ದೇಶದ ಎಲ್ಲೆಡೆ ಕೋಟಿ ಕೋಟಿ ದೋಚುತ್ತಿರುವ ಕಾಂತಾರ ಸಿನೆಮಾಗೆ ಖರ್ಚಾಗಿದ್ದು ಎಷ್ಟು ಗೊತ್ತೇ?? ರಿಷಬ್ ತಂದೆ ಕೊಟ್ಟ ಲೆಕ್ಕ ಹೇಗಿದೆ ಗೊತ್ತೇ??

ಎಲ್ಲಿ ನೋಡಿದ್ರೂ ಕಾಂತಾರ ಸಿನಿಮಾದೆ ಸುದ್ದಿ. ಈಗಾಗಲೇ 100 ಕೋಟಿ ಕ್ಲಬ್ ಸೇರಿರುವ ಕಾಂತಾರ ಹಿಂದಿಯಲ್ಲಿ ಅಬ್ಬರಿಸುತ್ತಿದೆ. ರಿಷಬ್ ಅಬ್ಬರಕ್ಕೆ ಬಾಲಿವುಡ್ ದಂಗಾಗಿದೆ. ಅಂದಹಾಗೆ ಎಲ್ಲಾ ಭಾಷೆಗಳಿಂದನೂ ಕಾಂತಾರಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರೇಕ್ಷಕರ ಜೊತೆಗೆ ಸಿನಿ ಸೆಲೆಬ್ರಿಟಿಗಳು ಸಹ ರಿಷಬ್ ಶೆಟ್ಟಿ ಕಾಂತಾರಗೆ ಫಿದಾ ಆಗಿದ್ದಾರೆ. ಕಡಿಮೆ ದಿನಗಳಲ್ಲೇ ನೂರಾರು ಕೋಟಿ ಲಾಭ ತಂದುಕೊಟ್ಟ ಕಾಂತಾರ ಸಿನಿಮಾದ ಒಟ್ಟು ಬಜೆಟ್ ಬಗ್ಗೆ ಹಲವು ದಿನಗಳಿಂದ ಚರ್ಚೆ ನಡೆದಿದೆ. ಈ ಸಿನಿಮಾಗೆ ಒಟ್ಟು ಎಷ್ಟು ಖರ್ಚಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಒಬ್ಬೊಬ್ಬರದ್ದು ಒಂದು ಲೆಕ್ಕ. ಆದರೆ, ಈವರೆಗೂ ಹೊಂಬಾಳೆ ಫಿಲ್ಮ್ಸ್ ಆಗಲಿ, ನಿರ್ದೇಶಕ ರಿಷಬ್ ಶೆಟ್ಟಿ ಆಗಲಿ ಬಜೆಟ್ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಇದೇ ಮೊದಲ ಬಾರಿಗೆ ರಿಷಬ್ ಶೆಟ್ಟಿ ಅವರ ತಂದೆ ಈ ಕುರಿತು ಮಾತನಾಡಿದ್ದಾರೆ.

ರಿಷಬ್ ಅವರ ತಂದೆಯೇ ಹೇಳಿದಂತೆ, ಮೊದಲು ಈ ಸಿನಿಮಾಗೆ ಅಂದುಕೊಂಡ ಬಜೆಟ್ 7 ಕೋಟಿ ರೂಪಾಯಿ. ಸಿನಿಮಾ ಮುಗಿದಾಗ ಆದ ಒಟ್ಟು ಬಜೆಟ್ 16 ಕೋಟಿ ರೂಪಾಯಿ. ಈ ಕುರಿತು ಖಾಸಗಿ ವಾಹಿನಿಯ ಜೊತೆ ಮಾತನಾಡುತ್ತಾ, ‘ಮೊದಲು ಈ ಸಿನಿಮಾಗೆ ಅಂದುಕೊಂಡಿದ್ದು ಏಳು ಕೋಟಿ ರೂಪಾಯಿ. ಆನಂತರ ಆಗಿದ್ದು 15 ರಿಂದ 16 ಕೋಟಿ. ಯಾಕೆಂದರೆ, ಮಳೆ ಬಂದು ಮಣ್ಣೇ ಕರಗಿ ಹೋಯಿತು. ರಸ್ತೆ ಕೆಸರಾಗಿ ರಸ್ತೆಯೇ ಮುಚ್ಚಿ ಹೋಯಿತು. ರಸ್ತೆ ನಿರ್ಮಾಣಕ್ಕೆ ಜಲ್ಲಿ ತರಬೇಕಾಯಿತು. ಐದಾರು ತಿಂಗಳು ಮಳೆ ಬಂತು. ಹೀಗೆ ನಾನಾ ರೀತಿಯ ತೊಂದರೆಗಳಿಂದಾಗಿ ಬಜೆಟ್ ಜಾಸ್ತಿ ಆಯಿತು’ ಎಂದು ಅವರು ಹೇಳಿದ್ದಾರೆ.

bhaskar shetty abt kantara budjet | ದೇಶದ ಎಲ್ಲೆಡೆ ಕೋಟಿ ಕೋಟಿ ದೋಚುತ್ತಿರುವ ಕಾಂತಾರ ಸಿನೆಮಾಗೆ ಖರ್ಚಾಗಿದ್ದು ಎಷ್ಟು ಗೊತ್ತೇ?? ರಿಷಬ್ ತಂದೆ ಕೊಟ್ಟ ಲೆಕ್ಕ ಹೇಗಿದೆ ಗೊತ್ತೇ??
ದೇಶದ ಎಲ್ಲೆಡೆ ಕೋಟಿ ಕೋಟಿ ದೋಚುತ್ತಿರುವ ಕಾಂತಾರ ಸಿನೆಮಾಗೆ ಖರ್ಚಾಗಿದ್ದು ಎಷ್ಟು ಗೊತ್ತೇ?? ರಿಷಬ್ ತಂದೆ ಕೊಟ್ಟ ಲೆಕ್ಕ ಹೇಗಿದೆ ಗೊತ್ತೇ?? 2

ಕಾಂತಾರ ಸಿನಿಮಾ ಇದೀಗ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕನ್ನಡವೂ ಸೇರಿದಂತೆ ಬಹುತೇಕ ಕಡೆ ಬಾಕ್ಸ್ ಆಫೀಸ್ ಕಲೆಕ್ಷನ್ ಜೋರಾಗಿದೆ. ಕೇವಲ ಸ್ಯಾಂಡಲ್ ವುಡ್ ಗೆ ಮಾತ್ರ ಸೀಮಿತ ಆಗಿದ್ದ ರಿಷಬ್, ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬದಲಾಗಿದ್ದಾರೆ. ಹಾಗಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ, ನಿರ್ದೇಶಕನಿಗೆ ಹೊಸದೊಂದು ಬಿರುದು ಕೊಡಲು ಮುಂದಾಗಿದ್ದಾರೆ. ರಿಷಭ್ ಅವರಿಗೆ ಡಿವೈನ್ ಸ್ಟಾರ್ ಎಂಬ ಬಿರುದು ಕೊಡಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಅದ್ಭುತ ಕಂಟೆಂಟ್ ಹೊಂದಿರುವ ಕಾಂತಾರ ಚಿತ್ರಕ್ಕೆ 7 ಕೋಟಿ ಎಂದು ಶುರುವಾಗಿ ಬೇರೆ ಬೇರೆ ಕಾರಣಗಳಿಗೆ 15 ರಿಂದ 17 ಕೋಟಿ ಖರ್ಚಾಯಿತು ಎಂದು ರಿಷಭ್ ತಂದೆ ಹೇಳಿಕೊಂಡಿದ್ದಾರೆ.

Comments are closed.