Kannada News: ಹೊಸ ನಟನ ಚಿತ್ರ ಒಪ್ಪಿಕೊಳ್ಳಲು ಸಪ್ತಮಿ ಗೌಡ ದಾಖಲೆ ಸಂಭಾವನೆ ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ?? ಎಲ್ಲರ ದಾಖಲೆ ಪುಡಿ ಪುಡಿ.
Kannada News: ಡಾ. ರಾಜ್ ಕುಮಾರ್ ಅವರ ಮೊಮ್ಮಗ ದೊಡ್ಮನೆ ಕುಟುಂಬದ ಮೂರನೇ ತಲೆಮಾರಿನಿಂದ ನಟ ಯುವ ರಾಜ್ ಕುಮಾರ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡೋದಕ್ಕೆ ಸಜ್ಜಾಗಿದ್ದು, ಇವರ ಮೊದಲ ಸಿನಿಮಾವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡ್ತಿದೆ. ಈ ಸಿನಿಮಾವನ್ನು ಸಂತೋಷ್ ಆನಂದ್ ರಾಮ್ ಅವರು ನಿರ್ದೇಶನ ಮಾಡುತ್ತಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಇರಲಿದೆ. ಸಿನಿಮಾದ ಮುಹೂರ್ತ ಇತ್ತೀಚೆಗೆ ನೆರವೇರಿತು. ಆದರೆ ಈ ಸಿನಿಮಾಗೆ ನಾಯಕಿ ಯಾರು ಎನ್ನುವ ಪ್ರಶ್ನೆ ಕೇಳಿ ಬರುತ್ತಲೇ ಇತ್ತು.
ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಕಲ್ಯಾಣಿ ಪ್ರಿಯದರ್ಶನ್ ಅವರು ಈ ಸಿನಿಮಾದಲ್ಲಿ ಯುವ ಅವರಿಗೆ ನಾಯಕಿಯಾಗುತ್ತಾರೆ ಎನ್ನಲಾಗಿತ್ತು, ಬಳಿಕ ನಟ ಉಪೇಂದ್ರ ಅವರ ಮಗಳ ಹೆಸರು ಸಹ ಕೇಳಿಬಂದಿತ್ತು, ಆದರೆ ಈಗ ಕೊನೆಗು ನಾಯಕಿಯ ಆಯ್ಕೆ ಅಂತಿಮವಾಗಿದೆ. ಯುವ ರಾಜ್ ಕುಮಾರ್ ಅವರ ಮೊದಲ ಸಿನಿಮಾ ಯುವ ಗೆ ನಾಯಕಿಯಾಗಿ ಕಾಂತಾರ ಬೆಡಗಿ ಸಪ್ತಮಿ ಗೌಡ ಆಯ್ಕೆಯಾಗಿದ್ದಾರೆ. ಕಾಂತಾರ ಸಕ್ಸಸ್ ನಂತರ ಸಪ್ತಮಿ ಗೌಡ ಅವರಿಗೆ ಅವಕಾಶಗಳು ಹೆಚ್ಚಾಗಿ ಬರುತ್ತಿದೆ. ಬಾಲಿವುಡ್ ನಲ್ಲಿ ದಿ ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಸಪ್ತಮಿ ಗೌಡ. ಅಷ್ಟೇ ಅಲ್ಲದೆ, ಅಭಿಷೇಕ್ ಅಂಬರೀಶ್ ಅವರ 3ನೇ ಸಿನಿಮಾ ಕಾಳಿ ಗೆ ನಾಯಕಿಯಾಗಿದ್ದಾರ. ಇದನ್ನು ಓದಿ..Kannada News: ನಮ್ಮ ನಿಮ್ಮೆಲ್ಲರ ನೆಚ್ಚಿನ ಲಕ್ಷಣ್ ರವರ ನಿಜವಾದ ಹೆಂಡತಿ ಹೇಗಿದ್ದಾರೆ ಗೊತ್ತೆ? ಕುಟುಂಬ ನೋಡಲು ಎರಡು ಕಣ್ಣು ಸಾಲದು.

ಇದೀಗ ಯುವ ಅವರ ಮೊದಲ ಸಿನಿಮಾಗು ನಾಯಕಿಯಾಗಿದ್ದಾರೆ. ಸಪ್ತಮಿ ಗೌಡ ಅವರನ್ನು, “ಯುವ ರಾಜನ ಅರಸಿಗೆ ಸ್ವಾಗತ..” ಎಂದು ಬರೆದು ಅವರ ಪೋಸ್ಟರ್ ಶೇರ್ ಮಾಡುವ ಮೂಲಕ ಸ್ವಾಗತ ಮಾಡಿಕೊಂಡಿದೆ ಟೀಮ್. ಈಗಾಗಲೇ ಯುವ ಮತ್ತು ಸಪ್ತಮಿ ಗೌಡ ಜೋಡಿಯ ಫೋಟೋಗಳು ಕೂಡ ವೈರಲ್ ಆಗುತ್ತಿದೆ. ಇದು ಯುವ ಅವರ ಮೊದಲ ಸಿನಿಮಾ ಆಗಿದ್ದು, ಹೊಸ ನಟನ ಸಿನಿಮಾಗೆ ಸಪ್ತಮಿ ಗೌಡ ಅವರು ಪಡೆಯುತ್ತಿರುವ ಸಂಭಾವನೆ ಬಗ್ಗೆ ಈಗ ಚರ್ಚೆಯಾಗುತ್ತಿದೆ, ಸಪ್ತಮಿ ಗೌಡ ಅವರು ಯುವ ಸಿನಿಮಾಗೆ ದಾಖಲೆಯ ಸಂಭಾವನೆ ಪಡೆಯುತ್ತಿದ್ದು, ಹಿಂದಿನ ಎಲ್ಲಾ ನಾಯಕಿಯರ ಸಂಭಾವನೆಗಳನ್ನು ಹಿಂದಿಕ್ಕಿ, ಬರೋಬ್ಬರಿ 4 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..Kannada News: ಮದುವೆಯಾದ ಸರಿಯಾಗಿ 2 ತಿಂಗಳಿಗೆ ಮತ್ತೊಂದು ಮದುವೆಗೆ ಸಿದ್ದವಾದ ಸ್ವರ ಭಾಸ್ಕರ್: ಟೀಕೆಗಳ ನಡುವೆ ಮದುವೆಯಾಗಿದ್ದ ನಟಿ ಈ ಗಟ್ಟಿ ನಿರ್ಧಾರ ಯಾಕೆ ಗೊತ್ತೆ?
Comments are closed.