ಸೀರಿಯಲ್ ನಲ್ಲಿ ಊಹಿಸದಂತೆ ಮುಗಿಸಿಬಿಟ್ಟರು, ಬಿಗ್ ಬಾಸ್ ಗೆ ಕೂಡ ಬರಲಿಲ್ಲ. ಶನಿ ಖ್ಯಾತಿಯ ಸುನಿಲ್ ಎಲ್ಲೋದರು??

ನಮಸ್ಕಾರ ಸ್ನೇಹಿತರೆ ಶನಿ ಖ್ಯಾತಿಯ ಸುನಿಲ್ ಅವರು ಇತ್ತೀಚಿಗಷ್ಟೇ ಪ್ರಾರಂಭವಾಗಿದ್ದ ಕೆಂಡಸಂಪಿಗೆ ಧಾರವಾಹಿಯಲ್ಲಿ ರಾಜೇಶ್ ಪಾತ್ರವನ್ನು ನಿರ್ವಹಿಸುತ್ತಿದ್ದರು. ಚಿಕ್ಕ ವಯಸ್ಸಿನಿಂದಲೂ ಅನಾಥನಾಗಿ ದಿನ ಬಂದು ಎನ್ನುವ ಚಾಮರಾಜನಗರದ ಅನಾಥಾಶ್ರಮದಲ್ಲಿ ಬೆಳೆದು ಬಂದಿದ್ದ ವಿಶೇಷ ಪ್ರತಿಭೆ ಇವರು. ತಕಧಿಮಿತ ಡ್ಯಾನ್ಸಿಂಗ್ ಕಾರ್ಯಕ್ರಮ ಹಾಗೂ ಶನಿ ಧಾರವಾಹಿ ಇವರ ಜೀವನದಲ್ಲಿ ದೊಡ್ಡ ಮಟ್ಟದ ತಿರುವು ನೀಡಿದ್ದ ಕಾರ್ಯಕ್ರಮಗಳು ಎಂದರ ತಪ್ಪಾಗಲಾರದು. ಇವೆರಡು ಕಾರ್ಯಕ್ರಮಗಳ ನಂತರ ಸುನಿಲ್ ಸಾಕಷ್ಟು ಸಮಯಗಳ ಕಾಲ ಎಲ್ಲೂ ಕಾಣಿಸಿಕೊಂಡಿರಲಿಲ್ಲ.

ಆದರೆ ನಂತರ ಕೊನೆಗೂ ಕೆಂಡಸಂಪಿಗೆ ಎನ್ನುವ ಧಾರವಾಹಿಯಲ್ಲಿ ನಾಯಕಿಯ ತಮ್ಮನ ಪಾತ್ರವನ್ನು ನಿರ್ವಹಿಸಿದ್ದರು. ಆದರೆ ಈಗ ಆಧಾರವಾಗಿ ಇಂದಲೂ ಕೂಡ ಸುನಿಲ್ ಅವರು ಅರ್ಧದಲ್ಲಿ ಹೊರಬರುವಂತಾಗಿದೆ. ಪ್ರಮುಖ ಪಾತ್ರ ಆಗಿದ್ದರೂ ಕೂಡ ರಾಜೇಶನ ಪಾತ್ರವನ್ನು ಮರಣಹೊಂದುವ ಮೂಲಕ ಮುಗಿಸಲಾಗಿದೆ. ಈ ಸಂಚಿಕೆ ಪ್ರಾರಂಭವಾದ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ಸುನಿಲ್ ಬಿಗ್ ಬಾಸ್ ಗೆ ಬರುತ್ತಿದ್ದಾರೆ ಹೀಗಾಗಿಯೇ ಅವರ ಪಾತ್ರವನ್ನು ಕೆಂಡಸಂಪಿಗೆ ಧಾರವಾಹಿಯಲ್ಲಿ ಮುಗಿಸುತ್ತಿದ್ದಾರೆ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಂಡಿದ್ದರು. ಆದರೆ ಈಗ ಧಾರವಾಹಿಯಲ್ಲಿ ಪಾತ್ರ ಮರಣ ಹೊಂದಿದ್ದು ಇತ್ತ ಕಡೆ ಬಿಗ್ ಬಾಸ್ ನಲ್ಲಿ ಕೂಡ ಸುನಿಲ್ ಕಾಣಿಸಿಕೊಂಡಿಲ್ಲ. ವೈಲ್ಡ್ ಕಾರ್ಡ್ ಎಂಟ್ರಿನಲ್ಲಿ ಕೂಡ ಸುನಿಲ್ ಅವರ ಹೆಸರು ಎಲ್ಲೂ ಕೂಡ ಕೇಳಿ ಬರುತ್ತಿಲ್ಲ.

sunil kendasampige 1 | ಸೀರಿಯಲ್ ನಲ್ಲಿ ಊಹಿಸದಂತೆ ಮುಗಿಸಿಬಿಟ್ಟರು, ಬಿಗ್ ಬಾಸ್ ಗೆ ಕೂಡ ಬರಲಿಲ್ಲ. ಶನಿ ಖ್ಯಾತಿಯ ಸುನಿಲ್ ಎಲ್ಲೋದರು??
ಸೀರಿಯಲ್ ನಲ್ಲಿ ಊಹಿಸದಂತೆ ಮುಗಿಸಿಬಿಟ್ಟರು, ಬಿಗ್ ಬಾಸ್ ಗೆ ಕೂಡ ಬರಲಿಲ್ಲ. ಶನಿ ಖ್ಯಾತಿಯ ಸುನಿಲ್ ಎಲ್ಲೋದರು?? 2

ಎಲ್ಲಾ ಕಡೆ ಸುನಿಲ್ ಅವರು ಈಗ ಎಲ್ಲಿ ಹೋಗಿದ್ದಾರೆ ಎಂಬ ಚರ್ಚೆಗಳು ದೊಡ್ಡಮಟ್ಟದಲ್ಲಿ ಕೇಳಿ ಬರುತ್ತಿವೆ. ಕೆಲವರು ಸುನಿಲ್ ಅವರು ತಮ್ಮ ಓದನ್ನು ಮುಂದುವರಿಸುವ ನಿಟ್ಟಿನಲ್ಲಿ ಕಿರುತರೆ ಕ್ಷೇತ್ರದಿಂದ ಹೊರ ಬಂದಿದ್ದಾರೆ ಎಂಬುದಾಗಿ ಹೇಳುತ್ತಿದ್ದಾರೆ. ಇನ್ನು ಕೆಲವರು ಬೇರೆ ಪ್ರಾಜೆಕ್ಟ್ ಗಳ ಕೆಲಸದ ಕಾರಣದಿಂದಾಗಿ ಸುನಿಲ್ ಅವರು ಬೇರೆ ಕಡೆ ಹೋಗಿದ್ದಾರೆ ಎಂಬುದಾಗಿ ಕೂಡ ಮಾತುಗಳು ಕೇಳಿ ಬರುತ್ತಿವೆ. ಇವೆಲ್ಲಾ ಪ್ರಶ್ನೆಗಳಿಗೂ ಈಗ ಸುನಿಲ್ ಅವರೇ ಮುಂದೆ ಬಂದು ಅಭಿಮಾನಿಗಳಿಗೆ ಉತ್ತರವನ್ನು ನೀಡಬೇಕಾಗಿರುವ ಪರಿಸ್ಥಿತಿ ಉದ್ಭವವಾಗಿದೆ. ನಿಮ್ಮ ಪ್ರಕಾರ ಸುನಿಲ್ ಅವರ ಬದುಕಿನಲ್ಲಿ ಏನಾಗಿರಬಹುದು ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.