Kannada News: ದತ್ತಣ್ಣ ಪಾತ್ರಕ್ಕೆ ಸಂಭಾವನೆ ಕಡಿಮೆ ಎಂದ ಫ್ಯಾನ್ಸ್, ಅದಕ್ಕೆ ದಿಡೀರ್ ಎಂದು ಸಂಭಾವನೆ ಜಾಸ್ತಿ ಮಾಡಿದ ತಂಡ. ಈಗ ಒಂದು ಎಪಿಸೋಡಿಗೆ ಎಷ್ಟು ಗೊತ್ತೇ??
Kannada News: ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ದಾರವಾಹಿಯು ಸದ್ಯ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ನಟಿ ಸುಧಾರಾಣಿ (Sudharani) ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಧಾರವಾಹಿ ತನ್ನ ವಿಶಿಷ್ಟ ರೀತಿಯ ಕಥೆಯಿಂದಲೇ ಜನರನ್ನು ಸೆಳೆಯುತ್ತಲಿದೆ. ಇನ್ನು ನಮ್ಮನೆ ಯುವರಾಣಿ ಖ್ಯಾತಿಯ ದೀಪಕ್ ಹಾಗೂ ಚಂದನ ರಾಘವೇಂದ್ರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಅಜಿತ್ ಹಂದೆಯವರು ಮಾಧವನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತುಳಸಿ ಮಾಧವರ ಸ್ನೇಹ ಜನರಿಗೆ ಬಹಳ ಇಷ್ಟವಾಗಿದೆ. ಇನ್ನು ಸದಾ ಯಾವಾಗಲೂ ಕೋಪ ಮಾಡಿಕೊಂಡು ಸಿಡುಕುವ ತಾತ ದತ್ತಣ್ಣನ ಪಾತ್ರದಲ್ಲಿ ಹಿರಿಯ ನಟ ವೆಂಕಟರಾವ್ ಅಭಿನಯಿಸುತ್ತಿದ್ದಾರೆ.
ದತ್ತಣ್ಣನ ಪಾತ್ರವನ್ನು ಹಿರಿಯ ನಟ ವೆಂಕಟರಾವ್ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಹಲವಾರು ಧಾರವಾಹಿ ಮತ್ತು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಇನ್ನು ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ತಾತನ ಪಾತ್ರದಲ್ಲಿ ಅವರ ಅಭಿನಯ ಎಲ್ಲರಿಗೂ ಮೆಚ್ಚುಗೆಯಾಗಿದೆ. ಸದಾ ಮನೆಯವರ ಮೇಲೆ ಸಿಡುಕುವ ಪಾತ್ರ ಇದಾಗಿದೆ. ಎಲ್ಲರೂ ತನ್ನನ್ನು ಇಷ್ಟಪಡಬೇಕು, ಗೌರವಿಸಬೇಕು, ತನ್ನ ಮಾತೇ ನಡೆಯಬೇಕು ಎನ್ನುವ ರೀತಿಯ ಪಾತ್ರ ಇದಾಗಿದೆ. ಸಾಕಷ್ಟು ಮನೆಯಲ್ಲಿ ಹಿರಿಯ ವ್ಯಕ್ತಿಗಳ ವರ್ತನೆಯನ್ನು ಬಿಂಬಿಸುವ ಪಾತ್ರ ಇದಾಗಿದೆ ಎಂದರೆ ತಪ್ಪಾಗಲಾರದು. ಕೊಂಚ ಕಿರಿಕಿರಿ ಎನಿಸಿದರು ಕೂಡ ಈ ಪಾತ್ರ ಒಳ್ಳೆಯ ಪಾತ್ರವೇ ಆಗಿದೆ. ಇದನ್ನು ಓದಿ..Kannada News: ದರ್ಶನ್ ವಿರುದ್ಧ ಕೇಳಿ ಬಂದ ಬಾರಿ ಟೀಕೆಗೆ, ತಾನೇ ಉತ್ತರ ನೀಡಿದ ವಿಜಯಲಕ್ಷ್ಮಿ. ಹೇಳಿದ್ದೇನು ಗೊತ್ತೇ??
ಮನೆಯವರ ಮೇಲೆ ಪ್ರೀತಿ, ಕಾಳಜಿ ಇದ್ದರೂ ಕೂಡ ಅದನ್ನು ತೋರಿಸಿಕೊಳ್ಳದೆ ಎಲ್ಲರನ್ನೂ ಕೂಡ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂಬಂತೆ ದತ್ತಣ್ಣ ವರ್ತಿಸುತ್ತಾರೆ. ಇವರು ಏನೇ ಮಾಡಿದರು ತಾತನ ಮೇಲೆ ಮನೆಯ ಎಲ್ಲರಿಗೂ ಕೂಡ ಅತಿಯಾದ ಪ್ರೀತಿ. ಸೊಸೆ, ಮೊಮ್ಮಗ ಎಲ್ಲರಿಗೂ ಕೂಡ ತಾತನೆಂದರೆ ಅಚ್ಚು ಮೆಚ್ಚು. ಸದ್ಯ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಎಲ್ಲ ಪಾತ್ರಗಳ ಹಾಗೆ ದತ್ತಣ್ಣನ ಪಾತ್ರವೂ ಕೂಡ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಅಂದಹಾಗೆ ಇವರ ಅಭಿನಯಕ್ಕೆ ಪ್ರತಿ ಎಪಿಸೋಡ್ ಗೆ 40,000 ಸಂಭಾವನೆ ನೀಡಲಾಗುತ್ತಿತ್ತು. ಆದರೆ ಅಭಿಮಾನಿಗಳು ಈ ಪಾತ್ರಕ್ಕೆ ಇನ್ನಷ್ಟು ಸಂಭಾವನೆ ನೀಡಿ, ಇವರು ಚೆನ್ನಾಗಿ ಅಭಿನಯಿಸುತ್ತಾರೆ ಎಂದು ಕೇಳಿಕೊಂಡ ನಂತರ ಧಾರಾವಾಹಿ ನಿರ್ಮಾಪಕರ ತಂಡ ದತ್ತಣ್ಣ ಪಾತ್ರಧಾರಿಗೆ ಇದೀಗ ಪ್ರತಿ ಎಪಿಸೋಡ್ ಗೆ 60,000 ರೂಪಾಯಿ ಸಂಭಾವನೆ ನೀಡುತ್ತಿದೆ. ಇದನ್ನು ಓದಿ..Kannada News: ಪಠಾಣ್ ಸಿನಿಮಾ ಬಾಯ್ ಕಾಟ್ ಮಾಡಿದವರ ವಿರುದ್ಧ ನಾಲಿಗೆ ಹರಿಬಿಟ್ಟ ಪ್ರಕಾಶ್ ರಾಜ್. ಹೇಳಿದ್ದೇನು ಗೊತ್ತೇ??
Comments are closed.