Kannada News: ಕಾಂತಾರ ಯಶಸ್ಸು ಸಿಕ್ಕಿ ಬಾಲಿವುಡ್ ಗೆ ಹೋದ ತಕ್ಷಣ ಸಪ್ತಮಿ ಕನ್ನಡದ ಬಗ್ಗೆ ಹೇಳಿದ್ದೇನು ಗೊತ್ತೇ? ಕಣ್ಣೀರು ಹಾಕಿದ ಫ್ಯಾನ್ಸ್.
Kannada News: ನಟಿ ಸಪ್ತಮಿ ಗೌಡ (Saptami Gowda) ಸದ್ಯ ಇನ್ನೂ ಸಹ ಕಾಂತಾರದ (Kantara) ಯಶಸ್ಸಿನ ಗುಂಗಿನಲ್ಲಿದ್ದಾರೆ. ನಾಯಕಿಯಾಗಿ ಅಭಿನಯಿಸಿದ ಮೊದಲ ಚಿತ್ರದಲ್ಲಿ ಅವರಿಗೆ ಅತ್ಯಂತ ಜನಪ್ರಿಯತೆ ಸಿಕ್ಕಿದೆ. ಈ ಚಿತ್ರದಿಂದ ಅವರಿಗೆ ಸಾಕಷ್ಟು ಅವಕಾಶಗಳು ಕೇಳಿ ಬರುತ್ತಿವೆ. ಇಷ್ಟು ಮಾತ್ರವಲ್ಲದೆ ತಮ್ಮ ನಟನ ಜೀವನದ ಅತ್ಯಂತ ಕಡಿಮೆ ಅವಧಿಯಲ್ಲಿ ಅವರು ಬಾಲಿವುಡ್ (Bollywood) ನಲ್ಲೂ ಸಹ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ದಿ ಕಾಶ್ಮೀರಿ ಫೈಲ್ಸ್ (The Kashmir Files) ಚಿತ್ರದ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ಅವರ ನಿರ್ದೇಶನದಲ್ಲಿ ಬರುತ್ತಿರುವ ದಿ ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ಅವರು ನಟಿಸಲು ಅವಕಾಶ ಪಡೆದಿದ್ದಾರೆ. ಆ ಮೂಲಕ ನಟಿ ಸಪ್ತಮಿ ಗೌಡ ಬಾಲಿವುಡ್ ಗೆ ಸಹ ಹಾರುತಿದ್ದಾರೆ. ಬಾಲಿವುಡ್ ಗುಂಗಿನಲ್ಲಿರುವ ನಟಿ ಸಪ್ತಮಿ ಗೌಡ ಇದೀಗ ಕನ್ನಡ ಚಿತ್ರಗಳು ಮತ್ತು ಕನ್ನಡದ ಬಗ್ಗೆ ಹೇಳಿರುವ ಮಾತುಗಳು ಚರ್ಚೆಗೆ ಗ್ರಾಸವಾಗುತ್ತಿವೆ.
ಡಾಲಿ ಧನಂಜಯ್ (Dhananjay) ಅವರ ಜೊತೆಗೆ ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ನಟಿಸುವ ಮೂಲಕ ಆಕಸ್ಮಿಕವಾಗಿ ಚಿತ್ರರಂಗಕ್ಕೆ ಸಪ್ತಮಿ ಎಂಟ್ರಿ ಕೊಟ್ಟರು. ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕು ಮುಂದುವರಿಯಬೇಕು ಎನ್ನುವ ಯಾವ ಇಚ್ಛೆಯೂ ಇಲ್ಲದಿದ್ದರೂ ಅವರಿಗೆ ಸಿಕ್ಕ ಅವಕಾಶಗಳು ಅವರನ್ನು ನಟನೆಯಲ್ಲಿ ಮುಂದುವರಿಯುವಂತೆ ಮಾಡಿದೆ. ಆನಂತರ ರಿಷಬ್ (Rishab Shetty) ಜೊತೆಗಿನ ಕಾಂತಾರ ಚಿತ್ರ ಅವರಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತ್ತು. ಆ ಮೂಲಕ ಅವರು ಕನ್ನಡ ಮಾತ್ರವಲ್ಲದೆ ಭಾರತದ ಅತ್ಯಂತ ಪರಿಚಿತರಾಗುವಂತೆ ಆಗಲು ಸಾಧ್ಯವಾಯಿತು. ಇದೀಗ ನಟಿ ಸಪ್ತಮಿ ಗೌಡ ಅವರಿಗೆ ಸಾಕಷ್ಟು ಸಿನಿಮಾ ಆಫರ್ ಗಳು ಕೇಳಿ ಬರುತ್ತಿದೆ. ಕೇವಲ ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಸಿನಿಮಾಗಳಿಗೂ ಕೂಡ ಸಪ್ತಮಿ ಅವರನ್ನು ನಟಿಸಲು ಕೇಳಲಾಗುತ್ತಿದೆಯಂತೆ. ಹೊಸ ಹೊಸ ಅವಕಾಶಗಳನ್ನು ಬಹಳ ಆಲೋಚಿಸಿ ಕಥೆ ಇಷ್ಟವಾದರೆ ನಟಿ ಸಪ್ತಮಿ ಗೌಡ ಒಪ್ಪಿಕೊಳ್ಳುತ್ತಿದ್ದಾರೆ. ಇನ್ನು ಇದೀಗ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರ ನಿರ್ದೇಶನದಲ್ಲಿ ಬರುತ್ತಿರುವ ಕೋವಿಡ್ ಲಸಿಕೆ ಆಧರಿಸಿ ತಯಾರಿಸಲಾಗುತ್ತಿರುವ ಚಿತ್ರದಲ್ಲಿ ನಟಿ ಸಪ್ತಮಿ ಗೌಡ ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಓದಿ..Kannada News: ಅಂಬಾನಿ ಮಗ ಅನಂತ್ ಮದುವೆಗೆ ಹೋಗಿದ್ದ ದೀಪಿಕಾ ಉಟ್ಟಿದ್ದ ಸೀರೆ ಬೆಲೆ ಕೇಳಿದರೆ, ಊಟ ಮಾಡೋದು ಬಿಡ್ತೀರಾ. ಎಷ್ಟು ಅಂತೇ ಗೊತ್ತೆ?
ಕಾಂತಾರ ಚಿತ್ರವನ್ನು ನೋಡಿದ್ದ ನಿರ್ದೇಶಕರು ತಮ್ಮ ಚಿತ್ರದ ಪಾತ್ರಕ್ಕೆ ಸಪ್ತಮಿಯವರೇ ಸೂಕ್ತ ಎಂದು ಅವರಿಗೆ ಕರೆ ಮಾಡಿ ಕಥೆಯ ಚಿತ್ರದ ಕಥೆ ತಿಳಿಸಿ ಒಪ್ಪಿಸಿದ್ದಾರೆ. ಹೈದರಾಬಾದ್ ನಲ್ಲಿ ನಟಿ ಸಪ್ತಮಿ ಗೌಡ ಅವರು ಈ ಚಿತ್ರದ ಶೂಟಿಂಗ್ನಲ್ಲಿ ಪಾಲ್ಗೊಳ್ಳುತ್ತಾರೆ. ಅಂದಹಾಗೆ ಬಾಲಿವುಡ್ ನಲ್ಲಿ ಅವಕಾಶ ಪಡೆದ ಗುಂಗಿನಲ್ಲಿರುವ ನಟಿ ಸಪ್ತಮಿ ಗೌಡ ಇದೀಗ ಕನ್ನಡ ಮತ್ತು ಕನ್ನಡ ಚಿತ್ರಗಳ ಬಗ್ಗೆ ಹೇಳಿರುವ ಮಾತುಗಳು ಎಲ್ಲರ ಮೆಚ್ಚುಗೆ ಪಾತ್ರವಾಗುತ್ತಿದೆ. ಇನ್ನು ಮುಂದೆಯೂ ಕನ್ನಡ ಚಿತ್ರದಲ್ಲಿ ನಟಿಸುತ್ತೀರಾ, ನಿಮ್ಮ ಅಭಿಪ್ರಾಯವೇನು ಎಂದು ಕೇಳಿರುವ ಪ್ರಶ್ನೆಗೆ ಅವರು ಖಂಡಿತವಾಗಿಯೂ ನನ್ನ ಮೊದಲ ಆದ್ಯತೆ ಕನ್ನಡವೇ ಆಗಿರುತ್ತದೆ. ನಾನು ಸದಾ ಕನ್ನಡ ಚಿತ್ರಗಳಲ್ಲಿ ನಟಿಸಲು ಎದುರು ನೋಡುತ್ತಿರುತ್ತೇನೆ. ನಾನು ಕನ್ನಡವನ್ನು ಬಿಡುವುದಿಲ್ಲ. ಕಥೆ ಇಷ್ಟವಾದರೆ ಬೇರೆ ಭಾಷೆಗಳ ಚಿತ್ರವನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಕನ್ನಡ ನನ್ನ ಮೊದಲ ಆಯ್ಕೆ ಎಂದು ಹೇಳಿದ್ದಾರೆ. ಈ ಮಾತುಗಳನ್ನು ಕೇಳಿ ಅಭಿಮಾನಿಗಳು ಆನಂದದಿಂದ ಕಣ್ಣೀರು ಹಾಕಿದ್ದಾರೆ. ಇದನ್ನು ಓದಿ.. Kannada News: ಧೈರ್ಯದಿಂದ ಮುನ್ನುಗುತ್ತಿದ್ದ ಕನ್ನಡದ ಸಿಂಹ ಡಿ ಬಾಸ್ ಗೆ ಏನಾಯ್ತು?? ಸೋಲನ್ನು ಒಪ್ಪಿಕೊಂಡರೆ? ಷಾಕಿಂಗ್ ಹೇಳಿಕ ಕೊಟ್ಟ ಡಿ ಬಾಸ್. ಏನು ಗೊತ್ತೇ??
Comments are closed.