ಬಾಕ್ಸ್ ಆಫೀಸ್ ಅನ್ನೇ ಶೇಕ್ ಮಾಡುತ್ತಿರುವ ಕಾಂತಾರ ಗೆ ನಿರಾಸೆ: ಅರ್ಧಕ್ಕೆ‌ ನಿಂತ ಕಾಂತಾರ ಸಿನಿಮಾ. ಇದ್ದಕ್ಕಿದ್ದ ಹಾಗೆ ಏನಾಗಿದೆ ಗೊತ್ತೇ??

ಕಾಂತಾರ ಸಿನಿಮಾ ಈಗ ಇಡೀ ಕರ್ನಾಟಕದ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ. ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಹೀಗೆ ಎಲ್ಲಾ ಭಾಷೆಗಳಲ್ಲು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿ ಸ್ಯಾಂಡಲ್ ವುಡ್ ಇಂದ ಬಾಲಿವುಡ್ ವರೆಗು ಎಲ್ಲರೂ ಮೆಚ್ಚುಗೆ ನೀಡುತ್ತಿದ್ದಾರೆ. ಮೊನ್ನೆಯಷ್ಟೇ ಬಾಲಿವುಡ್ ನಟಿ ಕಂಗನಾ ರನಾವತ್ ಕಾಂತಾರ ಸಿನಿಮಾ ನೋಡಿ ಹಾಡಿ ಹೊಗಳಿದರು, ಕಾಂತಾರ ಸಿನಿಮಾ ಆಸ್ಕರ್ ಗೆ ಹೋಗಬೇಕು ಎಂದಿದ್ದರು.

ಅವರಷ್ಟೇ ಅಲ್ಲದೆ, ಈ ವರ್ಷ ತೆರೆಕಂಡು ಸೂಪರ್ ಹಿಟ್ ಆದ, ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಸಹ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದರು. ಎಲ್ಲೆಡೆ ದಾಖಲೆಯ ಪ್ರದರ್ಶನ ಕಾಣುತ್ತಿದ್ದ ಕಾಂತಾರ ಸಿನಿಮಾಗೆ ಈಗ ತುಮಕೂರಿನಲ್ಲಿ ನಿರಾಸೆ ಮೂಡಿದೆ. ತುಮಕೂರಿನ ಗಾಯತ್ರಿ ಚಿತ್ರಮಂದಿರದಲ್ಲಿ ಕಾಂತಾರ ಸಿನಿಮಾ ಪ್ರದರ್ಶನವಾಗುತ್ತಿದ್ದಾಗ, ಅರ್ಧದಲ್ಲೇ ಪ್ರದರ್ಶನ ನಿಲ್ಲಿಸಲಾಗಿದೆ. ತಾಂತ್ರಿಕ ದೋಷದಿಂದ ಕಾಂತಾರ ಸಿನಿಮಾ ಪ್ರದರ್ಶನ ನಿಂತಿದೆ. ತಾಂತ್ರಿಕ ದೋಷದಿಂದ ಈ ರೀತಿ ಆಗಿದೆ ತಿಳಿದುಬಂದಿದೆ.

kantara tumkur | ಬಾಕ್ಸ್ ಆಫೀಸ್ ಅನ್ನೇ ಶೇಕ್ ಮಾಡುತ್ತಿರುವ ಕಾಂತಾರ ಗೆ ನಿರಾಸೆ: ಅರ್ಧಕ್ಕೆ‌ ನಿಂತ ಕಾಂತಾರ ಸಿನಿಮಾ. ಇದ್ದಕ್ಕಿದ್ದ ಹಾಗೆ ಏನಾಗಿದೆ ಗೊತ್ತೇ??
ಬಾಕ್ಸ್ ಆಫೀಸ್ ಅನ್ನೇ ಶೇಕ್ ಮಾಡುತ್ತಿರುವ ಕಾಂತಾರ ಗೆ ನಿರಾಸೆ: ಅರ್ಧಕ್ಕೆ‌ ನಿಂತ ಕಾಂತಾರ ಸಿನಿಮಾ. ಇದ್ದಕ್ಕಿದ್ದ ಹಾಗೆ ಏನಾಗಿದೆ ಗೊತ್ತೇ?? 2

ಕೊನೆಯ 20 ನಿಮಿಷದ ದೃಶ್ಯ ನಡೆಯುವಾಗ, ಸೌಂಡ್ ಪ್ರೊಸೆಸಿಂಗ್ ನಲ್ಲಿ ತಾಂತ್ರಿಕ ದೋಷವಾಗಿ ಪ್ರದರ್ಶನ ನಿಂತಿದ್ದು, ಥಿಯೇಟರ್ ನಲ್ಲಿದ್ದ ಸಿನಿಪ್ರಿಯರು ಗಲಾಟೆ ಮಾಡಲು ಶುರು ಮಾಡಿದ್ದಾರೆ. ಆ ಮಧ್ಯಾಹ್ನದ ಶೋಗೆ 650 ಟಿಕೆಟ್ ಸೇಲ್ ಆಗಿತ್ತು ಎನ್ನಲಾಗಿದೆ. ಸಿನಿಪ್ರಿಯರು ಜಗಳ ಆಡಲು ಶುರು ಮಾಡಿದ ಕಾರಣ ಭಯಪಟ್ಟ ಥಿಯೇಟರ್ ನವರು ಟಿಕೆಟ್ ಹಣವನ್ನು ಜನರಿಗೆ ವಾಪಸ್ ನೀಡಿದ್ದಾರೆ, ಆದರೆ ಈ ರೀತಿ ಜಗಳ ಆಗುತ್ತಿದ್ದ ಕಾರಣ ತುಮಕೂರಿನ ಪೊಲೀಸರು ಸ್ಥಳಕ್ಕೆ ಬಂದು ಜನರನ್ನು ಕಂಟ್ರೋಲ್ ಮಾಡುವಂಥ ಪರಿಸ್ಥಿತಿ ಎದುರಾಯಿತು ಎಂದು ವರದಿಯ ಪ್ರಕಾರ ತಿಳಿದುಬಂದಿದೆ.

Comments are closed.