Rishab Love Story: ಶಾಲಾ ಸಮಯದಲ್ಲಿಯೇ ಪ್ರೀತಿ ಮಾಡಿದ ರಿಷಬ್ ಶೆಟ್ಟಿ, ಆ ವಯಸ್ಸಿನಲ್ಲೂ ಪ್ರೀತಿ ಮಾಡಿದ್ದು ಯಾರನ್ನು ಗೊತ್ತೇ??
ಕಾಂತಾರ ಸಿನಿಮಾ ದಿನದಿಂದ ದಿನಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಕನ್ನಡ ನಾಡಿನ ಕಲೆಯನ್ನು ಬೆಳ್ಳಿ ಪರದೆಯ ಮೇಲೆ ತರುವಲ್ಲಿ ಚಿತ್ರತಂಡ ಗೆದ್ದಿದೆ. ಇಂತಹ ಚಿತ್ರಗಳಿಗೂ ಜನರಿದ್ದಾರೆ ಎಂಬುದನ್ನು ಕಾಂತಾರ ಸಾಬೀತುಪಡಿಸಿದೆ. ಚಿತ್ರದ ಕೊನೆಯ 20 ನಿಮಿಷದ ಕ್ಲೈಮ್ಯಾಕ್ಸ್ ದೃಶ್ಯಾವಳಿ ಚಿತ್ರ ನೋಡಿದ ನಂತರವೂ ವೀಕ್ಷಕರ ತಲೆಯಲ್ಲಿ ಗಿರ್ ಎನ್ನುವಂತೆ ಕುಳಿತುಬಿಡುತ್ತದೆ. ಅಷ್ಟರಮಟ್ಟಿಗೆ ದೈವವನ್ನು ಆವಾಹಿಸಿಕೊಂಡವರಂತೆ ರಿಷಭ್ ಅಭಿನಯಿಸಿದ್ದಾರೆ. ಚಿತ್ರದ ಗೆಲುವಿನ ಖುಷಿಯಲ್ಲಿ ರಿಷಭ್ ಇದ್ದಾರೆ. ಈ ನಡುವೆ ಶೆಟ್ಟರ ಜೀವನದ ಫಸ್ಟ್ ಲವ್ ಬಗ್ಗೆ ರೋಚಕ ಮಾಹಿತಿ ದೊರೆತಿದೆ. ರಿಷಬ್ ಅವರ ಮೊದಲ ಪ್ರೇಮ ಕಹಾನಿ ಕುರಿತ ಮಾಹಿತಿ ಇಲ್ಲಿದೆ.
ಸಾಮಾನ್ಯವಾಗಿ ಎಲ್ಲರಿಗೂ ಅವರ ಫಸ್ಟ್ ಲವ್ ವಿಶೇಷವಾಗಿರುತ್ತದೆ. ಅಂತಯೇ ರಿಷಭ್ ಅವ್ರ ಲೈಫ್ ನಲ್ಲಿ ಒಂದು ಬೆಸ್ಟ್ ಲವ್ ಸ್ಟೋರಿ ಇದೆ. ಅಚ್ಚರಿ ಎಂದರೆ ರಿಷಬ್ ಅವರಿಗೆ ಶಾಲೆಯಲ್ಲಿದ್ದಾಗಲೇ ಪ್ರೀತಿ ಆಗಿದ್ದು, ಶಾಲೆಯಲ್ಲಿ ಓದುತ್ತಿದ್ದಾಗ ಪ್ರೀತಿಸಿದ ಹುಡುಗಿಯ ಹೆಸರು ರತ್ನಾವತಿ. ಅವರದೇ ತರಗತಿಯವರಾಗಿದ್ದ ರತ್ನಾವತಿ ಮೇಲೆ ರಿಷಭ್ ಅವರಿಗೆ ಲವ್ ಆಗಿತ್ತು. ಆದರೆ ತಾನು ಪ್ರೀತಿಸುತ್ತಿರುವ ವಿಷಯವನ್ನು ಅವರು ಆ ಹುಡುಗಿಗೆ ಹೇಳಿಕೊಂಡಿರಲಿಲ್ಲ. ಬದಲಿಗೆ ತನ್ನ ಪಕ್ಕ ಕೂರುವ ಸ್ನೇಹಿತನಿಗೆ ಮಾತ್ರ ಹೇಳಿಕೊಂಡಿದ್ದರು. ಆ ಹುಡುಗಿಯನ್ನು ರಿಷಭ್ ಪ್ರೀತಿಸಿತ್ತಿದ್ದ ಕಾರಣ ವಿಚಿತ್ರವಾಗಿ ಇತ್ತು. ಸ್ನೇಹಿತ ಇದರ ಬಗ್ಗೆ ಕೇಳಿದಾಗ ನನ್ನ ಅಮ್ಮನ ಹೆಸರು ರತ್ನಾವತಿ, ಅವಳ ಹೆಸರು ರತ್ನಾವತಿ. ಇಬ್ಬರದ್ದು ಒಂದೇ ಹೆಸರು, ಅದಕ್ಕೆ ಲವ್ ಆಗಿದೆ ಎಂದು ರಿಷಬ್ ಉತ್ತರಿಸಿದರಂತೆ.
ಈ ಪ್ರೀತಿ ಮುಂದೆ ರಿಷಭ್ ಗೆ ತೊಂದರೆಗೆ ಸಿಲುಕುವಂತೆ ಮಾಡುತ್ತದೆ. ಇದೇ ವಿಷಯ ಇಟ್ಟುಕೊಂಡು ಸ್ನೇಹಿತರೆಲ್ಲ ರಿಷಭ್ ಅವರನ್ನು ರೇಗಿಸಲು ಶುರು ಮಾಡಿಬಿಡುತ್ತಾರೆ. ಬ್ಲಾಕ್ಮೇಲ್ ಶುರು ಮಾಡುತ್ತಾರೆ. ಬೆಂಗಳೂರಿನಿಂದ ರಿಷಭ್ ತಂದೆ ಬಂದಾಗ ಪ್ರತಿ ಬಾರಿಯೂ ತಪ್ಪದೇ ಇವರಿಗೆ ಚಾಕ್ಲೇಟ್ ಕೊಡಬೇಕಾಗಿತ್ತಂತೆ. ಇದೇ ರೀತಿ ಒಂದು ವರ್ಷ ಸ್ನೇಹಿತರಿಗೆ ಲಂಚ ಕೊಟ್ಟು ರತ್ನಾವತಿ ವಿಷಯ ಯಾರಿಗೂ ಹೇಳದಂತೆ ಬಾಯಿ ಮುಚ್ಚಿಸಿದ್ದರಂತೆ. ಕೊನೆಗೂ ಈ ವಿಷಯ ನಾಗರತ್ನ ಅನ್ನುವ ಟೀಚರ್ ಗೆ ಗೊತ್ತಾಗಿಬಿಡುತ್ತದೆ. ಆದರೆ ಬುದ್ಧಿವಂತಿಕೆಯಿಂದ ಅವರು ಇದಕ್ಕೂ ತನಗೂ ಏನು ಗೊತ್ತಿಲ್ಲ, ಯಾವ ಸಂಬಂಧವೂ ಇಲ್ಲ. ಸ್ನೇಹಿತರೆ ಬೇಕಂತಲೇ ಹೀಗೆ ಸುಳ್ಳು ಹೇಳಿ ಇಲ್ಲದನ್ನು ಹಬ್ಬಿಸುತ್ತಿದ್ದಾರೆ ಎಂದು ಹೇಳಿ ಬಚಾವಾಗಿದ್ದರಂತೆ. ಕಾಂತಾರ ಚಿತ್ರದ ಯಶಸ್ಸಿನ ನಡುವೆ ರಿಷಭ್ ಸ್ಕೂಲ್ ಟೈಮ್ ಲವ್ ಕಹಾನಿ ಸುದ್ದಿ ಆಗುತ್ತಿದೆ.
Comments are closed.