ಕೈಗೆ ಏಟಾಗಿದೆ ಎಂದು ಆಸ್ಪತ್ರೆಗೆ ಹೋದ ಈಕೆಗೆ ಆಸ್ಪತ್ರೆಯವರು ಎಂತಹ ಸ್ಥಿತಿಗೆ ತಂದು ಇಟ್ಟಿದ್ದಾರೆ ಗೊತ್ತೆ? ಅಷ್ಟಕ್ಕೂ ಆಗಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ವೈದ್ಯರ ನಿರ್ಲಕ್ಷದ ಕಾರಣದಿಂದಾಗಿ ಹಲವಾರು ಮುಗ್ಧ ಜನರ ಆರೋಗ್ಯದಲ್ಲಿ ಏರುಪೇರಾಗುತ್ತದೆ ಎಂಬುದಾಗಿ ನೀವು ಆಗಾಗ ಸುದ್ದಿಯಲ್ಲಿ ಕೇಳುತ್ತಲೇ ಇದ್ದೀರಿ. ಈಗ ಇಂದಿನ ವಿಚಾರದಲ್ಲಿ ಕೂಡ ನಾವು ಇದನ್ನು ಹೇಳಲು ಹೊರಟಿದ್ದೇವೆ. ಅದು ಕೂಡ ಇದು ನಡೆದಿರುವುದು ನಮ್ಮ ನಮ್ಮ ಬೆಂಗಳೂರಿನಲ್ಲಿ. ಹೌದು ಗೆಳೆಯರೇ ಬಾಗೇಪಲ್ಲಿ ತಾಲೂಕು ಮೂಲದ 21 ವರ್ಷದ ತೇಜಸ್ವಿನಿ ಎನ್ನುವ ಹೆಣ್ಣುಮಗಳು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದು ಪಿಜಿ ಅಲ್ಲಿಯೇ ವಾಸ ಮಾಡಿಕೊಂಡಿದ್ದಳು.

ಈಕೆ ನಿನ್ನೆಯಷ್ಟೇ ಬಾತ್ರೂಂನಲ್ಲಿ ಬಿದ್ದಾಗ ಕೈ ಗೆ ಇಂಜುರಿ ಆಗಿದ್ದ ಕಾರಣ ಆಸ್ಪತ್ರೆಗೆ ಸೇರಿಸಲಾಗಿತ್ತು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಸೂಚನೆ ನೀಡಲಾಗಿತ್ತು. ಹೌದು ಗೆಳೆಯರೆ ತೇಜಸ್ವಿನಿಯವರು ಮಾರತಹಳ್ಳಿಯ ಜೀವಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿ ಕೆಲವೇ ಗಂಟೆಗಳಲ್ಲಿ ತೇಜಸ್ವಿನಿಯವರು ಜೀವನದಲ್ಲಿ ತಾವು ಕನಸಿನಲ್ಲಿ ಕೂಡ ಎನಿಸಿಕೊಳ್ಳದ ಪರಿಸ್ಥಿತಿಗೆ ಸಿಲುಕಿ ಬಿಟ್ಟಿದ್ದಾರೆ. ಹೌದು ಗೆಳೆಯರೇ ಕೇವಲ ಕೈ ಸರ್ಜರಿ ಮಾಡಿಕೊಳ್ಳಲು ಹೋದ ತೇಜಸ್ವಿನಿ ತನ್ನ ಜೀವವನ್ನೇ ತೆತ್ತಿದ್ದಾಳೆ.

tejaswini 1 | ಕೈಗೆ ಏಟಾಗಿದೆ ಎಂದು ಆಸ್ಪತ್ರೆಗೆ ಹೋದ ಈಕೆಗೆ ಆಸ್ಪತ್ರೆಯವರು ಎಂತಹ ಸ್ಥಿತಿಗೆ ತಂದು ಇಟ್ಟಿದ್ದಾರೆ ಗೊತ್ತೆ? ಅಷ್ಟಕ್ಕೂ ಆಗಿದ್ದೇನು ಗೊತ್ತೇ??
ಕೈಗೆ ಏಟಾಗಿದೆ ಎಂದು ಆಸ್ಪತ್ರೆಗೆ ಹೋದ ಈಕೆಗೆ ಆಸ್ಪತ್ರೆಯವರು ಎಂತಹ ಸ್ಥಿತಿಗೆ ತಂದು ಇಟ್ಟಿದ್ದಾರೆ ಗೊತ್ತೆ? ಅಷ್ಟಕ್ಕೂ ಆಗಿದ್ದೇನು ಗೊತ್ತೇ?? 2

ಹೌದು ಗೆಳೆಯರೇ ತೇಜಸ್ವಿನಿ ಬೆಳಗ್ಗೆ 4ಗಂಟೆಗೆ ಆಸ್ಪತ್ರೆಗೆ ದಾಖಲಾಗಿದ್ದಾಳೆ. 12:00 ಗಂಟೆಗೆ ಆಕೆಯ ಕೈ ಸರ್ಜರಿ ನಡೆದಿದೆ. ಆದರೆ ಸಂಜೆ ನಾಲ್ಕು ಗಂಟೆಗೆಲ್ಲ ಆಕೆ ಎಲ್ಲರನ್ನೂ ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾಳೆ. ಇದು ನಿಜಕ್ಕೂ ಕೂಡ ವೈದ್ಯರ ನಿರ್ಲಕ್ಷದ ಕಾರಣದಿಂದಾಗಿ ನಡೆದಿದೆ ಎಂಬುದಾಗಿ ತೇಜಸ್ವಿನಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಜೀವಿಕ ಆಸ್ಪತ್ರೆಯ ವೈದ್ಯರಾಗಿರುವ ಶಶಾಂಕ್ ಹಾಗೂ ಅಶೋಕ್ ಶೆಟ್ಟಿ ರವರ ವಿರುದ್ಧ ದೂರು ದಾಖಲಾಗಿದ್ದು ತನಿಖೆ ಇನ್ನಷ್ಟೇ ನಡೆಯಬೇಕಾಗಿದೆ. ಅದೇನೇ ಇರಲಿ ಆದರೆ ನಿರ್ಲಕ್ಷದಿಂದ ಒಂದು ಮುಗ್ಧ ಜೀವ ಅರಳುವ ಮುನ್ನವೇ ಬಾಡಿಹೋಗಿದೆ ಎಂಬುದು ವಿಷಾದನೀಯ ವಿಚಾರವಾಗಿದೆ.

Comments are closed.