ಪಾರ್ವತಮ್ಮನವರ ಕೊನೆಯ ಬರ್ತಡೆ ಆಚರಿಸಿದ್ದ ಅಪ್ಪು ರವರ ವಿಡಿಯೋ ಹೇಗಿದೆ ಗೊತ್ತೇ?? ಅಪ್ಪು ಏನು ಮಾಡಿದ್ದರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈಗಾಗಲೇ ಬಾರದ ಲೋಕಕ್ಕೆ ಹೋಗಿದ್ದಾರೆ. ಇದಕ್ಕೂ ಮುನ್ನ ದೊಡ್ಮನೆ ಕನ್ನಡ ಚಿತ್ರರಂಗದ ಅನ್ನಪೂರ್ಣೇಶ್ವರಿ ಎಂದೇ ಖ್ಯಾತರಾಗಿರುವ ಪಾರ್ವತಮ್ಮನವರ ಮರಣದಲ್ಲಿ ಸಾಕಷ್ಟು ದುಃಖವನ್ನು ಅನುಭವಿಸಿತ್ತು. ಪಾರ್ವತಮ್ಮನವರು ರಾಜಕುಮಾರ್ ರವರ ಯಶಸ್ಸಿನ ಮೂಲ ಶಕ್ತಿಯಾಗಿದ್ದರು ಎಂದರೆ ಖಂಡಿತವಾಗಿ ತಪ್ಪಾಗಲಾರದು. ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ಹೆಣ್ಣುಮಕ್ಕಳು ಕೂಡ ಸ್ವಾವಲಂಬಿಯಾಗಿ ನಿಲ್ಲಬಹುದು ಎಂಬುದನ್ನು ತೋರಿಸಿಕೊಟ್ಟವರು.

ಇನ್ನು ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರ ವಿಚಾರಕ್ಕೆ ಬರುವುದಾದರೆ ಚಿಕ್ಕಂದಿನಿಂದಲೂ ಕೂಡ ಪಾರ್ವತಮ್ಮ ರಾಜಕುಮಾರ್ ಅವರು ಶಿಸ್ತಿನಿಂದ ಹಾಗೂ ಜೋಪಾನವಾಗಿ ಸಾಕಿದ್ದರು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಕೂಡ ತಮ್ಮ ತಾಯಿ ಪಾರ್ವತಮ್ಮ ಎಂದರೆ ಎಲ್ಲಿಲ್ಲದ ಅಚ್ಚುಮೆಚ್ಚು. ಅಮ್ಮನನ್ನು ದೇವರಂತೆ ನೋಡುತ್ತಿದ್ದರು. ದೊಡ್ಡಮನೆಯ ಪ್ರತಿಯೊಂದು ನಿರ್ಧಾರಗಳನ್ನು ಕೂಡ ಪಾರ್ವತಮ್ಮ ರಾಜಕುಮಾರ್ ರವರ ತೆಗೆದುಕೊಳ್ಳುತ್ತಿದ್ದರಿಂದ ದೊಡ್ಡಮನೆ ಸರಿಯಾದ ದಿಕ್ಕಿನಲ್ಲಿ ಸಾಗಿತ್ತು ಎಂದರೆ ತಪ್ಪಾಗಲಾರದು.

ಕನ್ನಡ ಚಿತ್ರರಂಗಕ್ಕೆ ತ್ರಿಮೂರ್ತಿಗಳನ್ನು ನೀಡಿ ಕನ್ನಡ ಚಿತ್ರರಂಗದ ಉದ್ಧಾರಕ್ಕೆ ಕಾರಣವಾದವರಲ್ಲಿ ಒಬ್ಬರಾಗಿದ್ದಾರೆ ಪಾರ್ವತಮ್ಮ ರಾಜಕುಮಾರ್ ಅವರು. ಇಲ್ಲಿನ ವಿಚಾರದಲ್ಲಿ ನಾವು ವಿಶೇಷವಾಗಿ ಇರುವಂತಹ ವಿಚಾರವನ್ನು ಹೇಳಲು ಹೊರಟಿದ್ದೇವೆ. ಹೌದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ತಮ್ಮ ತಾಯಿ ಪಾರ್ವತಮ್ಮ ರಾಜಕುಮಾರ್ ಅವರ ಕೊನೆಯ ಬರ್ತಡೆ ಯನ್ನು ಆಚರಿಸುವ ವಿಡಿಯೋ ಈಗ ವೈರಲ್ ಆಗುತ್ತಿದೆ. ಇದರಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಜೊತೆಗೆ ಅವರ ಸಹೋದರ ನಾಗಿರುವ ರಾಘವೇಂದ್ರ ರಾಜಕುಮಾರ್ ಅವರು ಕೂಡ ಇದ್ದಾರೆ. ಖಂಡಿತವಾಗಿ ಇಂತಹ ಸಂತೋಷವಾದ ಕ್ಷಣಗಳನ್ನು ನೋಡಲು ಕಣ್ಣುಗಳು ಇಷ್ಟಪಡುತ್ತವೆ. ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದೆ. ವಿಡಿಯೋ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೇ ಶೇರ್ ಮಾಡಿಕೊಳ್ಳಿ.

Comments are closed.