Kannada Astrology: ಮನೆಯಲ್ಲಿ ಅಪ್ಪಿ ತಪ್ಪಿಯೂ ಕೂಡ ಕನ್ನಡಿಯನ್ನು ಈ ದಿಕ್ಕಿನಲ್ಲಿ ಇಡಬೇಡಿ, ಹಣ ನಿಲ್ಲುವುದಿಲ್ಲ, ಕಷ್ಟ ಅನುಭವಿಸ್ತೀರಾ. ಯಾವ ದಿಕ್ಕು ಗೊತ್ತೇ?

Kannada Astrology: ಸಾಮಾನ್ಯವಾಗಿ ನಾವು ಎಷ್ಟೇ ಪರಿಶ್ರಮದಿಂದ ಕಷ್ಟಪಟ್ಟು ಕೆಲಸ ಮಾಡಿದರು ಒಳ್ಳೆಯ ಫಲಿತಾಂಶ ಸಿಗುತ್ತಿರುವುದಿಲ್ಲ. ಯಾವಾಗಲೂ ಮನೆಯಲ್ಲಿ ಏನಾದರೂ ಸಮಸ್ಯೆ, ತೊಂದರೆ ಎದುರಾಗುತ್ತದೆ. ಅಂದುಕೊಂಡ ಯಶಸ್ಸು ನಮ್ಮದಾಗುವುದಿಲ್ಲ. ಕೆಲವೊಮ್ಮೆ ಮನೆಯ ವಾಸ್ತುದೋಷದಿಂದಾಗಿ ಇಂತಹ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ವಾಸ್ತುದೋಷವಿದ್ದರೆ ಆ ದೋಷವನ್ನು ಸರಿಪಡಿಸಿಕೊಂಡರೆ ಸಮಸ್ಯೆಗಳ ನಿವಾರಣೆಯಾಗಿ ಒಳ್ಳೆಯ ಫಲಗಳು ಲಭಿಸುತ್ತದೆ. ಅದರಲ್ಲೂ ವಿಶೇಷವಾಗಿ ಮನೆಯಲ್ಲಿ ಯಾವ ದಿಕ್ಕಿನಲ್ಲಿ ಕನ್ನಡಿಯನ್ನು ಇರಿಸಲಾಗಿದೆ ಎನ್ನುವುದು ಮುಖ್ಯವಾಗುತ್ತದೆ. ಕನ್ನಡಿಯನ್ನು ಹೇಗೆ, ಯಾವ ರೀತಿಯಾಗಿ ಇಡಲಾಗಿದೆ ಮತ್ತು ಯಾವ ಜಾಗದಲ್ಲಿ ಕನ್ನಡಿಯನ್ನು ಇಟ್ಟುಕೊಂಡಿದ್ದೇವೆ ಎನ್ನುವುದು ಸಹ ಮನೆಯ ಅದೃಷ್ಟದ ಮೇಲೆ ಪರಿಣಾಮ ಬೀರುತ್ತದೆ.

ಇಷ್ಟಕ್ಕೂ ಕನ್ನಡಿಯನ್ನು ಯಾವ ದಿಕ್ಕಿನಲ್ಲಿ ಇರಿಸಬೇಕು? ಕನ್ನಡಿಯನ್ನು ಹೇಗೆ ಬಳಸಬೇಕು? ಆ ಮೂಲಕ ಒಳ್ಳೆಯ ಫಲಗಳನ್ನು ಪಡೆಯುವುದು ಹೇಗೆ? ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಯಾವುದೇ ಕಾರಣಕ್ಕೂ ಮನೆಯಲ್ಲಿ ಒಡೆದ ಕನ್ನಡಿಯನ್ನು ಇಟ್ಟುಕೊಳ್ಳಬೇಡಿ. ಒಡೆದ ಕನ್ನಡಿ ನಕರಾತ್ಮಕ ಶಕ್ತಿ ಮನೆಗೆ ಬರುವಂತೆ ಮಾಡುತ್ತದೆ. ಹೀಗಾಗಿ ಹೊಡೆದ ಕನ್ನಡಿಯನ್ನು ಮನೆಯಿಂದ ಹೊರಗಡೆ ಎಲ್ಲಾದರೂ ಬಿಸಾಕಿ, ಸ್ವಲ್ಪವೇ ಬಿರುಕು ಅಥವಾ ಹೊಡೆದಿರುವ ಕನ್ನಡಿಯನ್ನು ಸಹ ಬಳಸುವುದು ಒಳ್ಳೆಯದಲ್ಲ. ಮನೆ ಅಥವಾ ಕಚೇರಿಯಲ್ಲಿ ದಕ್ಷಿಣ, ಪಶ್ಚಿಮ ಮತ್ತು ಆಗ್ನೇಯ ದಿಕ್ಕಿನಲ್ಲಿ ಕನ್ನಡಿ ಇರುವುದು ಆಶುಭವನ್ನು ಸೂಚಿಸುತ್ತದೆ. ಹೀಗಾಗಿ ಕನ್ನಡಿಯನ್ನು ಇಟ್ಟುಕೊಂಡಿದ್ದರೆ ಅಲ್ಲಿಂದ ತೆಗೆದು ಬೇರೆ ಜಾಗಕ್ಕೆ ಸ್ಥಳಾಂತರಿಸಿ. ಒಂದು ವೇಳೆ ಜಾಗ ಬದಲಿಸಲಾಗದಿದ್ದರೆ ಆ ಕನ್ನಡಿ ಕಾಣದಂತೆ ಬಟ್ಟೆಯಿಂದ ಮುಚ್ಚಿ. ಈ ದಿಕ್ಕುಗಳಲ್ಲಿ ಕನ್ನಡಿ ಇರಿಸುವುದು ಶುಭವಲ್ಲ ಎಂದು ಶಾಸ್ತ್ರ ಹೇಳುತ್ತದೆ. ಇದನ್ನು ಓದಿ..Kannada News: ದೈವ ಅನುಮತಿ ನೀಡಿದರು ಕೂಡ ಕಾಂತಾರ 2 ಸಿನೆಮಾ ಮಾಡುವುದಕ್ಕೆ ಮೀನಾ ಮೇಷ ಎಣಿಸುತ್ತಿರುವ ರಿಷಬ್, ಯಾಕೆ ಅಂತೇ ಗೊತ್ತೇ??

kannada astrology mirror direction at home | Kannada Astrology: ಮನೆಯಲ್ಲಿ ಅಪ್ಪಿ ತಪ್ಪಿಯೂ ಕೂಡ ಕನ್ನಡಿಯನ್ನು ಈ ದಿಕ್ಕಿನಲ್ಲಿ ಇಡಬೇಡಿ, ಹಣ ನಿಲ್ಲುವುದಿಲ್ಲ, ಕಷ್ಟ ಅನುಭವಿಸ್ತೀರಾ. ಯಾವ ದಿಕ್ಕು ಗೊತ್ತೇ?
Kannada Astrology: ಮನೆಯಲ್ಲಿ ಅಪ್ಪಿ ತಪ್ಪಿಯೂ ಕೂಡ ಕನ್ನಡಿಯನ್ನು ಈ ದಿಕ್ಕಿನಲ್ಲಿ ಇಡಬೇಡಿ, ಹಣ ನಿಲ್ಲುವುದಿಲ್ಲ, ಕಷ್ಟ ಅನುಭವಿಸ್ತೀರಾ. ಯಾವ ದಿಕ್ಕು ಗೊತ್ತೇ? 2

ಮನೆಯಲ್ಲಿ ಯಾವಾಗಲೂ ಕನ್ನಡಿಯನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಕು. ಇದು ಮನೆಯಲ್ಲಿ ಸದಾ ಒಳ್ಳೆಯ ಸಕರಾತ್ಮಕ ಶಕ್ತಿಯನ್ನು ತುಂಬುವುದಲ್ಲದೆ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ. ಕುಟುಂಬದಲ್ಲಿ ಶಾಂತಿ ವೃದ್ಧಿಸುತ್ತದೆ. ಹೀಗಾಗಿ ಈ ದಿಕ್ಕಿನಲ್ಲಿ ಕನ್ನಡಿಯನ್ನು ಇಟ್ಟುಕೊಳ್ಳಿ. ಜೊತೆಗೆ ಯಾವುದೇ ಕಾರಣಕ್ಕೂ ಮನೆಯಲ್ಲಿ ಮಂಜು ಕನ್ನಡಿಯನ್ನು ಇಟ್ಟುಕೊಳ್ಳಬೇಡಿ. ಇದರಿಂದ ಮುಖ ನೋಡಿಕೊಂಡರೆ ಆ ವ್ಯಕ್ತಿಗೆ ಕೆಟ್ಟ ಲಾಭಗಳು, ಫಲಗಳು ಲಭಿಸುತ್ತದೆ ಮತ್ತು ಕೆಟ್ಟ ಪರಿಣಾಮಗಳು ಎದುರಾಗುತ್ತವೆ ಎಂದು ಹೇಳಲಾಗುತ್ತದೆ. ಹೀಗಾಗಿ ಮಂಜು ಕನ್ನಡಿಯನ್ನು ಮನೆಯಲ್ಲಿ ಇರಿಸದಿರಿ. ಕನ್ನಡಿಯನ್ನು ಮನೆಯ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಿಸುವುದು ಒಳ್ಳೆಯದಲ್ಲ. ಇದು ಮನೆಯವರ ನಡುವೆ ಭಿನ್ನಾಭಿಪ್ರಾಯ ಮಾಡಲು ಕಾರಣವಾಗುತ್ತದೆ. ಅಲ್ಲದೆ ಮಲಗುವ ವೇಳೆ ನಮ್ಮ ಮುಂದೆ ಕನ್ನಡಿ ಇರುವುದು ಕೂಡ ಒಳ್ಳೆಯ ಸೂಚನೆಯಲ್ಲ. ಹೀಗಾಗಿ ಮಲಗುವ ಮುನ್ನ ನಮ್ಮ ಎದುರಿಗೆ ಕನ್ನಡಿ ಇರುವಂತೆ ನೀವು ಇಟ್ಟುಕೊಂಡಿದ್ದರೆ ಅದರ ಮೇಲೆ ಬಟ್ಟೆಯನ್ನು ಮುಚ್ಚಿರಿ. ಈ ಸಲಹೆಗಳನ್ನು ಪಾಲಿಸುವುದರಿಂದಾಗಿ ದೋಷದ ನಿವಾರಣೆಯಾಗಿ ಒಳ್ಳೆಯ ಶುಭಫಲಗಳು ಲಭಿಸಲಿವೆ. ಇದನ್ನು ಓದಿ..Kannada News: ಹತ್ತಾರು ವರ್ಷಗಳು ಆದ ಮೇಲೆ ಮೊದಲ ಬಾರಿಗೆ ಸುದೀಪ್ ರವರು ಹೆಸರು ತೆಗೆದುಕೊಂಡ ದರ್ಶನ್, ಹೇಳಿದ್ದೇನು ಗೊತ್ತೇ??

Comments are closed.