ಅಭ್ಯಾಸ ಪಂದ್ಯ ಮುಗಿದ ಬಳಿಕ ಗೆದ್ದ ಖುಷಿಯಲ್ಲಿ ಇದ್ದ ಭಾರತಕ್ಕೆ ಬಿಗ್ ಶಾಕ್: ಮತ್ತೊಬ್ಬ ಆಟಗಾರನಿಗೆ ಇಂಜುರಿ. ಈತನಿಲ್ಲದೆ ಕಪ್ ಗೆಲ್ಲಬಹುದೇ??

ಟೀಮ್ ಇಂಡಿಯಾ ತನ್ನ ಟಿ20 ವಿಶ್ವಕಪ್ ಪಂದ್ಯವನ್ನು ಭರ್ಜರಿಯಾಗಿ ಆರಂಭಿಸಿದೆ. ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣೆಸಿದ ಭಾರತ 6 ರನ್ ಗಳಿಂದ ಗೆಲುವು ದಾಖಲಿಸಿದೆ. ಇದೇ ತಿಂಗಳ 19ರಂದು ನ್ಯೂಜಿಲೆಂಡ್ ವಿರುದ್ಧ ಭಾರತವು ತನ್ನ ಎರಡನೇ ಅಭ್ಯಾಸ ಪಂದ್ಯ ಆಡಲಿದೆ. ಆದರೆ ಈ ಪಂದ್ಯಕ್ಕೂ ಮೊದಲೇ ಭಾರತ ತಂಡ ಮತ್ತೊಂದು ಸಮಸ್ಯೆ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಅನುಭವಿ ಆಟಗಾರರು ಎನಿಸಿಕೊಂಡಿದ್ದ ಕೆಲವರು ಗಾಯದಿಂದ ಆಟದಿಂದ ಹೊರಗುಳಿದಿರುವುದು ಭಾರತಕ್ಕೆ ಸಮಸ್ಯೆಯಾಗಿ ಪರಿಣಮಿಸಿತ್ತು. ಗಾಯಗೊಂಡ ಆಟಗಾರರ ಜಾಗಕ್ಕೆ ಬದಲಿ ಆಟಗಾರರು ಬಂದಾಗಿದೆ. ಫಾಸ್ಟ್ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಆಲ್-ರೌಂಡರ್ ರವೀಂದ್ರ ಜಡೇಜಾ ಗಾಯದಿಂದ ಟಿ20 ವಿಶ್ವಕಪ್ ನಿಂದ ಹೊರಗುಳಿದಿದ್ದಾರೆ. ಇವರ ನಂತರ ದೀಪಕ್ ಚಹರ್ ಕೂಡ ಗಾಯಗೊಂಡರು. ಬೆನ್ನು ನೋವಿನ ಪರಿಣಾಮದಿಂದ ಅವರು ಆಟದಿಂದ ಹೊರಗುಳಿಯಬೇಕಾಯಿತು. ಈಗಾಗಲೇ ಕೆ ಎಲ್ ರಾಹುಲ್, ಶಮಿ ಸೇರಿದಂತೆ ಆಟಗಾರರು ಗಾಯದಿಂದ ಸುಧಾರಿಸಿಕೊಂಡು ಮತ್ತೆ ತಂಡವನ್ನು ಸೇರಿದ್ದಾರೆ.

ಇದೆಲ್ಲದರ ಮಧ್ಯೆ ಭಾರತ ತಂಡ ಮತ್ತೊಂದು ಆಘಾತ ಎದುರಿಸಬೇಕಾದ ಸಂದರ್ಭ ಒದಗಿ ಬಂದಿದೆ. ಮತ್ತೊಬ್ಬ ಸ್ಟಾರ್ ಪ್ಲೇಯರ್ ಗಾಯ ಮಾಡಿಕೊಂಡಂತಿದೆ. ಹೌದು, ಅಭ್ಯಾಸ ಪಂದ್ಯದಲ್ಲಿ ಸ್ಟಾರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಕಾಲಿಗೆ ಗಾಯ ಮಾಡಿಕೊಂಡಿರುವಂತೆ ಕಂಡುಬಂದಿದ್ದಾರೆ. ಇದನ್ನು ದೃಢೀಕರಿಸುವಂತ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ. ಇದರಿಂದ ಮತ್ತೊಬ್ಬ ಆಟಗಾರ ಗಾಯಗೊಂಡಿರುವುದು ಆತಂಕ ವ್ಯಕ್ತವಾಗುತ್ತಿದೆ. ಈ ಬಾರಿಯ ಟಿ – ಟ್ವೆಂಟಿ ವಿಶ್ವಕಪ್ ನಲ್ಲಿ ಭಾರತ ತಂಡ ಇಬ್ಬರು ವಿಕೆಟ್ ಕೀಪರ್ ಗಳನ್ನು ಕಣಕ್ಕಿಳಿಸಿದೆ. 2019ರ ಏಕದಿನ ವಿಶ್ವಕಪ್ ನಲ್ಲಿ ಒಂದೇ ಸಲಕ್ಕೆ ನಾಲ್ವರು ವಿಕೆಟ್ ಕೀಪರ್ ಗಳೊಂದಿಗೆ ಆಡುವ ಮೂಲಕ ತಂಡವು ಟೀಕೆಗೆ ಗುರಿಯಾಗಿತ್ತು. ಆದರೆ ಈ ಸಲ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಗೆ ರಿಷಭ್ ಪಂತ್ ಅವರ ಜೊತೆ ಸ್ಥಾನ ನೀಡಲಾಗಿದೆ. ರೀ ಎಂಟ್ರಿ ನಂತರ ಭಾರತ ತಂಡವು ದಿನೇಶ್ ಕಾರ್ತಿಕ್ ಅವರಿಗೆ ಪ್ರೋತ್ಸಾಹ ನೀಡುತ್ತಿದೆ. ಬಹುತೇಕ ರಿಷಭ್ ಪಂತ್ ಅವರನ್ನು ನಿರ್ಲಕ್ಷ್ಯ ಮಾಡುತ್ತಿರುವಂತೆ ಕಾಣುತ್ತಿದೆ.

rishab injury | ಅಭ್ಯಾಸ ಪಂದ್ಯ ಮುಗಿದ ಬಳಿಕ ಗೆದ್ದ ಖುಷಿಯಲ್ಲಿ ಇದ್ದ ಭಾರತಕ್ಕೆ ಬಿಗ್ ಶಾಕ್: ಮತ್ತೊಬ್ಬ ಆಟಗಾರನಿಗೆ ಇಂಜುರಿ. ಈತನಿಲ್ಲದೆ ಕಪ್ ಗೆಲ್ಲಬಹುದೇ??
ಅಭ್ಯಾಸ ಪಂದ್ಯ ಮುಗಿದ ಬಳಿಕ ಗೆದ್ದ ಖುಷಿಯಲ್ಲಿ ಇದ್ದ ಭಾರತಕ್ಕೆ ಬಿಗ್ ಶಾಕ್: ಮತ್ತೊಬ್ಬ ಆಟಗಾರನಿಗೆ ಇಂಜುರಿ. ಈತನಿಲ್ಲದೆ ಕಪ್ ಗೆಲ್ಲಬಹುದೇ?? 2

ದಿನೇಶ್ ಕಾರ್ತಿಕ್ ಅಂತಿಮ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಬಹುದು. ಇಷ್ಟೇ ಅಲ್ಲದೆ ದಿನೇಶ್ ಕಾರ್ತಿಕ್ ಅಭ್ಯಾಸ ಪಂದ್ಯದ ವೇಳೆ 14 ಎಸೆತ, ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 20 ರನ್ ಗಳಿಸಿದ್ದರು. ಇದರಿಂದ ಟೀಮ್ ಮ್ಯಾನೇಜ್ಮೆಂಟ್ ದಿನೇಶ್ ಕಾರ್ತಿಕ್ ಅವರನ್ನು ಫಿನಿಶರ್ ಆಗಿ ಪ್ರಯೋಜಕ ಎಂದು ಭಾವಿಸಿದ್ದು, ರಿಷಭ್ ಪಂತ್ ಇದರಿಂದಾಗಿ ರಿಸರ್ವ್ ಬೆಂಚ್ಗೆ ಸೀಮಿತಗೊಂಡಿದ್ದಾರೆ. ಇಷ್ಟಲ್ಲದೆಯೂ ಈ ಟಿ 20 ವಿಶ್ವಕಪ್ ದಿನೇಶ್ ಕಾರ್ತಿಕ್ ಪಾಲಿಗೆ ಕೊನೆಯ ವಿಶ್ವಕಪ್ ಆಗಿರುವುದರಿಂದ ಹೆಚ್ಚಿನ ಅವಕಾಶ ರೋಹಿತ್ ಗೆ ಒಲಿಯುವ ಅವಕಾಶ ಇದೆ. ಮತ್ತೊಂದು ಕಡೆ ಸೀಮಿತ ಕ್ರಿಕೆಟ್ ನಲ್ಲಿ ಪಂತ್ ಮಿಂಚದೆ ಇದ್ದದರಿಂದ ಎಲ್ಲೆಡೆ ಎಲ್ಲರೂ ದಿನೇಶ್ ಕಾರ್ತಿಕ್ ಪರ ಹೆಚ್ಚಿನ ಒಲವು ತೋರುತ್ತಿದ್ದಾರೆ.

Comments are closed.