Kannada News: ವಿಷ್ಣುದಾದ ಎರಡನೇ ಮಗಳು, ಯಾಕೆ ಸಮಾಧಿ ಬಳಿ ಬರುವುದಿಲ್ಲ ಗೊತ್ತೇ?? ಅನಿರುದ್ ರವರ ಬಹಿರಂಗವಾಗಿ ಹೇಳಿದ್ದೇನು ಗೊತ್ತೇ??
Kannada News: ಇತ್ತೀಚಿಗಷ್ಟೇ ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಅವರ ಸ್ಮಾರಕದ ಉದ್ಘಾಟನಾ ಕಾರ್ಯಕ್ರಮ ಅರ್ಥಗರ್ಭಿತವಾಗಿ ಮೈಸೂರಿನಲ್ಲಿ ನಡೆಯಿತು. ಸತತ 13 ವರ್ಷಗಳ ಹೋರಾಟದ ಫಲವಾಗಿ ಯಜಮಾನ ವಿಷ್ಣುದಾದಾ ಅವರ ಸ್ಮಾರಕದ ನಿರ್ಮಾಣವಾಗಿದೆ. ಈ ಕಾರ್ಯಕ್ರಮದಲ್ಲಿ ಚಂದನವನದ ಎಲ್ಲಾ ವಿಷ್ಣು ಅಭಿಮಾನಿಗಳು, ನಟ ನಟಿಯರು ಹಾಗೆ ರಾಜಕೀಯ ಪ್ರಮುಖರು ಭಾಗವಹಿಸಿದ್ದರು. ಈ ನಡುವೆ ವಿಷ್ಣುವರ್ಧನ್ ಅವರ ಎರಡನೇ ಮಗಳು ಚಂದನ ಅವರು ವಿಷ್ಣು ಅವರ ಯಾವುದೇ ಕಾರ್ಯಕ್ರಮದಲ್ಲಿಯೂ ಯಾಕೆ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಪ್ರಶ್ನೆಗಳು ಕೇಳಿ ಬರುತ್ತಿವೆ. ಚಂದನ (Chandana) ಅವರಿಗೂ ಮತ್ತು ಅವರ ಉಳಿದ ಕುಟುಂಬದವರಿಗೂ ಪರಸ್ಪರ ಸರಿ ಹೋಗುವುದಿಲ್ಲವೇ, ಅವರ ಅಕ್ಕ ಕೀರ್ತಿ (Keerthi) ಮತ್ತು ಚಂದನ ಅವರ ನಡುವೆ ಅಷ್ಟಕಷ್ಟೇ ಎಂಬ ರೀತಿಯ ಮಾತುಗಳು ಕೇಳಿ ಬರುತ್ತಿವೆ. ಆದರೆ ಇದರ ಮೊದಲ ಬಾರಿಗೆ ನಟ ಅನಿರುದ್ಧ (Anirudh) ಇದೆಲ್ಲದಕ್ಕೂ ತೆರೆ ಎಳೆದಿದ್ದು ಸ್ಪಷ್ಟನೆ ನೀಡಿದ್ದಾರೆ.
ವಿಷ್ಣುವರ್ಧನ್ ಅವರು ನಮ್ಮನಗಲಿದ ನಂತರ ಇಡೀ ಮನೆ ಜವಾಬ್ದಾರಿ ಹಾಗೂ ಭಾರತಿ ಅಮ್ಮನವರನ್ನು (Bharathi Vishnuvardhan) ನೋಡಿಕೊಳ್ಳುತ್ತಿರುವುದು ಅವರ ಅಳಿಯ ಅನಿರುದ್ಧ ಅವರೇ ಆಗಿದ್ದಾರೆ. ಎಲ್ಲ ಜವಾಬ್ದಾರಿಗಳನ್ನು ವಹಿಸಿಕೊಂಡು ಅನಿರುದ್ಧ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅಲ್ಲದೆ ಅವರು ಕೆಲವು ವರ್ಷಗಳಿಂದ ಕಿರುತೆರೆಯಲ್ಲಿಯೂ ಬಿಸಿಯಾಗಿದ್ದಾರೆ. ಜೊತೆ ಜೊತೆಯಲಿ ಧಾರವಾಹಿ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತ್ತು. ಸದ್ಯ ಅವರು ಉದಯವಾಹಿನಿಯಲ್ಲಿ ಮುಂದೆ ಪ್ರಸಾರವಾಗಲಿರುವ ಸೂರ್ಯವಂಶ ಧಾರವಾಹಿಯಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಧಾರಾವಾಹಿ ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ. ನಟ ಅನಿರುದ್ಧ ಅವರು ತಿಂಗಳ ಹಿಂದೆಯಷ್ಟೇ ಅದ್ದೂರಿಯಾಗಿ ತಮ್ಮ ಮನೆಯ ಗೃಹಪ್ರವೇಶ ಕಾರ್ಯಕ್ರಮವನ್ನು ಕೂಡ ಮಾಡಿದರು. ಇದನ್ನು ಓದಿ..Kannada News: ಅದೆಷ್ಟೋ ಸುಳ್ಳು ಮಾಹಿತಿಗಳ ನಡುವೆ ಕ್ರಾಂತಿ ಸಿನಿಮಾ ನಿಜಕ್ಕೂ ಕಲೆಕ್ಷನ್ ಮಾಡಿದ್ದು ಎಷ್ಟು ಗೊತ್ತೇ?? ಫ್ಯಾನ್ಸ್ ಸುಳ್ಳು ಹೇಳುತ್ತಿದ್ದಾರೆಯೇ? ಆಗಿದ್ದರೆ ಕಲೆಕ್ಷನ್ ಎಷ್ಟು ಗೊತ್ತೇ??
ಇದೀಗ ಅನಿರುದ್ ವಿಷ್ಣುವರ್ಧನ್ ಅವರ ಪುತ್ರಿ ಚಂದನ ಅವರು ಯಾಕೆ ಯಾವುದೇ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ, ನಿಮ್ಮ ನಡುವೆ ಏನಾದರೂ ಮನಸ್ತಾಪ ಇದೆಯಾ ಎನ್ನುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ಕುರಿತಾಗಿ ಸ್ಪಷ್ಟನೆ ನೀಡಿರುವ ಅನಿರುದ್ಧ “ನಮ್ಮ ಹಾಗೂ ಚಂದನ ಅವರ ನಡುವೆ ಯಾವುದೇ ವೈಮನಸ್ಯ ಇಲ್ಲ. ನಾವೆಲ್ಲರೂ ಚೆನ್ನಾಗಿಯೇ ಇದ್ದೇವೆ. ನಾವು ಅವರ ಕಾರ್ಯಕ್ರಮಗಳಿಗೆ ಹೋಗುತ್ತೇವೆ, ಅವರು ನಮ್ಮ ಕಾರ್ಯಕ್ರಮಗಳಿಗೆ ಬರುತ್ತಿರುತ್ತಾರೆ. ಅವರು ವಿಷ್ಣುವರ್ಧನ್ ಅವರ ಯಾವುದೇ ಕಾರ್ಯಕ್ರಮಗಳಿಗೂ ತಪ್ಪಿಸಿಕೊಳ್ಳುವುದಿಲ್ಲ. ಎಲ್ಲಾ ಕಾರ್ಯಕ್ರಮಗಳಿಗೂ ಬರುತ್ತಾರೆ. ಆದರೆ ಅವರಿಗೆ ಮಾಧ್ಯಮದವರ ಮುಂದೆ ಬರಲು ಇಷ್ಟವಾಗುವುದಿಲ್ಲ. ಬಹಿರಂಗವಾಗಿ ಮಾತನಾಡುವುದು, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಅವರು ಇಷ್ಟಪಡುವುದಿಲ್ಲ. ಅದೇ ಕಾರಣಕ್ಕಾಗಿ ಅವರು ಯಾರು ಕಣ್ಣಿಗೂ ಅಷ್ಟಾಗಿ ಬೀಳುವುದಿಲ್ಲ. ಆದರೆ ಅವರು ಎಲ್ಲ ಕಾರ್ಯಕ್ರಮಗಳಿಗೂ ಬರುತ್ತಾರೆ. ನಾವೆಲ್ಲರೂ ಚೆನ್ನಾಗಿಯೇ ಇದ್ದೇವೆ, ಯಾವುದೇ ಸಮಸ್ಯೆ ಇಲ್ಲ” ಎಂದು ಹೇಳಿದ್ದಾರೆ. ಇದನ್ನು ಓದಿ..Kannada News: ಬಾಲಿವುಡ್ ಗೆ ಹೋದಮೇಲೆ ವಿಜಯ್ ಗೆ ಕೈ ಕೊಟ್ಟರೆ ರಶ್ಮಿಕಾ: ನಟನ ಜೊತೆ ಬಹಿರಂಗವಾಗಿ ಮಾಡಿದ್ದೇನು ಗೊತ್ತೇ?? ಅಂದು ರಿಷಬ್ ಇಂದು ವಿಜಯ್.
Comments are closed.