ಕಾಂತಾರ ಸಿನಿಮಾ ಮಾಡಿದ್ದು ರಿಷಬ್ ಶೆಟ್ಟಿ ಅಲ್ಲ ಎಂದ ಜಗ್ಗೇಶ್, ಹೇಳಿದ್ದೇನು ಗೊತ್ತೇ?? ಷಾಕಿಂಗ್ ಹೇಳಿಕೆ ಕೊಟ್ಟ ಜಗ್ಗೇಶ್.

ಕಾಂತಾರ ಸಿನಿಮಾ ನೋಡಿದ ಪ್ರತಿಯೊಬ್ಬರು ಅದೊಂದು ಅದ್ಭುತವಾದ ಸಿನಿಮಾ ಎನ್ನುತ್ತಿದ್ದಾರೆ. ಬಿಡುಗಡೆಯಾಗಿ ಎರಡು ವಾರ ಕಳೆದು ಮೂರನೇ ವಾರಕ್ಕ ಕಾಲಿಟ್ಟಿದ್ದರು, ಜನರು ಮುಗಿಬಿದ್ದು ಥಿಯೇಟರ್ ಗೆ ಬರುತ್ತಿದ್ದಾರೆ. ಸಿನಿಮಾ ನೋಡಿ ದೈವಾಂಶದ ಅನುಭ ಪಡೆಯುತ್ತಿದ್ದಾರೆ. ಕಾಂತಾರ ಸಿನಿಮಾ ನೋಡಿದ ಸಿನಿಪ್ರಿಯರು ಮಾತ್ರವಲ್ಲ, ಚಿತ್ರರಂಗದ ಕಲಾವಿದರು ಸಹ ಮಾರುಹೋಗುತ್ತಿದ್ದಾರೆ. ತೆಲುಗು, ತಮಿಳು ಮಲಯಾಳಂ ಬ್ಯಾಷೆಯ ನಟರು ಕಾಂತಾರ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದರು. ಕನ್ನಡದ ನವರಸ ನಾಯಕ ಜಗ್ಗೇಶ್ ಅವರು ಸಹ ಕಾಂತಾರ ಸಿನಿಮಾ ನೋಡಿ, ತಮಗಾದ ಅದ್ಭುತ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ..

“ಕನ್ನಡ ಚಿತ್ರರಂಗದ ಒಳಿತು ಬಯಸಿ ಬದುಕುತ್ತಿರುವ ಜೀವ ನನ್ನದು ಕಾರಣ ನನ್ನ ಬದುಕಿಗೆ ಸಕಲವು ನೀಡಿದ ನನ್ನ ತಾಯಿ ಕನ್ನಡ ಚಿತ್ರರಂಗ.. ಬಾಲ್ಯದಿಂದ ಕನ್ನಡ ಹಾಗು ರಾಜಣ್ಣನ ಹುಚ್ಚು ಅಭಿಮಾನಿಯಾದ ನಾನು ಕರುನಾಡ ದಾಟಿ ಹೊರಹೋಗದೆ ಬದುಕಿದವನು.. ಸದಾ ನನ್ನ ಕನ್ನಡದ ಕಲಾರಂಗ ಜಗಮೆಚ್ಚುವ ರಂಗ ಆಗಬೇಕು ಎಂದು ಹಂಬಲಿಸುವ ಜನ್ಮ ನನ್ನದು.. ಇತ್ತೀಚಿನ ಚಿತ್ರ ಕಾಂತಾರ ವಿದೇಶಕ್ಕೆ ಬಂದ ಕಾರಣ ನೋಡಲಾಗಲಿಲ್ಲಾ ಆದರೆ ನನ್ನ ಅಕ್ಕನ ಮಗ ಜೀವನ್ ಹಾಗು ನನ್ನ ಅನೇಕ ಚಿತ್ರ ಗುರು ಮೇಲುಕೋಟೆಮಂಜ ಚಿತ್ರದಲ್ಲಿ ಕಳನಟನಾಗಿ ಅಭಿನಯಿಸಿದನು.. ಇಂದು ಅಮೇರಿಕದ ಡೆನ್ವರ್ ನಲ್ಲಿ ಒರ್ಯಾಕಲ್ ಸಂಸ್ಥೆಯಲ್ಲೆ ಶ್ರೇಷ್ಠ ಸ್ಥಾನದಲ್ಲಿರುವ ಅವನ ಮನೆ ಹತ್ತಿರದಲ್ಲೆ ಮಾಲ್ ಇತ್ತು ಅಲ್ಲಿ ಕಾಂತಾರ ನೋಡುವ ಅವಕಾಶ ಸಿಕ್ಕಿತು ನೋಡಿ ಬಂದೆ..

jaggesh abt kantara | ಕಾಂತಾರ ಸಿನಿಮಾ ಮಾಡಿದ್ದು ರಿಷಬ್ ಶೆಟ್ಟಿ ಅಲ್ಲ ಎಂದ ಜಗ್ಗೇಶ್, ಹೇಳಿದ್ದೇನು ಗೊತ್ತೇ?? ಷಾಕಿಂಗ್ ಹೇಳಿಕೆ ಕೊಟ್ಟ ಜಗ್ಗೇಶ್.
ಕಾಂತಾರ ಸಿನಿಮಾ ಮಾಡಿದ್ದು ರಿಷಬ್ ಶೆಟ್ಟಿ ಅಲ್ಲ ಎಂದ ಜಗ್ಗೇಶ್, ಹೇಳಿದ್ದೇನು ಗೊತ್ತೇ?? ಷಾಕಿಂಗ್ ಹೇಳಿಕೆ ಕೊಟ್ಟ ಜಗ್ಗೇಶ್. 2

ನಾನು ದಕ್ಷಿಣ ಕನ್ನಡದ ದೇವಾಲಯದ ಭಕ್ತ ವರ್ಷಕ್ಕೆ ಒಂದು ಬಾರಿ ಪೊಳಲಿ, ಕಟೀಲು, ಉಡುಪಿಕೃಷ್ಣ, ಮೂಕಾಂಬಿಕೆ, ಕೊರಗಜ್ಜ, ಅಂಬಲಪಾಡಿ, ಉಡುಪಿ ರಾಯರ ಮಠ ದರ್ಶನ ಪಡೆವುದು ನನ್ನ 30ವರ್ಷದ ಅಭ್ಯಾಸ ಇದು ನನ್ನ ಪ್ರಕಾರ ಶ್ರೇಷ್ಠ ದೇವಭೂಮಿ.. ಆಧ್ಯಾತ್ಮಿಕ ಅನುಭವಕ್ಕೆ ಈ ಕ್ಷೇತ್ರದಲ್ಲಿ ಸಂತೃಪ್ತ ಭಾವ ಸಿಗುತ್ತದೆ..ಇಂಥ ನಾಡಿನಿಂದ ಎಂಥ ಅದ್ಭುತ ನಟ ನಿರ್ದೇಶಕ ರಿಷಭ್ ಶೆಟ್ಟಿ ಹುಟ್ಟಿಬಂದ ಎಂಥ ಅದ್ಭುತ ಕೊಡುಗೆ ಈತ ಕನ್ನಡ ಚಿತ್ರರಂಗಕ್ಕೆ.. ಕಾಂತಾರ ಕಡೆಯ 25ನಿಮಿಷ ನಾನು ಎಲ್ಲಿರುವೆ ಮರೆತು ಹೋಯಿತು ಚಿತ್ರ ನೋಡಿದ ಮೇಲೆ ಮೌನವಾಯಿತು ದೇಹ ಮನಸ್ಸು ಹೊರಬಂದಾಗ ಕಾಕತಾಳಿಯ ಎಂಬಂತೆ ಮಂತ್ರಾಲಯ ನರಸಿಂಹಚಾರ್ ವಾಟ್ಸ್ಯಾಪ್ ಕರೆಮಾಡಿ ರಾಯರ ದರ್ಶನ ಮಾಡಿಸಿದರು ಮೂಕವಿಸ್ಮಿತನಾದೆ ..

ನಂತರ ನನಗೆ ಅನ್ನಿಸಿದ್ದು ಇದು ವೃಷಭ್ ಮಾಡಿದ ಚಿತ್ರವಲ್ಲಾ ಬದಲಿಗೆ ಆತನ ವಂಶೀಕರ ತಂದೆ ತಾಯಿಯ ಆಶೀರ್ವಾದ ನಶಿಸುತ್ತಿರುವ ಆಧ್ಯಾತ್ಮಿಕ ಭಾವ ಮತ್ತೆ ಮನುಷ್ಯರಿಗೆ ನೆನಪಿಸಲು ದೇವರೆ ಬಂದು ಆತನ ಕೈಯಲ್ಲಿ ಇಂಥ ಅದ್ಭುತ ಸಿನಿಮ ಮಾಡಿಸಿದ್ದಾರೆ..ದೇವರ ದಯೆಯಿಂದ ರಿಷಭನಿಗೆ ನೂರ್ಕಾಲ ಆಯುಷ್ಯ ಆರೋಗ್ಯ ಕೊಟ್ಟು ಕನ್ನಡ ಕಲಾರಂಗಕ್ಕೆ ಆತನ ಸೇವೆ ಇದೆ ರೀತಿ ಮುಂದುವರಿಯಲಿ ಎಂದು ನನ್ನ ಶುಭಹಾರೈಕೆ..
ಕಾಂತಾರ ಸಿನಿಮ ಅಲ್ಲಾ ರೋಮಾಂಚನ ಅನುಭವ…god bless entire team ಶುಭರಾತ್ರಿ..” ಎಂದು ತಡರಾತ್ರಿಯಲ್ಲಿ ಅಮೆರಿಕಾ ಇಂದ ಈ ಪೋಸ್ಟ್ ಮಾಡಿದ್ದಾರೆ ನಟಿ ಜಗ್ಗೇಶ್. ಈ ಮಾತುಗಳನ್ನು ಕೇಳಿದರೆ ಜಗ್ಗೇಶ್ ಅವರು ಎಷ್ಟರ ಮಟ್ಟಿಗೆ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ ಎಂದು ಗೊತ್ತಾಗುತ್ತದೆ.

Comments are closed.