ಇಡೀ ದೇಶಕ್ಕೆ ರಶ್ಮಿಕಾ ರವರ ಮೇಲೆ ಕ್ರಶ್, ಆದರೆ ರಶ್ಮಿಕಾ ರವರಿಗೆ ಯಾರ ಮೇಲೆ ಕ್ರಶ್ ಗೊತ್ತೆ?? ಕೊನೆಗೂ ಓಪನ್ ಆದ ರಶ್ಮಿಕ ಹೇಳಿರುವುದೇನು ಗೊತ್ತೆ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸದ್ಯದ ಮಟ್ಟಿಗೆ ಭಾರತೀಯ ಚಿತ್ರರಂಗದ ಕೃಷ್ ಎನ್ನುವುದಾಗಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ನವರನ್ನು ಎಲ್ಲರೂ ಕರೆಯುತ್ತಾರೆ. ಅತ್ಯಂತ ಕಡಿಮೆ ಸಮಯದಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲಿ ತಮ್ಮ ಜನಪ್ರಿಯತೆಯನ್ನು ಪಸರಿಸಿರುವ ಖ್ಯಾತಿ ರಶ್ಮಿಕಾ ಮಂದಣ್ಣ ಅವರಿಗೆ ಸಲ್ಲುತ್ತದೆ ಇದರಲ್ಲಿ ಯಾವುದೇ ಅನುಮಾನವಿಲ್ಲ. ರಕ್ಷಿತ್ ಶೆಟ್ಟಿ ರವರ ಜೊತೆಗೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ನೆಚ್ಚಿನ ಸಾನ್ವಿ ಆಗಿ ನಂತರ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟು ಸತತವಾಗಿ ಸಿನಿಮಾಗಳಲ್ಲಿ ಗೆಲುವು ಸಾಧಿಸುವ ಮೂಲಕ ತೆಲುಗು ಚಿತ್ರರಂಗದ ನಂಬರ್ ಒನ್ ನಟಿ ಆಗುತ್ತಾರೆ.

ನಂತರ ಈಗ ತಮಿಳು ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳುವ ಮೂಲಕ ಅತ್ಯಂತ ಬಹುಬೇಡಿಕೆ ಹಾಗೂ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸಿನಿಮಾ ಪ್ರೇಮಿಗಳಲ್ಲಿ ನಾವು ಪ್ರತಿಯೊಬ್ಬರಲ್ಲಿ ಕೂಡ ಕೇಳಿದಾಗ ನಿಮ್ಮ ನೆಚ್ಚಿನ ನಟಿ ಅಥವಾ ಕ್ರಷ್ ಯಾರು ಎಂದು ಕೇಳಿದಾಗ ರಶ್ಮಿಕ ಮಂದಣ್ಣ ನವರ ಹೆಸರನ್ನು ಹೇಳುತ್ತಾರೆ. ಆದರೆ ರಶ್ಮಿಕ ಮಂದಣ್ಣ ನವರ ಕ್ರಷ್ ಅಥವಾ ನೆಚ್ಚಿನ ನಟ ಯಾರು ಎಂದು ಕೇಳಿದಾಗ ಸಿಗುವ ಉತ್ತರ ಏನು ಎಂಬುದಾಗಿ ನೀವು ಯೋಚಿಸುತ್ತಿರಬಹುದು. ಅಲ್ಲಿ ಕೂಡ ರಶ್ಮಿಕ ಮಂದಣ್ಣ ಅವರಿಂದಲೇ ಖುದ್ದಾಗಿ ಉತ್ತರ ದೊರೆಯುತ್ತದೆ.

rashmika mandanna | ಇಡೀ ದೇಶಕ್ಕೆ ರಶ್ಮಿಕಾ ರವರ ಮೇಲೆ ಕ್ರಶ್, ಆದರೆ ರಶ್ಮಿಕಾ ರವರಿಗೆ ಯಾರ ಮೇಲೆ ಕ್ರಶ್ ಗೊತ್ತೆ?? ಕೊನೆಗೂ ಓಪನ್ ಆದ ರಶ್ಮಿಕ ಹೇಳಿರುವುದೇನು ಗೊತ್ತೆ??
ಇಡೀ ದೇಶಕ್ಕೆ ರಶ್ಮಿಕಾ ರವರ ಮೇಲೆ ಕ್ರಶ್, ಆದರೆ ರಶ್ಮಿಕಾ ರವರಿಗೆ ಯಾರ ಮೇಲೆ ಕ್ರಶ್ ಗೊತ್ತೆ?? ಕೊನೆಗೂ ಓಪನ್ ಆದ ರಶ್ಮಿಕ ಹೇಳಿರುವುದೇನು ಗೊತ್ತೆ?? 2

ಹೌದು ಗೆಳೆಯರೇ ಶಾಲಾ ದಿನಗಳಿಂದಲೂ ಕೂಡ ರಶ್ಮಿಕ ಮಂದಣ್ಣ ನವರಿಗೆ ತಮಿಳು ಚಿತ್ರರಂಗದ ಸ್ಟಾರ್ ನಟ ತಳಪತಿ ವಿಜಯ್ ರವರು ನೆಚ್ಚಿನ ನಟ ಅಂತೆ. ಅವರ ಸರಳತೆ ಹಾಗೂ ಅವರ ವ್ಯಕ್ತಿತ್ವ ನನಗೆ ತುಂಬಾ ಇಷ್ಟ ಎನ್ನುವುದಾಗಿ ರಶ್ಮಿಕ ಮಂದಣ್ಣ ಹೇಳುತ್ತಾರೆ. ಕೇವಲ ಇಷ್ಟು ಮಾತ್ರವಲ್ಲದೆ ರಶ್ಮಿಕ ಮಂದಣ್ಣ ಅವರ ಮುಂದಿನ ಸಿನಿಮಾ ಕೂಡಾ ತಳಪತಿ ವಿಜಯ ರವರ ಜೊತೆಗೆ. ಈ ಸಿನಿಮಾದ ಮುಹೂರ್ತ ಪೂಜೆ ಸಂದರ್ಭದಲ್ಲಿ ವಿಜಯ್ ರವರಿಗೆ ದೃಷ್ಟಿ ತೆಗೆಯುತ್ತಿರುವ ರಶ್ಮಿಕ ಮಂದಣ್ಣ ನವರ ಫೋಟೋ ಕೂಡ ಈ ಹಿಂದೆ ವೈರಲ್ ಆಗಿರುವುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ರಶ್ಮಿಕ ಮಂದಣ್ಣ ನವರ ಈ ಹೇಳಿಕೆಯ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.