Cricket News: ತಾನು ಯಶಸ್ಸು ಗೊಳ್ಳುತ್ತಿಲ್ಲ ಎಂದು ಅರಿತ ರಾಹುಲ್, ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ?? ಮದುವೆಯಾದ ಮೇಲೆ ಮೊದಲ ಗಟ್ಟಿ ನಿರ್ಧಾರ.

Cricket News: ಟೀಮ್ ಇಂಡಿಯಾ (Team India) ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ (Border Gavaskar Trophy0 ಟೆಸ್ಟ್ ಸರಣಿ ಆಡಲಿದೆ. ಭಾರತಕ್ಕೆ ಈ ವರ್ಷ ಅತ್ಯಂತ ಸವಾಲಿನದಾಗಿರುವ ಈ ಪಂದ್ಯ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿ ಇದಾಗಿದ್ದು ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ (ICC World Test Championship) ಟೂರ್ನಿಯ ಎರಡನೇ ಆವೃತ್ತಿಯಲ್ಲಿ ಫೈನಲ್ ತಲುಪಲು ಭಾರತ ತಂಡ ಈ ಸರಣಿಯಲ್ಲಿ ಗೆಲ್ಲಲೇ ಬೇಕಿದೆ. ಈ ನಿಟ್ಟಿನಲ್ಲಿ ತಂಡದಲ್ಲಿ ಆಡಲು ಬಲಿಷ್ಠ 11 ಆಟಗಾರರ ಜೊತೆಗೆ ಕಣಕ್ಕಿಳಿಯಬೇಕಿದೆ. ಆದರೆ ಈ ವೇಳೆ ತಂಡಕ್ಕೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿರುವುದು ಎಂದರೆ ಅದು ತಂಡದ ಆರಂಭಿಕರ ಆಯ್ಕೆ.

ಓಪನರ್ ಆಗಿ ರೋಹಿತ್ ಶರ್ಮ (Rohit Sharma) ನಿಶ್ಚಿತ. ಅವರ ಜೊತೆಗೆ ಕೆ ಎಲ್ ರಾಹುಲ್ (K L Rahul) ಅವರನ್ನು ಬಿಡುವುದು ಅಥವಾ ಶ್ರೇಷ್ಠ ಲಯ ಉಳಿಸಿಕೊಂಡು ಆಡುತ್ತಿರುವ ಶುಭಮನ್ ಗಿಲ್ (Shubhman Gill) ಅವರನ್ನು ಓಪನ್ ಆಗಿ ಕಣಕ್ಕೆ ಇಳಿಸುವುದೋ ಎನ್ನುವುದು ತಂಡಕ್ಕೆ ಚಿಂತೆಯಾಗಿದೆ. ಭಾರತ ಟೆಸ್ಟ್ ಪಂದ್ಯಗಳ ಓಪನರ್ ಆಗಿ ಈಗಾಗಲೇ ಕೆ ಎಲ್ ರಾಹುಲ್ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಆದರೆ ಇತ್ತೀಚಿನ ಕೆಲವು ಪಂದ್ಯಗಳಲ್ಲಿ ಅವರು ತಮ್ಮ ಫಾರ್ಮ್ ಕಳೆದುಕೊಂಡಿದ್ದಾರೆ. ಅದನ್ನು ಸ್ವತಹ ಅವರೇ ಹೇಳಿಕೊಂಡು ಬೇಸರಪಟ್ಟಿಕೊಂಡಿದ್ದರು. ಅಖಾಡದಲ್ಲಿ ಅವರು ರನ್ ಗಳ ಮಳೆ ಸುರಿಸಲು ವಿಫಲರಾಗಿದ್ದಾರೆ. ಆದರೆ ಇತ್ತ ಶುಭಮನ್ ಗಿಲ್ ಒಪನರ್ ಆಗಿ ರನ್ ಗಳ ಮಳೆಗೆರೆದಿದ್ದಾರೆ. ತಮ್ಮ ಸಾಮರ್ಥ್ಯ ಏನು ಎನ್ನುವುದನ್ನು ತೋರಿಸಿದ್ದಾರೆ. ಇದೇ ಕಾರಣಕ್ಕೆ ಓಪನರ್ ಆಗಿ ರೋಹಿತ್ ಶರ್ಮ ಜೊತೆಗೆ ಯಾರನ್ನು ಆಯ್ಕೆ ಮಾಡುವುದು ಎನ್ನುವುದು ತಂಡದ ತಲೆಬಿಸಿಗೆ ಕಾರಣವಾಗಿದೆ.

cricket news kl rahul about new batting plance kannada news | Cricket News: ತಾನು ಯಶಸ್ಸು ಗೊಳ್ಳುತ್ತಿಲ್ಲ ಎಂದು ಅರಿತ ರಾಹುಲ್, ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ?? ಮದುವೆಯಾದ ಮೇಲೆ ಮೊದಲ ಗಟ್ಟಿ ನಿರ್ಧಾರ.
Cricket News: ತಾನು ಯಶಸ್ಸು ಗೊಳ್ಳುತ್ತಿಲ್ಲ ಎಂದು ಅರಿತ ರಾಹುಲ್, ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ?? ಮದುವೆಯಾದ ಮೇಲೆ ಮೊದಲ ಗಟ್ಟಿ ನಿರ್ಧಾರ. 2

ಈ ಕುರಿತಾಗಿ ಮಾಧ್ಯಮದವರ ಜೊತೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಕೆ ಎಲ್ ರಾಹುಲ್ “ತಂಡದ ಅಗತ್ಯದ ಅನುಸಾರ ತಾನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಸಿದ್ಧರಿರುವುದಾಗಿ ಹೇಳಿದ್ದಾರೆ. “ಹೊಸ ಸವಾಲುಗಳಿಗೆ ನಾನು ಸಜ್ಜಾಗಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ತಂಡದ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಹೀಗಾಗಿ ಒಂದು ವೇಳೆ ನನ್ನನ್ನು ಮಧ್ಯಮ ಕ್ರಮಾಂಕದಲ್ಲಿ ಆಡಲು ನಿರ್ದೇಶಿಸಿದರೆ ನಾನು ಅದಕ್ಕೆ ಸಿದ್ಧನಿದ್ದೇನೆ. ನಾನು ಯಾವುದೇ ಕ್ರಮಕದಲ್ಲಿ ಆಡಲು ಸಹ ಸಜ್ಜಾಗಿದ್ದೇನೆ. ಒಬ್ಬ ಆಟಗಾರನಿಗೆ ಇದೆ ಕ್ರಮಾಂಕ ಎನ್ನುವುದು ಇಲ್ಲ. ನನಗೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ನಾನು ಆರಂಭಿಕ ಆಟಗಾರನಾಗಿಯೇ ಆಡಬೇಕು ಎಂದೇನು ಅಂದುಕೊಂಡಿಲ್ಲ. ನಾನು ಮಧ್ಯಮ ಕ್ರಮಾಂಕದಲ್ಲೂ ಆಡಲು ಸಿದ್ಧನಿದ್ದೇನೆ” ಎಂದು ಅವರು ಮಾಧ್ಯಮದವರ ಜೊತೆಗೆ ಹೇಳಿದ್ದಾರೆ.

Comments are closed.