ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಗಳಿಸುತ್ತಿರುವ ಕಾಂತಾರ ಸಿನೆಮಾಗೆ ಹೊಂಬಾಳೆ ಪ್ರೋಡ್ಯೂಕ್ಷನ್ಸ್ ನೀಡಿದ ಸಂಭಾವನೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದೇಶ ವಿದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬೇಡಿಕೆ ಹೆಚ್ಚಾಗಿದ್ದು ಪ್ರದರ್ಶನದ ಸಂಖ್ಯೆ ಕೂಡ ಹೆಚ್ಚಾಗುತ್ತಲೇ ಬಂದಿದೆ. ಇನ್ನು ಈಗಾಗಲೇ ರಾಜ್ಯಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಕೂಡ ಕಾಂತಾರ ಸಿನಿಮಾ ಬರೋಬ್ಬರಿ ಐವತ್ತು ಕೋಟಿ ರೂಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುವಂತಹ ಮುನ್ನುಗ್ತಿದೆ ಎಂಬ ಚರ್ಚೆ ಸಿನಿಮಾ ಪಂಡಿತರ ನಡುವೆ ನಡೆಯುತ್ತಿದೆ.

ಈಗಲೇ ಕಾಂತಾರ ಸಿನಿಮಾ ಬಿಡುಗಡೆ ಆಗಿ 30 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ ಎಂಬುದು ಬಾಕ್ಸ್ ಆಫೀಸ್ ರಿಪೋರ್ಟ್ ಗಳಿಂದ ತಿಳಿದು ಬರುತ್ತಿದೆ. ಇದರ ನಡುವೆ ಸಿನಿಮಾದ ಪ್ರಮುಖ ಕಲಾವಿದರಿಗೆ ಹೊಂಬಾಳೆ ಫಿಲಂಸ್ ಸಂಸ್ಥೆ ನೀಡಿರುವ ಸಂಭಾವನೆ ಬಗ್ಗೆ ಈಗ ತಿಳಿದು ಬಂದಿದೆ. ಹಾಗಿದ್ದರೆ ಯಾರಿಗೆಲ್ಲ ಎಷ್ಟು ಸಂಭಾವನೆ ಸಿಕ್ಕಿದೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ನಾಯಕ ಹಾಗೂ ನಿರ್ದೇಶಕ ಆಗಿರುವ ರಿಷಬ್ ಶೆಟ್ಟಿ ಅವರಿಗೆ 2 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ.

kantara cast samba | ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಗಳಿಸುತ್ತಿರುವ ಕಾಂತಾರ ಸಿನೆಮಾಗೆ ಹೊಂಬಾಳೆ ಪ್ರೋಡ್ಯೂಕ್ಷನ್ಸ್ ನೀಡಿದ ಸಂಭಾವನೆ ಎಷ್ಟು ಗೊತ್ತೇ??
ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಗಳಿಸುತ್ತಿರುವ ಕಾಂತಾರ ಸಿನೆಮಾಗೆ ಹೊಂಬಾಳೆ ಪ್ರೋಡ್ಯೂಕ್ಷನ್ಸ್ ನೀಡಿದ ಸಂಭಾವನೆ ಎಷ್ಟು ಗೊತ್ತೇ?? 2

ಫಾರೆಸ್ಟರ್ ಪಾತ್ರವನ್ನು ನಿರ್ವಹಿಸಿರುವ ಕಿಶೋರ್ ಅವರಿಗೆ 50 ಲಕ್ಷ ರೂಪಾಯಿ ಸಂಭಾವನೆ ನೀಡಲಾಗಿದೆ. ಪ್ರಮೋದ್ ಶೆಟ್ಟಿ ಅವರಿಗೂ ಕೂಡ 50 ಲಕ್ಷ ರೂಪಾಯಿ ಸಂಬಾವನೆ ಸಿಕ್ಕಿದೆ. ಇನ್ನು ಮತ್ತೊಬ್ಬ ಪ್ರಮುಖ ಕಲಾವಿದ ಆಗಿರುವ ಅಚ್ಯುತ್ ಅವರಿಗೆ ಭರ್ಜರಿ 75 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದೆ. ಇನ್ನು ಸಿನಿಮಾದ ನಾಯಕ ನಟಿ ಆಗಿರುವ ಹೊಸ ಪ್ರತಿಭೆ ಸಪ್ತಮಿ ಗೌಡ ಅವರಿಗೆ 20 ಲಕ್ಷ ಸಂಭಾವನೆ ಸಿಕ್ಕಿದೆ ಎಂಬುದಾಗಿ ಸಿನಿಮಾ ಮೂಲಗಳಿಂದ ತಿಳಿದು ಬಂದಿದೆ. ಕಾಂತಾರ ಸಿನಿಮಾದ ಬಗ್ಗೆ ನಿಮಗೆ ಇಷ್ಟ ಆಗಿರುವ ಅಂಶಗಳ ಕುರಿತಂತೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.