ಇತರ ತಂಡಗಳಲ್ಲಿ ಮಿಂಚುತ್ತಿರುವ ಕನ್ನಡಿಗರನ್ನು ಕರೆತಂದು ತಂಡ ಕಟ್ಟಿದರೆ ಆರ್ಸಿಬಿ ಹೇಗಿರಲಿದೆ ಗೊತ್ತೇ?? ಕನ್ನಡಿಗರ ಆರ್ಸಿಬಿ ತಂಡ ಹೇಗಿರಲಿದೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ನ ಕಪ್ ಗೆಲ್ಲುವ ರೇಸ್ ನಿಂದ ಹೊರಗೆ ಬಿದ್ದಿದೆ ನಿಜ ಆದರೆ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಬೇಕಾದರೆ ಕೆ ಎಲ್ ರಾಹುಲ್ ನಮ್ಮ ಕನ್ನಡಿಗ ಮಿಂಚಲಿ ಹಾಗೂ ನಮ್ಮ ತಂಡ ಗೆಲ್ಲಲಿ ಎನ್ನುವ ಆಸೆಯನ್ನು ಪ್ರತಿಯೊಬ್ಬರು ಕೂಡ ಹೊಂದಿದ್ದರು. ಎಲ್ಲರ ಆಸೆಯಂತೆ ಅವತ್ತು ಲಕ್ನೋ ತಂಡದ ಪರವಾಗಿ ಅತ್ಯಧಿಕ ಸ್ಕೋರರ್ ಆಗಿ ಕೆ ಎಲ್ ರಾಹುಲ್ ರವರು ಕಾಣಿಸಿಕೊಂಡಿದ್ದರು ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ವಿರುದ್ಧದ ಪಂದ್ಯವನ್ನು ಗೆದ್ದುಕೊಂಡಿತ್ತು.

ಇದಾದನಂತರ ಕ್ವಾಲಿಫೈಯರ್ 2 ಹಂತಕ್ಕೆ ತಲುಪಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14ವರ್ಷಗಳ ಕಾಯುವಿಕೆಯ ನಂತರ ಈ ಬಾರಿ ಖಂಡಿತವಾಗಿ ಡುಪ್ಲೆಸಿಸ್ ರವರ ನಾಯಕತ್ವದಲ್ಲಿ ಕಪ್ ಗೆಲ್ಲುತ್ತದೆ ಎನ್ನುವುದಾಗಿ ಭಾವಿಸಲಾಗಿತ್ತು. ಆದರೆ ರಾಜಸ್ತಾನ ರಾಯಲ್ಸ್ ತಂಡದ ವಿರುದ್ಧ ಸೋತು ಟೂರ್ನಿಯಿಂದಲೇ ಹೊರಬಿತ್ತು. ಈ ಮೂಲಕ 15ನೇ ವರ್ಷವೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಾವುದೇ ತಪ್ಪಿಲ್ಲದೆ ಮತ್ತೊಮ್ಮೆ ಅದೇ ಕನಸಿನಲ್ಲಿ ಮುಳುಗುವಂತಾಗಿದೆ.

rahul prasid krishna | ಇತರ ತಂಡಗಳಲ್ಲಿ ಮಿಂಚುತ್ತಿರುವ ಕನ್ನಡಿಗರನ್ನು ಕರೆತಂದು ತಂಡ ಕಟ್ಟಿದರೆ ಆರ್ಸಿಬಿ ಹೇಗಿರಲಿದೆ ಗೊತ್ತೇ?? ಕನ್ನಡಿಗರ ಆರ್ಸಿಬಿ ತಂಡ ಹೇಗಿರಲಿದೆ ಗೊತ್ತೇ?
ಇತರ ತಂಡಗಳಲ್ಲಿ ಮಿಂಚುತ್ತಿರುವ ಕನ್ನಡಿಗರನ್ನು ಕರೆತಂದು ತಂಡ ಕಟ್ಟಿದರೆ ಆರ್ಸಿಬಿ ಹೇಗಿರಲಿದೆ ಗೊತ್ತೇ?? ಕನ್ನಡಿಗರ ಆರ್ಸಿಬಿ ತಂಡ ಹೇಗಿರಲಿದೆ ಗೊತ್ತೇ? 3

ಇದೇ ಸಾಲಿನಲ್ಲಿ ಡೆಲ್ಲಿ ಹಾಗೂ ಪಂಜಾಬ್ ತಂಡಗಳು ಕೂಡ ಕಾಣಸಿಗುತ್ತವೆ ಅವುಗಳು ಈಗಾಗಲೇ ಕಪ್ ಗೆದ್ದಿಲ್ಲ ಎನ್ನುವ ಕಾರಣಕ್ಕಾಗಿ ತಂಡದ ಹೆಸರು ಹಾಗೂ ಜರ್ಸಿ ಯನ್ನು ಕೂಡ ಅದೃಷ್ಟ ಬದಲಾವಣೆಗಾಗಿ ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಆದರೆ ಕಪ್ಪ್ ಗೆಲ್ಲದಿದ್ದರೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂತಹ ಕೆಲಸಕ್ಕೆ ಕೈ ಹಾಕಿಲ್ಲ. ಐಪಿಎಲ್ ನಲ್ಲಿ ನೀವು ಸರಿಯಾಗಿ ಗಮನಿಸಿದರೆ ಹಲವಾರು ಕನ್ನಡಿಗರು ಹಲವಾರು ಬೇರೆ ಬೇರೆ ತಂಡಗಳಲ್ಲಿ ಮ್ಯಾಚ್ ವಿನ್ನರ್ ಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಪ್ರತಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕನ್ನಡಿಗರ ಕೊರತೆ ಹೆಚ್ಚಾಗಿ ಕಾಣಿಸುತ್ತಿದೆ. ಅವರನ್ನೆಲ್ಲ ಆರ್ಸಿಬಿ ತಂಡದಲ್ಲಿ ಒಟ್ಟುಗೂಡಿಸಿದರೆ ಖಂಡಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂದು ಮೇಲ್ನೋಟಕ್ಕೆ ಪ್ರಬಲವಾಗಿ ಕಂಡುಬರುತ್ತಿದೆ. ಹಾಗಿದ್ದರೆ ಕೇವಲ ಕನ್ನಡಿಗರನ್ನೇ ಹಾಕಿಕೊಂಡು ಟೀಂ ಕಟ್ಟಿದರೆ ಹೇಗೆ ಇರುತ್ತದೆ ಎಂಬ ಕಲ್ಪನೆಯನ್ನು ನಾವಿಲ್ಲಿ ನಿಮಗೆ ತೋರಿಸುತ್ತೇವೆ ಬನ್ನಿ.

ಕೆ ಎಲ್ ರಾಹುಲ್ ಅವರು ಓಪನಿಂಗ್ ಬ್ಯಾಟ್ಸ್ ಮನ್ ಹಾಗೂ ನಾಯಕನಾಗಿ ಅವರ ಜೊತೆಗೆ ಓಪನಿಂಗ್ ಮಾಡಲು ಮಯಂಕ್ ಅಗರ್ವಲ್ ನಂತರ ದೇವದತ್ ಪಡಿಕ್ಕಲ್ ಅದಾದ ಮೇಲೆ ಬೆನ್ ಸ್ಟೋಕ್ಸ್ ಆಲ್-ರೌಂಡರ್ ಹಾಗೂ ವಿದೇಶಿ ಆಟಗಾರರ ಕೋಟಾದಲ್ಲಿ. ಗ್ಲೆನ್ ಮ್ಯಾಕ್ಸ್ವೆಲ್ ಕೂಡ ವಿದೇಶಿ ಆಟಗಾರರ ಹಾಗೂ ಆಲ್-ರೌಂಡರ್ ಕೋಟಾದಲ್ಲಿ. ದಿನೇಶ್ ಕಾರ್ತಿಕ್ ರವರು ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ ಮ್ಯಾನ್ ಜವಾಬ್ದಾರಿಯಲ್ಲಿ ಶ್ರೀಲಂಕಾದ ವನಿಂದು ಹಸರಂಗ ಮತ್ತು ಜೆ ಸುಚಿತ್ ರವರು ಬೌಲಿಂಗ್ ಆಲ್ರೌಂಡರ್ ರೂಪದಲ್ಲಿ ತಂಡದಲ್ಲಿ ಫಾಸ್ಟ್ ಬೌಲರ್ ಗಳಾಗಿ ಹರ್ಷಲ್ ಪಟೇಲ್ ಹಾಗೂ ಜೋಶ್ ಹೆಝಲ್ ವುಡ್ ಕಾಣಿಸಿಕೊಳ್ಳಬೇಕು.

ಮತ್ತೊಬ್ಬ ಸ್ಟಾರ್ ಬೌಲರ್ ಆಗಿರುವ ಕರ್ನಾಟಕ ಮೂಲದ ಪ್ರಸಿದ್ಧ ಕೃಷ್ಣ ಪ್ರಮುಖ ಬೌಲರ್ ಆಗಿ ಕಾಣಿಸಿಕೊಳ್ಳಬೇಕು. ಇದೊಂದು ಪರ್ಫೆಕ್ಟ್ ತಂಡವಾಗಿ ಕಾಣಿಸಿಕೊಳ್ಳಬಹುದಾಗಿದೆ. ತಂಡದಲ್ಲಿ ಹೆಚ್ಚುವರಿ ಆಟಗಾರರಾಗಿ ವಿರಾಟ್ ಕೊಹ್ಲಿ ಡುಪ್ಲೆಸಿಸ್ ಶಹಬಾಜ್ ಅಹಮದ್ ರಜತ್ ಪಾಟಿದಾರ್ ಜೇಸನ್ ಅಭಿನವ್ ಮನೋಹರ್ ಮನೀಶ್ ಪಾಂಡೆ ಕೆ ಗೌತಮ್ ಕರುಣ್ ನಾಯರ್ ಶ್ರೇಯಸ್ ಗೋಪಾಲ್ ರವರು ಕಾಣಿಸಿಕೊಳ್ಳಬೇಕು.

rcb 1 | ಇತರ ತಂಡಗಳಲ್ಲಿ ಮಿಂಚುತ್ತಿರುವ ಕನ್ನಡಿಗರನ್ನು ಕರೆತಂದು ತಂಡ ಕಟ್ಟಿದರೆ ಆರ್ಸಿಬಿ ಹೇಗಿರಲಿದೆ ಗೊತ್ತೇ?? ಕನ್ನಡಿಗರ ಆರ್ಸಿಬಿ ತಂಡ ಹೇಗಿರಲಿದೆ ಗೊತ್ತೇ?
ಇತರ ತಂಡಗಳಲ್ಲಿ ಮಿಂಚುತ್ತಿರುವ ಕನ್ನಡಿಗರನ್ನು ಕರೆತಂದು ತಂಡ ಕಟ್ಟಿದರೆ ಆರ್ಸಿಬಿ ಹೇಗಿರಲಿದೆ ಗೊತ್ತೇ?? ಕನ್ನಡಿಗರ ಆರ್ಸಿಬಿ ತಂಡ ಹೇಗಿರಲಿದೆ ಗೊತ್ತೇ? 4

ಕೇವಲ ಇಷ್ಟಕ್ಕೆ ನಿಲ್ಲದೆ ತಂಡದ ಸಪೋರ್ಟಿಂಗ್ ಸ್ಟಾಪ್ ನಲ್ಲಿ ಕೂಡ ಕೆಲವೊಂದು ಪ್ರಮುಖ ಬದಲಾವಣೆಗಳ ಇಮ್ಯಾಜಿನೇಷನ್ ಕೂಡ ಈ ಸಾಲಿನಲ್ಲಿ ಬರುತ್ತದೆ. ತಂಡದ ಮುಖ್ಯ ಕೋಚ್ ಆಗಿ ಜಂಬೋ ಖ್ಯಾತಿಯ ಕನ್ನಡದ ಗ್ರೇಟೆಸ್ಟ್ ಆಟಗಾರ ಅನಿಲ್ ಕುಂಬ್ಳೆ ತಂಡದ ಮೆಂಟರ್ ಆಗಿ ಕೆವಿನ್ ಪೀಟರ್ಸನ್ ಅಥವಾ ಎಬಿ ಡಿವಿಲಿಯರ್ಸ್ ರನ್ನು ಆಯ್ಕೆ ಮಾಡಬೇಕು. ಬೌಲಿಂಗ್ ಕೋಚ್ ಆಗಿ ವೆಂಕಟೇಶ್ ಪ್ರಸಾದ್ ಅವರನ್ನು ಆಯ್ಕೆ ಮಾಡಬೇಕು. ಬ್ಯಾಟಿಂಗ್ ಕೋಚ್ ಆಗಿ ಜೆ ಅರುಣ್ ಕುಮಾರ್ ಅವರನ್ನು ನೇಮಿಸಬೇಕು. ಖಂಡಿತವಾಗಿ ಇದು ಕನಸಿನ ಕನ್ನಡಿಗರ ತಂಡ ಆಗುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.