Kannada News: ಅಂದು ಅಭಿಮಾನಿಯನ್ನು ಮದುವೆಯಾಗಿ ಪೋಸ್ ನೀಡಿದ್ದ ಇಂದು ಖ್ಯಾತ ನಟಿಯ ಹಿಂದೆ ಬಿದ್ದರೆ ವಿಜಯ್: ಆ ಬೆಣ್ಣೆಯಂತಹ ನಟಿ ಯಾರು ಗೊತ್ತೇ? ವಿಚ್ಚೇದನ ಕೊಟ್ಟು ಮದುವೆ ಆಗ್ತಾರಾ?
Kannada News: ದಳಪತಿ ವಿಜಯ್ (Thalapathy Vijay) ತಮ್ಮ ಪತ್ನಿ ಸಂಗೀತ (sangeetha) ಅವರಿಗೆ ವಿಚ್ಛೇದನ ನೀಡಲಿದ್ದಾರೆ ಹಾಗೂ ನಟಿ ಕೀರ್ತಿ ಸುರೇಶ್ (Keerthy Suresh) ಅವರ ಜೊತೆಗೆ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಕಾಲಿವುಡ್ ನಲ್ಲಿ ಇಂತಹದೊಂದು ಗಾಸಿಪ್ ಹೆಚ್ಚು ಸದ್ದು ಮಾಡುತ್ತಿದೆ. ಅಭಿಮಾನಿಯನ್ನೇ ಪ್ರೀತಿಸಿ 22 ವರ್ಷಗಳ ಹಿಂದೆ ವಿಜಯ್ ಸಂಗೀತ ಅವರನ್ನು ಮದುವೆಯಾಗಿದ್ದರು. ಆದರೆ ಸದ್ಯ ಈ ದಂಪತಿಗಳ ನಡುವೆ ದಾಂಪತ್ಯ ಬಿರುಕು ಮೂಡಿದ್ದು, ಇಬ್ಬರು ಅಷ್ಟಕಷ್ಟೇ ಎನ್ನುವಂತಾಗಿದೆ. ಹೀಗಾಗಿ ಈ ಜೋಡಿ ಡಿವೋರ್ಸ್ ತೆಗೆದುಕೊಳ್ಳುತ್ತಿದೆ ಎಂದು ಸುದ್ದಿ ಹರಿದಾಡುತ್ತಿದೆ. ವಿಜಯ್ ಅವರು ನಟಿ ಕೀರ್ತಿ ಸುರೇಶ್ ಅವರ ಜೊತೆಗೆ ಮದುವೆಯಾಗುವ ಯೋಚನೆಯಲ್ಲಿದ್ದಾರೆ, ಇದಕ್ಕಾಗಿ ತಮ್ಮ ಪತ್ನಿಗೆ ವಿಚ್ಛೇದನ ನೀಡುತ್ತಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಸಾಮಾಜಿಕ ಜಾಲತಾಣಗಳಲ್ಲಿ #justiceforsangeetha ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗುತ್ತಿದ್ದು, ಸಂಗೀತ ಅವರಿಗೆ ಅನ್ಯಾಯ ಆಗಲು ನಾವು ಬಿಡುವುದಿಲ್ಲ ಎಂದು ಕೆಲವು ಜನರು ಪಟ್ಟು ಹಿಡಿದಿದ್ದಾರೆ. ಇತ್ತ ಕೀರ್ತಿ ಸುರೇಶ್ ಅವರ ಜೊತೆಗೆ ವಿಜಯ್ ಇರುವ ಹಲವಾರು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಕೆಲವು ದಿನಗಳ ಹಿಂದೆಯೂ ಇದೇ ರೀತಿ ನಡೆದಿತ್ತು. ವಿಜಯ್ ಅವರ ವಾರಿಸು ಚಿತ್ರ ಬಿಡುಗಡೆಗೆ ಕೆಲವು ದಿನಗಳ ಮೊದಲು ಅವರ ವ್ಯಕ್ತಿ ಚಿತ್ರದ ಕುರಿತ ವಿಕಿಪೀಡಿಯವನ್ನು ತಪ್ಪು ತಪ್ಪಾಗಿ ತಿದ್ದಿ ಅದರ ಸ್ಕ್ರೀನ್ಶಾಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡಲಾಗಿತ್ತು. ವಿಜಯ್ ಪತ್ನಿ ಸಂಗೀತ ವಾರಿಸು ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ, ನಿರ್ದೇಶಕ ಅಟ್ಲಿ ಪತ್ನಿಯ ಸೀಮಂತ ಸಮಾರಂಭದಲ್ಲಿ ಕೂಡ ಅವರು ಭಾಗಿಯಾಗಿರಲಿಲ್ಲ. ಕೇವಲ ವಿಜಯ್ ಮಾತ್ರ ಇದ್ದರು.
ಹೀಗಾಗಿ ಇದನ್ನೆಲ್ಲಾ ಒಂದಕ್ಕೊಂದು ಜೋಡಿಸಿ ವಿಜಯ್ ಮತ್ತು ಸಂಗೀತ ಅವರ ನಡುವೆ ಏನೇನು ಸರಿ ಇಲ್ಲ, ಅವರಿಬ್ಬರ ಸಂಸಾರ ಹಾಳಾಗಿದೆ. ಇಬ್ಬರೂ ಕೂಡ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಇನ್ನೂ ವಿಜಯ ಅಭಿಮಾನಿಗಳು ಇದೆಲ್ಲವೂ ಸುಳ್ಳು ಸುದ್ದಿ, ಸೂರ್ಯ ಮತ್ತು ಅಜಿತ್ ಅಭಿಮಾನಿಗಳು ಹೀಗೆಲ್ಲಾ ತಮ್ಮ ಮೆಚ್ಚಿನ ನಟ ವಿಜಯ್ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಮಾಡುತ್ತಿದ್ದಾರೆ ಎಂದು ವಿಜಯ್ ಅಭಿಮಾನಿಗಳು ಆರೋಪಿಸಿದ್ದಾರೆ. ಇತ್ತ ವಿಜಯ್ ತಮ್ಮ ಪತ್ನಿ ಸಗೀತಾಗೆ ವಿಚ್ಚೇದನ ನೀಡಿದ ಬಳಿಕ ಕೀರ್ತಿ ಸುರೇಶ್ ಅವರನ್ನು ಮದುವೆಯಾಗಲಿದ್ದಾರೆ ಎಂದು ವದಂತಿ ಹಬ್ಬಿದೆ. ಭೈರವ ಮತ್ತು ಸರ್ಕಾರ್ ಚಿತ್ರಗಳಲ್ಲಿ ಕೀರ್ತಿ ಮತ್ತು ವಿಜಯ್ ಒಟ್ಟಾಗಿ ಅಭಿನಯಿಸಿದ್ದಾರೆ. ಇಬ್ಬರ ನಡುವೆಯೂ ಒಳ್ಳೆಯ ಸ್ನೇಹವಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗಾಸಿಪ್ ಸುದ್ದಿಗಳಿಗೆ ಯಾವುದೇ ಸಾಕ್ಷಿ ಇಲ್ಲ. ಹೀಗಾಗಿ ಈ ವದಂತಿಗಳಿಗೆ ಸ್ವತಃ ವಿಜಯ್ ಅವರೇ ಸ್ಪಷ್ಟನೆ ನೀಡಬೇಕಿದೆ.
Comments are closed.