Kannada News: ಬಡ ರೈತನನ್ನು ಪೊಲೀಸರು ಅರೆಸ್ಟ್ ಮಾಡಿ, ಕೋರ್ಟ್ ಗೆ ಹೋದರು. ಆದರೆ ರೈತ ಕೊಟ್ಟ ಉತ್ತರ ಕೇಳಿ ನ್ಯಾಯಾಧೀಶರು ಬೆಚ್ಚಿ ಬಿದ್ದದ್ದು ಯಾಕೆ ಗೊತ್ತೇ?

Kannada News: ರೈತರು ಶ್ರಮಜೀವಿಗಳು, ಅವರು ಉಳುಮೆ ಮಾಡುತ್ತಿರುವುದರಿಂದಲೇ ನಾವೆಲ್ಲರೂ ಊಟ ಮಾಡೋದಕ್ಕೆ ಸಾಧ್ಯ ಆಗುತ್ತಿದೆ. ಇಂಥಹ ರೈತರಿಗೆ ಮೋಸ ಮಾಡಿದರೆ ಅದನ್ನ ದೇವರು ನಿಜಕ್ಕೂ ಮೇಚ್ಚೋದಿಲ್ಲ. ಇತ್ತೀಚೆಗೆ ಇಂಥ ಒಂದು ಘಟನೆ ನಡೆದಿದೆ, ರೈತನೊಬ್ಬ ಮೋಸ ಮಾಡಿದ್ದಾನೆ ಎಂದು ಪೊಲೀಸರು ಅರೆಸ್ಟ್ ಮಾಡಿ, ಕೋರ್ಟ್ ನಲ್ಲಿ ಅವನನ್ನು ನಿಲ್ಲಿಸಿದ್ದಾರೆ. ನ್ಯಾಯಾಧೀಶರ ಎದುರು ರೈತ ಕೊಟ್ಟ ಉತ್ತರ ಕೇಳಿ, ಎಲ್ಲರೂ ಶಾಕ್ ಆಗಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು ಗೊತ್ತಾ? ಈ ರೈತನ ಹೆಸರು ರಾಮಪ್ಪ, ಈ ವ್ಯಕ್ತಿ ಅರ್ಧ ಎಕರೆ ಭೂಮಿಯಲ್ಲಿ ವ್ಯವಸಾಯ ಮಾಡಿ, ಒಂದೆರಡು ಹಸು, ಮೇಕೆ ಇವುಗಳನ್ನು ಸಾಕುತ್ತಾ, ಅದರಿಂದ ಸಿಗುಗ ಬೆಣ್ಣೆ, ತುಪ್ಪ, ಹಾಲು ಇವುಗಳನ್ನು ಪಟ್ಟಣದಲ್ಲಿ ಒಂದು ಕಿರಾಣಿ ಅಂಗಡಿಗೆ ಮಾರುತ್ತಿದ್ದ. ಅದರಿಂದ ಬಂದ ಹಣದಲ್ಲಿ ಮನೆಯ ಖರ್ಚುಗಳು, ಹೆಂಡತಿಯ ಆರೋಗ್ಯ ಎಲ್ಲವನ್ನು ನೋಡಿಕೊಳ್ಳುತ್ತಿದ್ದ..

ಒಂದು ದಿನ ರಾಮಪ್ಪ ಮನೆಯಲ್ಲಿ ಊಟ ಮಾಡುತ್ತಿದ್ದಾಗ, ಯಾರೋ ಬಾಗಿಲು ತಟ್ಟಿದರು, ಆತನ ಹೆಂಡತಿ ಹೋಗಿ ನೋಡಿದಾಗ, ಪೊಲೀಸರು ಬಂದಿದ್ದರು, ಎಷ್ಟೋ ಧೈರ್ಯ ನಿನಗೆ ವ್ಯಾಪರಿಗೆ ಮೋಸ ಮಾಡ್ತೀಯಾ ಎಂದು ರಾಮಪ್ಪನನ್ನು ಕರೆದುಕೊಂಡು ಹೋದರು. ರಾಮಪ್ಪ ನಾನು ಯಾರಿಗೂ ಮೋಸ ಮಾಡಿಲ್ಲ ಎಂದು ಹೇಳಿದರು ಕೂಡ ಪೊಲೀಸರು ಕೇಳಲಿಲ್ಲ, ಅವನನ್ನು ಎಳೆದುಕೊಂಡು ಹೋಗಿ, ಕೋರ್ಟ್ ನಲ್ಲಿ ನ್ಯಾಯಾಧೀಶರ ಎದುರು ನಿಲ್ಲಿಸಿದರು, ರಾಮಪ್ಪನ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದು ಮತ್ಯಾರು ಅಲ್ಲ, ಅವನು 8 ರಿಂದ 10 ವರ್ಷಗಳ ಬೆಣ್ಣೆ ತುಪ್ಪ ಇದೆಲ್ಲವನ್ನ ಮಾರಾಟ ಮಾಡ್ತಿದ್ದ ಅಂಗಡಿಯ ಮಾಲೀಕ. ರಾಮಪ್ಪ ತಮಗೆ ಕೊಡುವ ಬೆಣ್ಣೆಯಲ್ಲಿ 150 ಗ್ರಾಮ್ ಕಡಿಮೆ ಇರುತ್ತದೆ, 1 ಕೆಜಿ ಬೆಣ್ಣೆ ಎಂದು ಹೇಳಿ 850ಗ್ರಾಮ್ ಕೊಡುತ್ತಿದ್ದ, ಇದಕ್ಕೆ ಪರಿಹಾರ ಕೊಡಿಸಬೇಕು ಎಂದು ಆತ ಹೇಳುತ್ತಾನೆ. ಇದನ್ನು ಓದಿ..Kannada News: ಮದುವೆಯಾದ ಸರಿಯಾಗಿ 2 ತಿಂಗಳಿಗೆ ಮತ್ತೊಂದು ಮದುವೆಗೆ ಸಿದ್ದವಾದ ಸ್ವರ ಭಾಸ್ಕರ್: ಟೀಕೆಗಳ ನಡುವೆ ಮದುವೆಯಾಗಿದ್ದ ನಟಿ ಈ ಗಟ್ಟಿ ನಿರ್ಧಾರ ಯಾಕೆ ಗೊತ್ತೆ?

raita kannada news | Kannada News: ಬಡ ರೈತನನ್ನು ಪೊಲೀಸರು ಅರೆಸ್ಟ್ ಮಾಡಿ, ಕೋರ್ಟ್ ಗೆ ಹೋದರು. ಆದರೆ ರೈತ ಕೊಟ್ಟ ಉತ್ತರ ಕೇಳಿ ನ್ಯಾಯಾಧೀಶರು ಬೆಚ್ಚಿ ಬಿದ್ದದ್ದು ಯಾಕೆ ಗೊತ್ತೇ?
Kannada News: ಬಡ ರೈತನನ್ನು ಪೊಲೀಸರು ಅರೆಸ್ಟ್ ಮಾಡಿ, ಕೋರ್ಟ್ ಗೆ ಹೋದರು. ಆದರೆ ರೈತ ಕೊಟ್ಟ ಉತ್ತರ ಕೇಳಿ ನ್ಯಾಯಾಧೀಶರು ಬೆಚ್ಚಿ ಬಿದ್ದದ್ದು ಯಾಕೆ ಗೊತ್ತೇ? 2

ನೀನು ಈ ವ್ಯಾಪಾರಿಗೆ ಮೋಸ ಮಾಡಿದ್ಯಾ ಎಂದು ಕೇಳಿದಾಗ, ರಾಮಪ್ಪ ತಾನು ಯಾರಿಗೂ ಮೋಸ ಮಾಡಿಲ್ಲ ಎಂದು ಹೇಳುತ್ತಾನೆ. ಆ ವ್ಯಕ್ತಿ, ರಾಮಪ್ಪ ತನ್ನ ಅಂಗಡಿಗೆ ತಂದು ಕೊಡುತ್ತಿದ್ದ ಬೆಣ್ಣೆ ಇದೆ ಅದರ ತೂಕ ಎಷ್ಟಿದೆ ಎಂದು ನೋಡಿದರೆ ಗೊತ್ತಾಗುತ್ತದೆ ಎಂದು ಹೇಳುತ್ತಾನೆ. ಅದನ್ನು ಪರೀಕ್ಷಿಸಿ ನೋಡಿದಾಗ, 850ಗ್ರಾಮ್ ಇರುವುದನ್ನು ನೋಡಿ ನ್ಯಾಯಾಧೀಶರು ಕೂಡ ರೈತನ ಮೇಲೆ ಕೋಪಗೊಂಡು, ಏನಪ್ಪಾ ಇದು ಕಡಿಮೆ ಇದೆ ಎಂದು ಕೇಳಿದಾಗ, ರಾಮಪ್ಪ ನನಗೆ ಇದು ಹೇಗಾಯ್ತೋ ಗೊತ್ತಿಲ್ಲ, ನಾನು 1ಕೆಜಿ ಬೆಣ್ಣೆಯನ್ನೇ ಕೊಟ್ಟಿದ್ದೆ ಎಂದು ಹೇಳುತ್ತಾನೆ, ಆಗ ನ್ಯಾಯಾಧೀಶರು ರೈತನ ಪರವಾಗಿ ಮಾತನಾಡಿ, ನಿಮ್ಮ ಮನೆಯಲ್ಲಿ ನೀನು ಯಾವುದರಿಂದ ತೂಕ ನೋಡಿ ಪ್ಯಾಕ್ ಮಾಡ್ತಿದ್ದೆಯೋ ಅದನ್ನ ತೆಗೆದುಕೊಂಡು ಬಾ ಅದನ್ನು ನೋಡೋಣ, ಇಲ್ಲಿ ಮಷಿನ್ ತೊಂದರೆ ಆಗಿರಬಹುದು ಎಂದು ಹೇಳುತ್ತಾರೆ.

ಆಗ ರೈತ ಕೊಟ್ಟ ಉತ್ತರಕ್ಕೆ ನ್ಯಾಯಾಧೀಶರೆ ಶಾಕ್ ಆಗುತ್ತಾರೆ, ನಾನು ತುಂಬಾ ಬಡವ, ತೂಕ ನೋಡೋ ಯಂತ್ರ ನಮ್ಮ ಮನೆಯಲ್ಲಿ ಹೇಗೆ ಬರಬೇಕು. ನಾನು 8 ರಿಂದ 10 ವರ್ಷಗಳಿಂದ ಇವರ ಅಂಗಡಿಯಲ್ಲೇ ದಿನಸಿ ತಗೊಳ್ತ ಇದ್ದೀನಿ, ಇವರು 1ಕೆಜಿ ರವೆ, 1 ಕೆಜಿ ಅಕ್ಕಿ ಇದನ್ನೆಲ್ಲ ಕೊಡ್ತಾರಲ್ಲ, ಆ 1ಕೆಜಿ ಕವರ್ ಪೂರ್ತಿ ತುಂಬುವ ಹಾಗೆ ಬೆಣ್ಣೆ ತುಪ್ಪ ಹಾಕಿ ಕೊಡ್ತಾ ಇದ್ದೆ ಎಂದು ಹೇಳುತ್ತಾನೆ, ಆಗ ಅಂಗಡಿಯಿಂದ ಈ ವ್ಯಕ್ತಿ ಕೊಡುತ್ತಿದ್ದ ಸಕ್ಕರೆ ಏನಾದರು ಇದೆಯಾ ಎಂದು ಕೇಳುತ್ತಾರೆ, ಆಗ ರಾಮಪ್ಪ ಇದೆ ಎಂದು ಹೇಳಿ, 1ಕೆಜಿ ಸಕ್ಕರೆ ತರಿಸಿದಾಗ, ಅದರ ತೂಕ ನೋಡಿದರೆ 850ಗ್ರಾಮ್ ಇರುತ್ತದೆ. ಈ ರೀತಿಯಾಗಿ ಅಂಗಡಿ ಮಾಲೀಕನೆ ಮೋಸ ಮಾಡುತ್ತಿದ್ದ ಎಂದು ಗೊತ್ತಾಗಿ ಜಡ್ಜ್ ಅವರೇ ಶಾಕ್ ಆಗುತ್ತಾರೆ. ಕೊನೆಗೆ, 8 ರಿಂದ 10 ವರ್ಷಗಳ ಕಾಲ ರಾಮಪ್ಪನಿಗೆ ಮೋಸ ಆಗಿರುವುದಕ್ಕೆ, ಮುಂದಿನ 8 ರಿಂದ 10 ವರ್ಷ ಅಷ್ಟು ಸಾಮಗ್ರಿಗಳನ್ನು ಉಚಿತವಾಗಿ ಕೊಡಬೇಕು ಎಂದು ನ್ಯಾಯಾಧೀಶರು ತೀರ್ಪು ನೀಡುತ್ತಾರೆ. ಇದನ್ನು ಓದಿ..Kannada News: ಹೊಸ ನಟನ ಚಿತ್ರ ಒಪ್ಪಿಕೊಳ್ಳಲು ಸಪ್ತಮಿ ಗೌಡ ದಾಖಲೆ ಸಂಭಾವನೆ ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ?? ಎಲ್ಲರ ದಾಖಲೆ ಪುಡಿ ಪುಡಿ.

Comments are closed.