Kannada News: ದೈವ ಅನುಮತಿ ನೀಡಿದರು ಕೂಡ ಕಾಂತಾರ 2 ಸಿನೆಮಾ ಮಾಡುವುದಕ್ಕೆ ಮೀನಾ ಮೇಷ ಎಣಿಸುತ್ತಿರುವ ರಿಷಬ್, ಯಾಕೆ ಅಂತೇ ಗೊತ್ತೇ??

Kannada News: ಕಾಂತಾರ (Kantara) ಚಿತ್ರವು ನಿರೀಕ್ಷೆಗೂ ಮೀರಿ ದೊಡ್ಡಮಟ್ಟದ ಸಕ್ಸಸ್ ಕಂಡ ಬಳಿಕ ಅದರ ಮುಂದುವರಿದ ಭಾಗವಾಗಿ ಕಾಂತಾರ 2 ಚಿತ್ರವನ್ನು ತೆರೆಗೆ ತರುವ ತಯಾರಿ ನಡೆಯುತ್ತಿದೆ. ಇತ್ತೀಚಿಗಷ್ಟೇ ರಿಷಬ್ ಶೆಟ್ಟಿ (Rishab Shetty) ಸೇರಿದಂತೆ ಇಡೀ ಚಿತ್ರತಂಡವು ದೈವದ ಪಂಜುರ್ಲಿ ಕೋಲ ಒಂದರಲ್ಲಿ ಪಾಲ್ಗೊಂಡಿತ್ತು. ಕಾಂತಾರ 2 ಚಿತ್ರ ನಿರ್ಮಿಸುವುದಕ್ಕಾಗಿ ದೈವದ ಅನುಮತಿಯನ್ನು ಪಡೆಯಲಾಯಿತು. ಆಗ ದೈವವೂ ಕೆಲವು ಎಚ್ಚರಿಕೆಗಳನ್ನು ನೀಡಿ ಚಿತ್ರವನ್ನು ನಿರ್ಮಿಸುವುದಕ್ಕೆ ಒಪ್ಪಿಗೆ ನೀಡಿತ್ತು. “ಅದೇ ಭಯ, ಭಕ್ತಿ ಮತ್ತು ಶಿಸ್ತಿನಿಂದ ಈ ಚಿತ್ರವನ್ನು ತಯಾರಿಸಬೇಕು. ದೈವದ ಕಥೆಯನ್ನು ಮಾಡಲು ಹೊರಟಿದ್ದೀರಿ, ಹಾಗಾಗಿ ಮೊದಲ ಪ್ರಯತ್ನದಲ್ಲಿ ನೀವು ಗೆದ್ದಿದ್ದೀರಿ. ಅದೇ ಪರಿಶ್ರಮ ಮತ್ತು ಶಿಸ್ತಿನಿಂದ ಈ ಚಿತ್ರವನ್ನು ನಿರ್ಮಿಸಿ” ಎಂದು ದೈವ ಹೇಳಿತ್ತು ಎಂದು ವರದಿಯಾಗಿತ್ತು. ಈಗಾಗಲೇ ಚಿತ್ರ ತಂಡ ಚಿತ್ರೀಕರಣದ ತಯಾರಿಯಲ್ಲಿದೆ ಎಂದು ವರದಿಯಾಗಿದ್ದರೆ, ಇತ್ತ ರಿಷಭ್ ಕಾಂತಾರ 2 ಚಿತ್ರದ ತಯಾರಿಯ ಬಗ್ಗೆ ಇನ್ನೂ ಏನನ್ನು ಯೋಚಿಸಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ದೈವದ ಒಪ್ಪಿಗೆಯನ್ನು ಪಡೆದ ನಂತರ ರಿಷಬ್ ಶೆಟ್ಟಿ ಮತ್ತು ತಂಡವು ಕಾಂತಾರ 2 ಚಿತ್ರದ ಕಥೆಯನ್ನು ಸಿದ್ಧಪಡಿಸುತ್ತಿದೆ ಎಂದೇ ಹೇಳಲಾಗಿತ್ತು. ಅಲ್ಲದೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ಬಳಿಗೂ ಈ ವಿಷಯವನ್ನು ತಿಳಿಸಿ ಅವರ ಒಪ್ಪಿಗೆಯನ್ನು ಕೇಳಲಾಗಿತ್ತು. ಅವರ ಒಪ್ಪಿಗೆ ಪಡೆದ ನಂತರ ಚಿತ್ರತಂಡವು ಕಥೆ ತಯಾರಿಯಲ್ಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಮಾಧ್ಯಮದವರ ಜೊತೆಗೆ ಮಾತನಾಡಿರುವ ರಿಷಬ್ ಶೆಟ್ಟಿ ಸದ್ಯಕ್ಕೆ ಕಾಂತಾರ ಎರಡನೇ ಭಾಗದ ಚಿತ್ರದ ಕಥೆ ಕುರಿತಾಗಿ ಅಥವಾ ಬೇರೆ ಯಾವ ತಯಾರಿಯೂ ನಡೆಯುತ್ತಿಲ್ಲ. ಚಿತ್ರದ ಕುರಿತ ಎಲ್ಲ ಮಾಹಿತಿಯನ್ನು ಅಪ್ಡೇಟ್ ಮಾಡುತ್ತೇವೆ. ಸದ್ಯಕ್ಕಂತೂ ಆ ಚರ್ಚೆ ಈಗ ಇಲ್ಲ ಎಂದು ಹೇಳುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

kannada news rishab kantara2 1 | Kannada News: ದೈವ ಅನುಮತಿ ನೀಡಿದರು ಕೂಡ ಕಾಂತಾರ 2 ಸಿನೆಮಾ ಮಾಡುವುದಕ್ಕೆ ಮೀನಾ ಮೇಷ ಎಣಿಸುತ್ತಿರುವ ರಿಷಬ್, ಯಾಕೆ ಅಂತೇ ಗೊತ್ತೇ??
Kannada News: ದೈವ ಅನುಮತಿ ನೀಡಿದರು ಕೂಡ ಕಾಂತಾರ 2 ಸಿನೆಮಾ ಮಾಡುವುದಕ್ಕೆ ಮೀನಾ ಮೇಷ ಎಣಿಸುತ್ತಿರುವ ರಿಷಬ್, ಯಾಕೆ ಅಂತೇ ಗೊತ್ತೇ?? 2

ರಿಷಭ್ ಶೆಟ್ಟಿಯವರು ಕಾಂತಾರ 2 ಚಿತ್ರದ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಹೇಳಿದ ತಕ್ಷಣವೇ ಬಹುಶಹ ಅವರು ಬೆಲ್ ಬಾಟಮ್ 2 ಚಿತ್ರವನ್ನು ಕೈಗೆತ್ತಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಕಾಂತಾರ ಚಿತ್ರ ಇಲ್ಲದೆ ಇದ್ದಿದ್ದರೆ ವರ್ಷದ ಹಿಂದೆಯೇ ಬೆಲ್ ಬಾಟಮ್ 2 ಚಿತ್ರ ಸೆಟ್ಟೆರಬೇಕಿತ್ತು. ಆದರೆ ಕಾಂತಾರ ಚಿತ್ರದ ಕಾರಣದಿಂದಾಗಿ ಅದು ಮುಂದೂಡಲ್ಪಟ್ಟಿತು. ಇದೀಗ ಈ ಎಲ್ಲ ಬೆಳವಣಿಗೆಗಳಿಂದಾಗಿ ರಿಷಭ್ ಮುಂದೆ ಬೆಲ್ ಬಾಟಮ್ 2 (Bell Bottom 2) ಚಿತ್ರದಲ್ಲಿ ಬಿಜಿ ಅಗಲಿದ್ದಾರಾ ಎನ್ನುವ ಪ್ರಶ್ನೆಗಳು ಕೇಳಿ ಬರುತ್ತಿವೆ. ಆದರೆ ಈ ಕುರಿತಾಗಿ ಯಾವುದೇ ಸ್ಪಷ್ಟನೆ ಇರದಿದ್ದರೂ ಸಹ ರಿಷಬ್ ಅವರ ಆ ಒಂದು ಹೇಳಿಕೆ ಬೆಲ್ ಬಾಟಮ್ ಚಿತ್ರದ ಬಗ್ಗೆ ಮಾತುಗಳು ಹೆಚ್ಚಾಗಲು ಕಾರಣವಾಗಿದೆ. ಈ ಗೊಂದಲದ ಕುರಿತಾಗಿ ಸ್ವತಹ ರಿಷಬ್ ಶೆಟ್ಟಿ ಅವರೇ ಸ್ಪಷ್ಟನೆ ನೀಡಬೇಕಿದೆ.

Comments are closed.