ಕನ್ನಡತಿಯಲ್ಲಿ ಮಹತ್ವದ ತಿರುವಿಗೆ ಕ್ಷಣ ಗಣನೆ, ಕೊನೆಗೂ ಕನ್ನಡತಿ ಧಾರಾವಾಹಿಯಲ್ಲಿ ಮದುವೆ ಮುಹೂರ್ತ ಫಿಕ್ಸ್ ಆಗುವ ಸಮಯ ಬಂತು, ಯಾವಾಗ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿ ದಿನೇದಿನೇ ಹೊಸ ಟ್ವಿಸ್ಟ್ ಗಳಿಂದ ಪ್ರೇಕ್ಷಕರನ್ನು ಕುರ್ಚಿಯ ಅಂಚಿನಲ್ಲಿ ತಂದು ಕೂರಿಸಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಕಿರಣ್ ರಾಜ್ ಹಾಗೂ ರಂಜನಿ ರಾಘವನ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಧಾರವಾಹಿ ಈಗಾಗಲೇ ಸಿನಿಮಾ ರೇಂಜಿಗೆ ಜನಪ್ರಿಯತೆಯನ್ನು ಸೃಷ್ಟಿಸಿಕೊಂಡಿದೆ. ನಿಮಗೆ ತಿಳಿದಿರುವಂತೆ ಹಲವಾರು ದಿನಗಳಿಂದ ಹರ್ಷನ ಪ್ರೀತಿಯನ್ನು ದೂರ ಮಾಡಿಕೊಂಡೆ ಬಂದಂತಹ ಭುವಿ ಈಗ ಆತನ ಪ್ರೀತಿಯನ್ನು ಒಪ್ಪಿಕೊಂಡಿದ್ದಾಳೆ.

ಆದರೆ ವರುದಿನಿ ಕೂಡ ಹರ್ಷನನ್ನು ಪ್ರೀತಿಸುತ್ತಿರುವುದು ಹಾಗೂ ಆತನಿಗೋಸ್ಕರ ಏನು ಬೇಕಾದರೂ ಮಾಡಲು ಸಿದ್ದಳಾಗಿದ್ದಾಳೆ ಎನ್ನುವುದು ಭುವಿಗೆ ತಿಳಿದಿದೆ. ಈ ಕಾರಣದಿಂದಲೇ ಭುವಿ ಹರ್ಷನ ಜೊತೆಗೆ ಮದುವೆಯನ್ನು ಮುಂದೂಡಿಕೊಂಡು ಬರುತ್ತಿದ್ದಾಳೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಟ್ವಿಸ್ಟ್ ಗಳಿಂದಾಗಿ ಇವರಿಬ್ಬರ ಮದುವೆ ಹೆಚ್ಚು ದೂರ ಇಲ್ಲ ಎಂದು ಹೇಳಲಾಗುತ್ತಿದೆ. ಅದಕ್ಕೆ ಪೂರಕವಾಗಿರುವ ವ್ಯಾಲಿಡ್ ಕಾರಣ ಕೂಡ ಇದೆ. ಹಾಗಿದ್ದರೆ ಅದೇನು ಎಂಬುದನ್ನು ತಿಳಿಯೋಣ ಬನ್ನಿ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಅರ್ಚನ ತಾಯಿ ರತ್ನಮಾಲಾ ರವರಿಗೆ ಆರೋಗ್ಯದ ಸಮಸ್ಯೆ ಇದೆ ಎಂದು. ಅದು ಈಗಾಗಲೇ ಕೊನೆ ಹಂತಕ್ಕೆ ಬಂದು ತಲುಪಿದ್ದು ಇದಾಗಲೇ ಇನ್ನೇನು ಕೆಲವೇ ದಿನಗಳಲ್ಲಿ ಮರಣವನ್ನು ಹೊಂದಬಹುದು ಎಂಬುದಾಗಿ ವೈದ್ಯರು ಈಗಾಗಲೇ ತಿಳಿಸಿದ್ದಾರೆ.

kiran raj kannadati ranjani | ಕನ್ನಡತಿಯಲ್ಲಿ ಮಹತ್ವದ ತಿರುವಿಗೆ ಕ್ಷಣ ಗಣನೆ, ಕೊನೆಗೂ ಕನ್ನಡತಿ ಧಾರಾವಾಹಿಯಲ್ಲಿ ಮದುವೆ ಮುಹೂರ್ತ ಫಿಕ್ಸ್ ಆಗುವ ಸಮಯ ಬಂತು, ಯಾವಾಗ ಗೊತ್ತೇ??
ಕನ್ನಡತಿಯಲ್ಲಿ ಮಹತ್ವದ ತಿರುವಿಗೆ ಕ್ಷಣ ಗಣನೆ, ಕೊನೆಗೂ ಕನ್ನಡತಿ ಧಾರಾವಾಹಿಯಲ್ಲಿ ಮದುವೆ ಮುಹೂರ್ತ ಫಿಕ್ಸ್ ಆಗುವ ಸಮಯ ಬಂತು, ಯಾವಾಗ ಗೊತ್ತೇ?? 2

ಈ ಕಾರಣದಿಂದಾಗಿಯೇ ಹರ್ಷ ತನ್ನ ತಾಯಿಯ ಎಲ್ಲಾ ಆಸೆಗಳನ್ನು ನೆರವೇರಿಸಲು ಸಿದ್ಧರಾಗಿ ನಿಂತಿದ್ದಾನೆ. ಈ ಸಂದರ್ಭದಲ್ಲಿ ತನ್ನ ತಂಗಿಯೊಂದಿಗೆ ಭುವಿ ಹಸಿರು ಪೇಟೆ ಗೆ ಹೋಗಿದ್ದಾಳೆ. ಹರ್ಷನ ತಾಯಿ ರತ್ನಮಾಲ ಕೂಡ ಈಗ ಹಸಿರು ಪೇಟೆಗೆ ಹೋಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾಳೆ. ಹಸಿರು ಪೇಟೆಯವಳು ಹಾಗೂ ಒಳ್ಳೆಯ ಗುಣದವಳು ಎನ್ನುವ ಕಾರಣಕ್ಕಾಗಿ ಭುವಿಯ ಮೇಲೆ ಮೊದಲಿನಿಂದಲೂ ಕೂಡ ರತ್ನಮಾಲ ಳಿಗೆ ಒಲವಿದೆ. ಹೀಗಾಗಿ ಇಬ್ಬರೂ ಒಂದೇ ಸ್ಥಳದಲ್ಲಿ ಇರುವುದರಿಂದಾಗಿ ಮದುವೆ ಮಾತುಕತೆ ಕೂಡ ಶೀಘ್ರದಲ್ಲೇ ನಡೆಯಬಹುದು ಎನ್ನುವ ಸಾಧ್ಯತೆಗಳು ಕಾಣುತ್ತಿವೆ. ಒಂದು ವೇಳೆ ಹೀಗೆ ನಡೆದರೆ ಖಂಡಿತವಾಗಿ ಇದೇ ತಿಂಗಳಲ್ಲಿ ಹರ್ಷ ಹಾಗೂ ಭುವಿಯ ಮದುವೆ ನೋಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Comments are closed.