ಒಂದು ಕಡೆ ಟಾಪ್ ಧಾರಾವಾಹಿಯಾಗಿ ಮೆರೆಯುತ್ತಿರುವಾಗ ನಿಜ ಜೇವನದಲ್ಲಿಯೂ ಸಿಹಿ ಸುದ್ದಿ ಕೊಟ್ಟ ಕಂಠಿ, ಜೀವನಕ್ಕೆ ಹೊಸ ಸಂಗಾತಿ ಆಗಮನ. ವಿಶೇಷ ಏನು ಗೊತ್ತೆ??

ನಮಸ್ಕಾರ ಸ್ನೇಹಿತರೇ, ನೀವು ಈಗಾಗಲೇ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಅಭಿಮಾನಿಯಾಗಿರ ಬಹುದು. ಅತ್ಯಂತ ಉತ್ತಮವಾಗಿ ಮೂಡಿಬರುತ್ತಿರುವ ಈ ಧಾರಾವಾಹಿಯಲ್ಲಿ ಪ್ರತಿ ಎಪಿಸೋಡ್ ನಲ್ಲಿ ಹೊಸತನ, ಹೊಸ ತಿರುವುಗಳನ್ನು ನೀಡುತ್ತಾ ಬಂದಿದೆ. ಇಲ್ಲಿನ ಪ್ರತಿಯೊಂದು ಪಾತ್ರಗಳು ಕೂಡ ಈ ಧಾರವಾಹಿಯ ಯಶಸ್ವಿಗೆ ವೈಯಕ್ತಿಕವಾಗಿ ಕಾರಣರಾಗಿದ್ದಾರೆ ಎಂದರೆ ತಪ್ಪಲ್ಲ. ಪುಟ್ಟಕ್ಕ ನಾಗಿ ನಟಿ ಉಮಾಶ್ರೀ ಅತ್ಯಂತ ನೈಜ ನಟನೆಯನ್ನು ತೋರಿಸಿದರೆ, ಮೊಟ್ಟಮೊದಲ ಬಾರಿಗೆ ಕಿರುತೆರೆಯಲ್ಲಿ ಬಣ್ಣಹಚ್ಚಿದ್ದರು ಅತ್ಯದ್ಭುತವಾಗಿ ನಟಿಸುತ್ತಿರುವ ಕಂಠಿ ಪಾತ್ರದಾರಿ ಧನುಷ್ ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಕಂಠಿ ತನ್ನ ಮೊದಲ ಧಾರಾವಾಹಿ ಇಂದಲೇ ಸಖತ್ ಫೇಮಸ್ ಆಗಿದ್ದು, ಮಹಿಳಾ ಅಭಿಮಾನಿಗಳ ನೆಚ್ಚಿನ ಸ್ಟಾರ್ ಎನಿಸಿದ್ದಾರೆ. ಧನುಷ್ ಅವರು ಯಾವುದೇ ರೆಕಮಂಡೇಶನ್ ಇಂದ ಆಗಲಿ ಅಥವಾ ಕಲಾ ಹಿನ್ನೆಲೆಯುಳ್ಳ ಕುಟುಂಬದಿಂದ ಆಗಲಿ ಬಂದವರಲ್ಲ. ತಾವೇ ಸ್ವತಹ ತಮ್ಮ ಪ್ರತಿಭೆಯಿಂದ ಆಡಿಷನ್ ನನ್ನು ಕೊಟ್ಟು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಾಯಕನಟನ ಪಾತ್ರಕ್ಕೆ ಆಯ್ಕೆಯಾದವರು. ಹಳ್ಳಿಯ ಲುಕ್ ನಲ್ಲಿ ಸಕ್ಕತ್ತಾಗಿ ಕಾಣಿಸುವ ಧನುಷ್, ಸದ್ಯ ತಮ್ಮ ಕನಸುಗಳನ್ನು ನೆರವೇರಿಸಿ ಕೊಂಡಿದ್ದಾರೆ.

kanti puttakkana makkalu 1 | ಒಂದು ಕಡೆ ಟಾಪ್ ಧಾರಾವಾಹಿಯಾಗಿ ಮೆರೆಯುತ್ತಿರುವಾಗ ನಿಜ ಜೇವನದಲ್ಲಿಯೂ ಸಿಹಿ ಸುದ್ದಿ ಕೊಟ್ಟ ಕಂಠಿ, ಜೀವನಕ್ಕೆ ಹೊಸ ಸಂಗಾತಿ ಆಗಮನ. ವಿಶೇಷ ಏನು ಗೊತ್ತೆ??
ಒಂದು ಕಡೆ ಟಾಪ್ ಧಾರಾವಾಹಿಯಾಗಿ ಮೆರೆಯುತ್ತಿರುವಾಗ ನಿಜ ಜೇವನದಲ್ಲಿಯೂ ಸಿಹಿ ಸುದ್ದಿ ಕೊಟ್ಟ ಕಂಠಿ, ಜೀವನಕ್ಕೆ ಹೊಸ ಸಂಗಾತಿ ಆಗಮನ. ವಿಶೇಷ ಏನು ಗೊತ್ತೆ?? 2

ಹೌದು ನಟ ಧನುಷ್ ಕೂಡ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಹಾಗಾಗಿ ಸಣ್ಣ ಸಣ್ಣ ಕನಸುಗಳು ನನಸಾದಾಗ, ಸಣ್ಣ ಆಸೆಗಳು ಈಡೇರಿದಾಗ ಸಹಜವಾಗಿಯೇ ಖುಷಿಪಡುತ್ತಾರೆ. ಇಂದು ತಮ್ಮ ಸಂಭ್ರಮವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ ನಟ ಧನುಷ್. ಅದೇನು ಗೊತ್ತಾ?
ಹೌದು ನಟ ಧನುಷ್ ಹತ್ತು ಲಕ್ಷದ ಹುಂಡೈ ಕಾರನ್ನು ಖರೀದಿಸಿದ್ದಾರೆ. ಈ ಸಂತೋಷದ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಧನುಷ್, ತಮ್ಮ ಮೊದಲಿನ ಕಾರ್ ಕೀ ಯನ್ನು ಅಮ್ಮನಿಂದಲೆ ಪಡೆದು, ಅಮ್ಮ ಕಾರ್ ಮೇಲಿನ ಕವರ್ ತೆಗೆಯುತ್ತಿರುವ ದೃಶ್ಯವನ್ನು ಪೋಸ್ಟ್ ಮಾಡಿದ್ದಾರೆ. ಸದ್ಯ ಮೊದಲ ಧಾರಾವಾಹಿಯಲ್ಲಿಯೇ ಉತ್ತಮ ಹೆಸರುಗಳಿಸಿರುವ ಕಂಠಿ ಅಲಿಯಾಸ್ ಧನುಷ್ ಒಂದೊಂದಾಗಿ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ನನ್ನ ಸ್ವಂತ ದುಡಿಮೆಯನ್ನು ವ್ಯಯಿಸುತ್ತಾರೆ. ಈ ಉದಯೋನ್ಮಖ ಪ್ರತಿಭೆ ಇನ್ನಷ್ಟು ಬೆಳೆಯಲಿ ಎನ್ನುವುದು ನಮ್ಮೆಲ್ಲರ ಹಾರೈಕೆ.

Comments are closed.