Kannada News: ವೀಕೆಂಡ್ ವಿಥ್ ರಮೇಶ್ ಗೆ ಬರಲು ರಿಷಬ್ ಶೆಟ್ಟಿ ಪಡೆಯುತ್ತಿರುವ ಸಂಭಾವನೆ ಕೇಳಿದರೆ, ಒಂದು ಕ್ಷಣ ನಿಂತಲ್ಲೇ ನಡುಗಿ ಹೋಗ್ತೀರಾ. ಇಷ್ಟೊಂದ??
Kannada News: ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ (Weekend with Ramesh) ರಿಯಾಲಿಟಿ ಶೋ ಅತ್ಯಂತ ಜನಪ್ರಿಯವಾದ ಶೋ ಎಂದೆ ಹೇಳಬಹುದು. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಕರೆಸಿ, ಅವರ ಜೀವನದ ಕಥೆಯನ್ನು ವೀಕ್ಷಕರಿಗೆ ಪರಿಚಯ ಮಾಡಿಕೊಡಲಾಗುತ್ತದೆ. ಇದೀಗ ನಾಲ್ಕು ಸೀಸನ್ ಗಳ ನಂತರ ವೀಕೆಂಡ್ ವಿತ್ ರಮೇಶ್ ಸೀಸನ್ 5 ಕೆಲವೇ ದಿನಗಳಲ್ಲಿ ಶುರುವಾಗಲಿದೆ ಎಂದು ವಾಹಿನಿ ದೃಢಪಡಿಸಿದೆ. ಇನ್ನು ಈ ಸೀಸನ್ನ ಮೊದಲ ಸಾಧಕರಾಗಿ ರಿಷಬ್ ಶೆಟ್ಟಿ (Rishab Shetty) ಅವರನ್ನು ಕರೆಸಲಾಗುತ್ತಿದೆಯಂತೆ, ಅಲ್ಲದೆ ಒಂದು ಸಂಚಿಕೆಯಲ್ಲಿ ಸಾಧಕರ ಸೀಟ್ ನಲ್ಲಿ ಕೂರಲು ರಿಷಬ್ ಶೆಟ್ಟಿಯವರಿಗೆ ಕೊಡುತ್ತಿರುವ ಸಂಭಾವನೆ ಎಷ್ಟು ಎನ್ನುವುದನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯ ಎನಿಸುತ್ತದೆ.
ರಮೇಶ್ ಅರವಿಂದ್ (Ramesh Aravind) ನಡೆಸಿಕೊಡುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಆಗಿದೆ. ಇನ್ನು ಮೊದಲ ಸೀಸನ್ ಮೊದಲ ಸಾಧಕರಾಗಿ ನಟ ಪುನೀತ್ ರಾಜಕುಮಾರ್ (Puneeth Rajkumar) ಭಾಗವಹಿಸಿದ್ದರು. ಅಂದಿನಿಂದ ಇಂದಿನವರೆಗೂ ಕೂಡ ಎಲ್ಲಾ ಸೀಸನ್ಗಳಲ್ಲೂ ಬೇರೆ ಬೇರೆ ಕ್ಷೇತ್ರದ ಸಾಧಕರನ್ನು ಶೋ ಮೂಲಕ ಪರಿಚಯಿಸಲಾಗುತ್ತಿದೆ. ಎಷ್ಟೋ ಜನರಿಗೆ ಗೊತ್ತಿಲ್ಲದ ಸಾಧಕರ ಜೀವನದ ಹಿಂದಿನ ಕಷ್ಟ, ನೋವುಗಳನ್ನು ಕೂಡ ತಿಳಿಸಿಕೊಡಲಾಗುತ್ತದೆ. ಆ ಮೂಲಕ ಹೊಸ ಹೊಸ ಸಾಧಕರಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡಲಾಗುತ್ತದೆ. ಇನ್ನು ವಾಹಿನಿ ಯಶಸ್ವಿ ನಾಲ್ಕು ಸೀಸನ್ಗಳ ಬಳಿಕ ತನ್ನ ಐದನೇ ಸೀಸನ್ ಪ್ರಸಾರ ಮಾಡುವ ತಯಾರಿಯಲ್ಲಿದೆ. ಇನ್ನು ಈ ಸೀಸನ್ಗೆ ಮೊದಲ ಸಾಧಕರಾಗಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಕರೆಸಲಾಗುತ್ತಿದೆ. ಇದನ್ನು ಓದಿ..Kannada News: ವಿಷ್ಣುದಾದ ಎರಡನೇ ಮಗಳು, ಯಾಕೆ ಸಮಾಧಿ ಬಳಿ ಬರುವುದಿಲ್ಲ ಗೊತ್ತೇ?? ಅನಿರುದ್ ರವರ ಬಹಿರಂಗವಾಗಿ ಹೇಳಿದ್ದೇನು ಗೊತ್ತೇ??
ಸದ್ಯ ಕಾಂತಾರದ ಯಶಸ್ಸಿನಿಂದ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿರುವ ರಿಷಬ್ ಶೆಟ್ಟಿ ಅವರಿಗೆ ಭಾರತದದ್ಯಂತ ಜನಪ್ರಿಯತೆ ಇದೆ. ಕನ್ನಡ ನೆಲದ ಕಥೆಯೊಂದು ವಿವಿಧ ಭಾಷೆಗಳಲ್ಲಿ ಸದ್ದು ಮಾಡಿ ಕನ್ನಡ ಚಿತ್ರರಂಗಕ್ಕೆ ಒಂದು ಹೆಮ್ಮೆ, ಗರಿಮೆ ಮೂಡಿದೆ. ಹೀಗಾಗಿ ರಿಷಬ್ ಶೆಟ್ಟಿ ಅವರನ್ನು ಮೊದಲ ಸಾಧಕರಾಗಿ ಶೋನಲ್ಲಿ ಕರೆಸಲಾಗುತ್ತಿದೆ. ಇಷ್ಟು ಮಾತ್ರವಲ್ಲ ಕೇವಲ ಒಂದು ಸಂಚಿಕೆಯಲ್ಲಿ ಸಾಧಕರ ಸೀಟ್ನಲ್ಲಿ ರಿಷಬ್ ಕೂರಲು ವಾಹಿನಿ ಅವರಿಗೆ ಕೊಡುತ್ತಿರುವ ಸಂಭಾವನೆ ಕಡಿಮೆ ಏನಲ್ಲ. ಸುಮಾರು ಎಂಟು ಗಂಟೆಗಳ ಕಾಲ ನಡೆಯುವ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ರಿಷಭ್ ಶೆಟ್ಟಿ ಬರೋಬ್ಬರಿ ನಾಲ್ಕು ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನು ಓದಿ..Kannada News: ಶಾಕುಂತಲ ಗಾಗಿ ಬರೋಬ್ಬರಿ 30 ಕೆಜಿ ಸೀರೆ ಉಟ್ಟ ಸಮಂತಾ; ಧರಿಸಿದ್ದ ಆಭರಣ ಅದೆಷ್ಟು ಕೋಟಿ ಗೊತ್ತೇ?? ತಿಳಿದರೆ ನಿಂತಲ್ಲೇ ಮೂಗಿನ ಮೇಲೆ ಬೆರಳು ಇಡ್ತೀರಾ.
Comments are closed.