುತ್ತಿರುವುದು ಯಾಕೆ ಗೊತ್ತೇ? ಇದರ ಹಿಂದಿರುವ ಕಾರಣವೇನು ಗೊತ್ತೇ??

ದಡ್ಡರು ಹಾಗೂ ಮತಾಂಧರು ಪಠಾಣ್ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದುಕೊಂಡರು, ಆದರೆ ಮೋದಿ ಸಿನಿಮಾಗೆ 30 ಕೋಟಿ ಕಲೆಕ್ಷನ್ ಆಗುವ ಹಾಗೆ ಮಾಡೋದಕ್ಕೂ ಅವರ ಕೈಲಿ ಆಗ್ಲಿಲ್ಲ..” ಎಂದು ನಟ ಪ್ರಕಾಶ್ ರಾಜ್ ಅವರು ಟೀಕೆ ಮಾಡಿದ್ದಾರೆ. ಇದೀಗ ಇವರು ನೀಡಿರುವ ಹೇಳಿಕೆ ವೈರಲ್ ಆಗಿದೆ. ಪಠಾಣ್ ಮತ್ತು ಮೋದಿ ಬಯೋಪಿಕ್ ಮಾತ್ರವಲ್ಲದೆ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಟೀಕೆ ಮಾಡಿದ್ದಾರೆ. ಅದೊಂದು ನಾನ್ಸೆನ್ಸ್ ಸಿನಿಮಾ, ಆ ಸಿನಿಮಾ ನಿರ್ದೇಶಕ ನಮ್ಮ ಸಿನಿಮಾಗೆ ಯಾಕೆ ಆಸ್ಕರ್ ಬಂದಿಲ್ಲ ಎನ್ನುತ್ತಿದ್ದಾರೆ ಎಂದು ಪ್ರಕಾಶ್ ರಾಜ್ ಅವರು ಟೀಕೆ ಮಾಡಿದ್ದಾರೆ. ಇದನ್ನು ಓದಿ..Kannada News: ದರ್ಶನ್ ವಿರುದ್ಧ ಕೇಳಿ ಬಂದ ಬಾರಿ ಟೀಕೆಗೆ, ತಾನೇ ಉತ್ತರ ನೀಡಿದ ವಿಜಯಲಕ್ಷ್ಮಿ. ಹೇಳಿದ್ದೇನು ಗೊತ್ತೇ??
Comments are closed, but trackbacks and pingbacks are open.