ಪ್ರಪಂಚವನ್ನೇ ಗೆಲ್ಲುವಷ್ಟು ಅದೃಷ್ಟ ಹಣ ಬೇಕು ಎಂದರೆ, ಇದೊಂದು ಗಿಡದ ಜೊತೆ ಚಿಕ್ಕ ಕೆಲಸ ಮಾಡಿ ಸಾಕು. ರಾತ್ರೋ ರಾತ್ರಿ ಅದೃಷ್ಟ ಬಂದು ಬಾಗಿಲು ತಟ್ಟುತ್ತದೆ.
ಪ್ರಪಂಚದಲ್ಲಿ ಎಲ್ಲರು ಕಷ್ಟಪಟ್ಟು ಕೆಲಸ ಮಾಡುವುದು ಹಣ ಸಂಪಾದನೆ ಮಾಡಿ, ಒಳ್ಳೆಯ ಜೀವನ ನಡೆಸಲು. ಹಣವಿಲ್ಲ ಎಂದರೆ ಜೀವನ ನಡೆಸುವುದು ಅಸಾಧ್ಯ ಎಂದೇ ಹೇಳಬಹುದು. ಕೆಲವೊಮ್ಮೆ ಎಷ್ಟೇ ಕಷ್ಟಪಟ್ಟು ಹಣ ಗಳಿಸಿದರು, ಅದು ನಿಮ್ಮ ಬಳಿ ಉಳಿಯುವುದಿಲ್ಲ, ಇದಕ್ಕೆ ಹಲವು ಕಾರಣಗಳಿರಬಹುದು. ಈ ಸಮಸ್ಯೆಗೆ ವಾಸ್ತು ಶಾಸ್ತ್ರದಲ್ಲಿ ಕೆಲವು ಪರಿಹಾರ ಸೂಚಿಸಿದ್ದಾರೆ. ಮನೆಯಲ್ಲಿ ಗಿಡ ನೆಡುವುದು, ಮನೆಯ ನಿರ್ದಿಷ್ಟ ನಿಕ್ಕಿನಲ್ಲಿ ನಿರ್ದಿಷ್ಟ ಗಿಡ ಹಾಕುವುದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಕೆಲವು ಗಿಡಗಳನ್ನು ಮನೆಯಿಂದ ಹೊರಗೆ, ಕೆಲವು ಗಿಡಗಳನ್ನು ಮನೆಯ ಒಳಗೆ ಇಡುವುದರಿಂದ, ಪಾಸಿಟಿವ್ ರಿಸಲ್ಟ್ ಬರುತ್ತದೆ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾರೆ.
ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ, ಗಿಡಗಳು ಇಲ್ಲದ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುವುದಿಲ್ಲ ಎಂದು ಹೇಳಲಾಗಿದೆ. ಶಾಸ್ತ್ರದ ಪ್ರಕಾರ ಪವಿತ್ರವಾದ ಗಿಡ ಅಥವಾ ಮರಗಳಲ್ಲಿ ಬಿಲ್ವಪತ್ರೆ ಕೂಡ ಒಂದು. ಇದನ್ನು ಎಲ್ಲೆಂದರಲ್ಲಿ ಬೆಳೆಸಬಾರದು ಎಂದು ಹೇಳುತ್ತಾರೆ, ಅದರಿಂದ ವಾಸ್ತು ದೋಷ ಆಗಬಹುದು. ಬಿಲ್ವಪತ್ರೆ ಮರ ನೆಟ್ಟು ಬೆಳೆಸಿದರೆ, ಅದರಿಂದ ನಿಮಗೆ ಆರ್ಥಿಕವಾಗಿ ಯಾವುದೇ ಸಮಸ್ಯೆ ಬರುವುದಿಲ್ಲ ಎಂದು ಹೇಳಲಾಗುತ್ತದೆ. ನಿಮ್ಮ ಜೀವನದಲ್ಲಿ ಸಾಲದ ಬಾಧೆ ಸಮಸ್ಯೆ ಇದ್ದರೆ, ಬಿಲ್ವಪತ್ರೆ ಮರವನ್ನು ಕಾಳಜಿಯಿಂದ ಬೆಳೆಸುವುದರಿಂದ ಆ ಸಮಸ್ಯೆಯಿಂದ ದೂರವಾಗಬಹುದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದ್ದಾರೆ.
ಈ ಮರದ ಕೆಳಗೆ ನಿಂತು ಅಗತ್ಯ ಇರುವವರಿಗೆ ಆಹಾರ ಸಿಹಿ ತಿಂಡಿಯನ್ನು ದಾನ ನೀಡಿದರೆ, ನಿಮ್ಮ ಜೀವನಕ್ಕೆ ಬಡತನ ಬರುವುದಿಲ್ಲ ಎನ್ನುವ ನಂಬಿಕೆ ಇದೆ. ವಾಸ್ತು ಶಾಸ್ತ್ರದ ಪ್ರಕಾರ ದಾನ ಮಾಡುವುದು ಶ್ರೇಷ್ಠವಾದ ಕೆಲಸ. ಈ ಮರವು ಸಾಕ್ಷಾತ್ ಶಿವ ಬಹಳ ಇಷ್ಟಪಡುವ ಮರ, ಈ ಮರವನ್ನು ಮನೆಯಲ್ಲಿ ಬೆಳಸಿದರೆ ಹಾವು ಬರಬಹುದ ಎನ್ನುವ ಪ್ರಶ್ನೆ ಎಲ್ಲರಲ್ಲಿದೆ, ಬಿಲ್ವ ಮರ ಬೆಳೆಸುವುದರಿಂದ ನಿಮ್ಮ ಮನೆಗೆ ಹಾವು ಬರುವುದಿಲ್ಲ. ಬಿಲ್ವಪತ್ರೆ ಮರದ ಬೇರನ್ನು ತೆಗೆದುಕೊಂಡು, ಅದಕ್ಕೆ ಕೆಂಪು ಬಟ್ಟೆ ಸುತ್ತಿ ನಿಮ್ಮ ಮನೆಯ ಲಾಕರ್ ಒಳಗೆ ಇಡಿ, ಇದರಿಂದ ನಿಮಗೆ ಆರ್ಥಿಕ ಸಮಸ್ಯೆ ಅಗುವುದಿಲ್ಲ, ಸಾಲದ ಸಮಸ್ಯೆ ಬರುವುದಿಲ್ಲ. ಬಿಲ್ವಪತ್ರೆ ಮರ ಮತ್ತು ಆಕ ಈ ಎರಡರನ್ನು ಜೊತೆಯಾಗಿ ಬೆಳೆಸುವುದರಿಂದ ಶಿವ ಮತ್ತು ಲಕ್ಷ್ಮಿ ಇಬ್ಬರ ಆಶೀರ್ವಾದ ನಿಮಗೆ ಸಿಗುತ್ತದೆ.
Comments are closed.