ರಕ್ಕಮ್ಮ ಐಟಂ ಹಾಡಿಗೆ ಅಭಿಮಾನಿಗಳ ದಿಲ್ ಕುಶ್ ಆಗುವಂತೆ ಡಾನ್ಸ್ ಮಾಡಿದ ವೈಷ್ಣವಿ ಗೌಡ. ಮತ್ತೊಮ್ಮೆ ಡಾನ್ಸ್ ವಿಡಿಯೋ ವೈರಲ್. ಹೇಗಿದೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಪಂಚಭಾಷಾ ಬಿಡುಗಡೆಯನ್ನು ಕಾಣಲಿರುವ ಚಿತ್ರವಾಗಿರುವ ವಿಕ್ರಾಂತ್ ರೋಣ ಚಿತ್ರದ ಗಡಂಗ್ ರಕ್ಕಮ್ಮ ಹಾಡು ಸಾಕಷ್ಟು ದೊಡ್ಡ ಮಟ್ಟದಲ್ಲಿ ಬರಲಾಗುತ್ತಿದ್ದು ಮೇಲಿನ ಘಟನೆ ವೀಕ್ಷಣೆಗಳನ್ನು ಈಗಾಗಲೇ ಪಡೆದುಕೊಂಡಿದೆ. ಹೌದು ಗೆಳೆಯರೇ ವಿಕ್ರಾಂತ್ ರೋಣ ಸಿನಿಮಾದ ಈ ಮೊದಲನೇ ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈಗಾಗಲೇ ಯೂಟ್ಯೂಬ್ ನಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆಗಳನ್ನು ಪಡೆದು ಪ್ರತಿಯೊಂದು ಭಾಷೆಗಳಲ್ಲಿ ಕೂಡ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ನಕಾಶ್ ಅಜೀಜ್ ಹಾಗೂ ಸುನಿಧಿ ಚೌಹಾಣ್ ರವರ ಧ್ವನಿಯ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಅಜನೀಶ್ ಲೋಕನಾಥ್ ಸಂಗೀತದಲ್ಲಿ ತಯಾರಾಗಿರುವ ಈ ಹಾಡು ಈಗಾಗಲೇ ಇನ್ಸ್ಟಾಗ್ರಾಮ್ ಸೇರಿದಂತೆ ಹಲವಾರು ಕಡೆಗಳಲ್ಲಿ ಎಲ್ಲರ ನೆಚ್ಚಿನ ಹಾಡಾಗಿದೆ. ಅದರಲ್ಲೂ ಇತ್ತೀಚಿಗೆ ಸೆಲೆಬ್ರಿಟಿಗಳು ಕೂಡ ಈ ಹಾಡಿನ ತುಣುಕುಗಳಿಗೆ ಡ್ಯಾನ್ಸ್ ಮಾಡುವ ಮೂಲಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಿದ್ದಾರೆ.

ಇತ್ತೀಚಿಗಷ್ಟೇ ಕನ್ನಡ ಚಿತ್ರರಂಗದ ಯುವ ಉದಯೋನ್ಮುಕ ನಟಿಯಾಗಿರುವ ಬೆಡಗಿ ಆಶಿಕಾ ರಂಗನಾಥ್ ರವರು ಕೂಡ ಈ ಹಾಡಿಗೆ ಸೊಂಟವನ್ನು ಬಳುಕಿಸಿದ್ದರು. ಆದರೆ ಈಗ ಬಿಗ್ ಬಾಸ್ ಖ್ಯಾತಿಯ ವೈಷ್ಣವಿ ಗೌಡ ರವರು ಕೂಡ ಈ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಈ ಹಾಡಿನ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಹೌದು ಗೆಳೆಯರೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ರಕ್ಕಮ್ಮ ಹಾಡಿಗೆ ಕುಣಿಯುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡರವರ ಈ ರಕ್ಕಮ್ಮ ಹಾಡಿನ ವಿಡಿಯೋ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಸೆನ್ಸೇಶನ್ ಸೃಷ್ಟಿಸಿದ್ದು ಪ್ರತಿಯೊಬ್ಬರು ಕೂಡ ಫಿದಾ ಆಗಿದ್ದಾರೆ ಎಂದು ಹೇಳಬಹುದಾಗಿದೆ. ನೀವು ಕೂಡ ಈ ವೀಡಿಯೋವನ್ನು ವೀಕ್ಷಿಸಿ ಕಾಮೆಂಟ್ ಬಾಕ್ಸ್ ಅಲ್ಲಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದಾಗಿದೆ.

Comments are closed.