ಕನ್ನಡ ಚಿತ್ರರಂಗಕ್ಕೆ ಒಟ್ಟಾರೆಯಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಾಳವಿಕಾ – ಅವಿನಾಶ್ ಅವರ ಮನೆಯನ್ನು ಮೊದಲ ಬಾರಿಗೆ ತೋರಿಸ್ತೇವೆ.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ಜೋಡಿಗಳು ಚಿತ್ರರಂಗದ ಮೂಲಕ ಕನೆಕ್ಟಾಗಿ ಮದುವೆಯಾಗಿ ಇಂದಿಗೂ ಕೂಡ ಸುಖಸಂಸಾರ ನಡೆಸುತ್ತಿರುವವರು ಸಾಕಷ್ಟು ಜನ ನೀವು ನೋಡಿರಬಹುದು. ಅವರಲ್ಲಿ ಇಂದು ನಾವು ಮಾತನಾಡುತ್ತಿರುವುದು ಕನ್ನಡ ಚಿತ್ರರಂಗದ ಖ್ಯಾತ ಸ್ಟಾರ್ ಜೋಡಿಗಳಾದ ಅವಿನಾಶ್ ಹಾಗೂ ಮಾಳವಿಕಾ ರವರ ಕುರಿತಂತೆ. ಇಬ್ಬರು ಕೂಡ ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರದಲ್ಲಿ ಗಣನೀಯ ವಾದಂತಹ ಜನಪ್ರಿಯತೆಯನ್ನು ಹೊಂದಿರುವವರು.

ಅವಿನಾಶ್ ರವರ ಪೋಷಕ ಪಾತ್ರದ ಕುರಿತಂತೆ ಕೇಳುವುದೇ ಬೇಡ ಬಹುತೇಕ ಎಲ್ಲಾ ಕನ್ನಡ ಚಿತ್ರಗಳಲ್ಲಿ ಕೂಡ ಅವರು ಕಾಣಿಸಿಕೊಂಡೇ ಕಾಣುತ್ತಾರೆ. ಕನ್ನಡ ಚಿತ್ರರಂಗದ ಅನರ್ಘ್ಯರತ್ನ ಎಂದು ಕರೆದರು ಕೂಡ ತಪ್ಪಾಗಲಾರದು. ಯಾವುದೇ ಬಗೆಯ ಪಾತ್ರವನ್ನು ಕೂಡ ಸುಲಭವಾಗಿ ಮಾಡಬಲ್ಲಂತಹ ಅದ್ವಿತೀಯ ಪ್ರತಿಭಾವಂತ. ಹೀಗಾಗಿ ಪರಭಾಷೆಗಳಲ್ಲಿ ಕೂಡ ಅವರಿಗೆ ಆಫರ್ ನೀಡಿ ಕರೆಯಲಾಗುತ್ತದೆ. ಇನ್ನು ಮಾಳವಿಕಾ ರವರು ಕೂಡ ಪೋಷಕ ಪಾತ್ರದಲ್ಲಿ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಕೆಜಿಎಫ್ ಚಾಪ್ಟರ್ 1 ರಲ್ಲಿ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.

ಎರಡನೇ ಭಾಗದಲ್ಲಿ ಕೂಡ ಅವರ ನಟನೆಯನ್ನು ನೋಡಲು ಸಿನಿಮಾ ಪ್ರೇಕ್ಷಕರು ಕಾತರರಾಗಿದ್ದಾರೆ. ಇನ್ನು ನಾವು ಮಾತನಾಡಲು ಹೊರಟಿರುವುದು ಅವಿನಾಶ್ ಹಾಗೂ ಮಾಳವಿಕಾ ರವರ ಮನೆಯ ಕುರಿತಂತೆ. ಅವಿನಾಶ್ ಹಾಗೂ ಮಾಳವಿಕ ಇಬ್ಬರು ಕೂಡ ಬೆಂಗಳೂರಿನ ನಿವಾಸಿಗಳಾಗಿದ್ದಾರೆ. ಇನ್ನು ಇವರ ಮನೆ ಇಬ್ಬರ ಅಭಿರುಚಿಗೆ ತಕ್ಕಂತೆ ಮಾಡರ್ನ್ ಟೆಕ್ನಾಲಜಿ ಗಳೊಂದಿಗೆ ನಿರ್ಮಿತವಾಗಿದೆ. ಸೆಲೆಬ್ರಿಟಿಗಳ ಮನೆಯೆಂದರೆ ಸುದ್ದಿ ಆಗೇ ಆಗುತ್ತದೆ. ಅವಿನಾಶ್ ಹಾಗೂ ಮಾಳವಿಕಾ ರವರ ಮನೆಯನ್ನು ನೀವು ಈ ವಿಡಿಯೋ ಮುಖಾಂತರ ನೋಡಬಹುದಾಗಿದೆ. ಇವರಿಬ್ಬರ ಈ ಸುಂದರವಾದ ಮನೆಯ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೇ ಶೇರ್ ಮಾಡಿ.

Comments are closed.