Kannada News: ಶಾಕುಂತಲ ಗಾಗಿ ಬರೋಬ್ಬರಿ 30 ಕೆಜಿ ಸೀರೆ ಉಟ್ಟ ಸಮಂತಾ; ಧರಿಸಿದ್ದ ಆಭರಣ ಅದೆಷ್ಟು ಕೋಟಿ ಗೊತ್ತೇ?? ತಿಳಿದರೆ ನಿಂತಲ್ಲೇ ಮೂಗಿನ ಮೇಲೆ ಬೆರಳು ಇಡ್ತೀರಾ.

Kannada News: ನಟಿ ಸಮಂತ (Samantha) ಅವರ ಶಾಕುಂತಲಂ (Shakuntalam) ಚಿತ್ರ ಇನ್ನೂ ಕೆಲವೇ ದಿನಗಳಲ್ಲಿ ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡವು ಚಿತ್ರದ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಪೌರಾಣಿಕ ಹಿನ್ನೆಲೆ ಹೊಂದಿರುವ ಈ ಕಥೆಯಲ್ಲಿ ಸಮಂತ ಶಾಕುಂತಲೆ ಪಾತ್ರವನ್ನು ಅಭಿನಯಿಸಿದ್ದಾರೆ. ಪುರಾಣದ ಜನಪ್ರಿಯ ಕಥೆಯಾದ ದುಶ್ಯಂತ ಮತ್ತು ಶಕುಂತಲೆಯ ಕಥೆಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ತನ್ನ ಅದ್ದೂರಿ ಮೇಕಿಂಗ್, ಗ್ರಾಫಿಕ್ಸ್ ಕಾರಣದಿಂದಲೇ ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಗಳು ಉಂಟಾಗಿವೆ. ಅಲ್ಲದೆ ಈ ಚಿತ್ರಕ್ಕಾಗಿ ನಟಿ ಸಮಂತ ಅವರು ಶಾಕುಂತಲೆಯ ಗೆಟಪ್ ನಲ್ಲಿ ಬರೋಬ್ಬರಿ 30 ಕೆಜಿ ಸೀರೆ ತೊಟ್ಟಿದ್ದು ಸಾಕಷ್ಟು ಸದ್ದು ಮಾಡುತ್ತಿದೆ. ಇಷ್ಟು ಮಾತ್ರವಲ್ಲ ಅವರು ಮೈ ತುಂಬ ತೊಟ್ಟಿರುವ ಒಡವೆಯ ಬೆಲೆ ಕೇಳಿದರೆ ನೀವು ನಿಜಕ್ಕೂ ಶಾಕ್ ಆಗುತ್ತೀರಿ. ಕೋಟಿ ಕೋಟಿ ಬೆಲೆಯ ಆಭರಣಗಳನ್ನು ಅವರು ಮೈ ಮೇಲೆ ತೊಟ್ಟಿದ್ದಾರೆ. ಅಷ್ಟಕ್ಕೂ ಸಮಂತ ಅವರು ಈ ಗೆಟಪ್ ನಲ್ಲಿ ಕಾಣಿಸಿಕೊಳ್ಳಲು ತೊಟ್ಟ ಒಡವೆಗಳ ಒಟ್ಟಾರೆ ಬೆಲೆ ಎಷ್ಟು ಕೋಟಿ ಎನ್ನುವುದನ್ನು ಇಲ್ಲಿ ವಿವರಿಸಿ ಹೇಳಲಾಗಿದೆ.

ಗುಣಶೇಖರ್ (Gunasekhar) ಅವರ ನಿರ್ದೇಶನದಲ್ಲಿ ಶಾಕುಂತಲಂ ಚಿತ್ರ ಮೂಡಿ ಬರುತ್ತಿದೆ. ಚಿತ್ರಕ್ಕೆ ಜಂಟಿಯಾಗಿ ನೀಲಿಮಾ ಗುಣ ಮತ್ತು ದಿಲ್ ರಾಜು ಬಂಡವಾಳ ಹೂಡಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ವಿಶ್ವದ್ಯಂತ ಈ ಚಿತ್ರ ಫೆಬ್ರವರಿ 17ರಂದು ತೆರೆ ಕಾಣುತ್ತಿದೆ. ಕಾಳಿದಾಸನ ಮಹಾಕಾವ್ಯ ಅಭಿಜ್ಞಾನ ಶಾಕುಂತಲ ಕಥೆಯನ್ನು ಆಧರಿಸಿ ಶಾಕುಂತಲಮ್ ಚಿತ್ರವನ್ನು ಹೆಣೆಯಲಾಗಿದೆ. ಪೌರಾಣಿಕ ಹಿನ್ನೆಲೆಯ ಮಹಾನ್ ಪ್ರೇಮ ಕಾವ್ಯವನ್ನು ತೆರೆಯ ಮೇಲೆ ತರಲಾಗುತ್ತಿದೆ. ಇನ್ನು ಕೊನೆಯ ಹಂತದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದ್ದು ಚಿತ್ರದ ಮಲ್ಲಿಕಾ ಮಲ್ಲಿಕಾ ಹಾಡು ಹೆಚ್ಚು ಸದ್ದು ಮಾಡುತ್ತಿದೆ. ಈ ನಡುವೆ ನಟಿ ಸಮಂತ ಶಾಕುಂತಲಂ ಗೆಟಪ್ ನಲ್ಲಿ ಹಾಕಿಕೊಂಡಿರುವ ಡ್ರೆಸ್ ಮತ್ತು ಆಭರಣಗಳ ಬಗ್ಗೆ ಚರ್ಚೆಯಾಗುತ್ತಿದೆ. ಇದನ್ನು ಓದಿ..Kannada News: ಬಾಲಿವುಡ್ ಗೆ ಹೋದಮೇಲೆ ವಿಜಯ್ ಗೆ ಕೈ ಕೊಟ್ಟರೆ ರಶ್ಮಿಕಾ: ನಟನ ಜೊತೆ ಬಹಿರಂಗವಾಗಿ ಮಾಡಿದ್ದೇನು ಗೊತ್ತೇ?? ಅಂದು ರಿಷಬ್ ಇಂದು ವಿಜಯ್.

kannada news samantha shakuntala update | Kannada News: ಶಾಕುಂತಲ ಗಾಗಿ ಬರೋಬ್ಬರಿ 30 ಕೆಜಿ ಸೀರೆ ಉಟ್ಟ ಸಮಂತಾ; ಧರಿಸಿದ್ದ ಆಭರಣ ಅದೆಷ್ಟು ಕೋಟಿ ಗೊತ್ತೇ?? ತಿಳಿದರೆ ನಿಂತಲ್ಲೇ ಮೂಗಿನ ಮೇಲೆ ಬೆರಳು ಇಡ್ತೀರಾ.
Kannada News: ಶಾಕುಂತಲ ಗಾಗಿ ಬರೋಬ್ಬರಿ 30 ಕೆಜಿ ಸೀರೆ ಉಟ್ಟ ಸಮಂತಾ; ಧರಿಸಿದ್ದ ಆಭರಣ ಅದೆಷ್ಟು ಕೋಟಿ ಗೊತ್ತೇ?? ತಿಳಿದರೆ ನಿಂತಲ್ಲೇ ಮೂಗಿನ ಮೇಲೆ ಬೆರಳು ಇಡ್ತೀರಾ. 2

ಪೌರಾಣಿಕ ಪಾತ್ರ ಶಾಕುಂತಲೆಯ ಗೆಟಪ್ನಲ್ಲಿ ಸಮಂತ ಬಹಳ ವಿಶಿಷ್ಟವಾಗಿ ಕಾಣಿಸಿಕೊಂಡಿದ್ದಾರೆ. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಹೈದರಾಬಾದ್ ಮೂಲದ ವಸುಂಧರ ಡೈಮಂಡ್ ರೂಫ್ ಸಂಸ್ಥೆಯಿಂದ ಶಾಕುಂತಲ ಪಾತ್ರಕ್ಕಾಗಿ ಸಮಂತ ಅವರಿಗೆ ಈ ಆಭರಣಗಳ ವಿನ್ಯಾಸಗೊಳಿಸಲಾಗಿತ್ತು. ಬಹಳ ವಿಶೇಷವಾಗಿ ಈ ಪಾತ್ರದ ಲುಕ್ ಮಾಡಲಾಗಿದ್ದು ಸಮಂತ ಅವರನ್ನು ಶಾಕುಂತಲೆಯ ರೂಪದಲ್ಲಿ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಇಷ್ಟು ಮಾತ್ರವಲ್ಲ ಅವರು ಪ್ರತಿ ಲುಕ್ ನಲ್ಲಿ ತೊಟ್ಟಿರುವ ಔಟ್ ಫಿಟ್ ಮತ್ತು ಆಭರಣಗಳ ಬಗ್ಗೆಯೂ ಕೂಡ ಜನರಿಗೆ ಕುತೂಹಲ ಮೂಡಿದೆ. ಅಂದ ಹಾಗೆ ನಟಿ ಸಮಂತ ಅವರು ಈ ಪಾತ್ರಕಾಗಿ ತೊಟ್ಟಿದ್ದ ಸೀರೆಯೊಂದು ಬರೋಬ್ಬರಿ 30 ಕೆಜಿ ತೂಕವಿತ್ತು. ಅಲ್ಲದೆ ಈ ಸೀರೆಯಲ್ಲಿ ಅವರು ಬರೋಬ್ಬರಿ ಏಳು ದಿನಗಳ ಕಾಲದವರೆಗೆ ಶೂಟಿಂಗ್ ಮಾಡಿದ್ದರು. ಇಷ್ಟು ಮಾತ್ರವಲ್ಲ ಅವರು ಮೈಮೇಲೆ ಹಾಕಿಕೊಂಡಿದ್ದ ಆಭರಣಗಳ ಬೆಲೆ ಕೇಳಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಿ. ಅವರು ತೊಟ್ಟಿದ್ದ ಜ್ಯುವೆಲರಿಗಳ ಬೆಲೆ 93 ಕೋಟಿಯಂತೆ. ಹೌದು, ಇಷ್ಟು ದುಬಾರಿ ಬೆಲೆ ಬಾಳುವ ಒಡವೆಗಳನ್ನು ಹಾಕಿಕೊಂಡು ನಟಿ ಸಮಂತ ನಟಿಸಿದ್ದಾರೆ ಎಂದು ಚಿತ್ರತಂಡವೇ ಹೇಳಿಕೊಂಡಿದೆ. ಇದನ್ನು ಓದಿ..Kannada News: ವಿಷ್ಣುದಾದ ಎರಡನೇ ಮಗಳು, ಯಾಕೆ ಸಮಾಧಿ ಬಳಿ ಬರುವುದಿಲ್ಲ ಗೊತ್ತೇ?? ಅನಿರುದ್ ರವರ ಬಹಿರಂಗವಾಗಿ ಹೇಳಿದ್ದೇನು ಗೊತ್ತೇ??

Comments are closed.