ತಿಂಗಳುಗಟ್ಟಲೆ ಫ್ರಿಡ್ಜ್ ಇಲ್ಲದೆ ಕರಿಬೇವನ್ನು ಫ್ರೆಶ್ ಆಗಿ ಇಡುವುದು ಹೇಗೆ ಗೊತ್ತೇ?? ಸುಲಭ ವಿಧಾನ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಫ್ರಿಡ್ಜ್ ನಲ್ಲಿ ಅಥವಾ ಫ್ರಿಡ್ಜ್ ನಲ್ಲಿ ಇಡದೆ ತಿಂಗಳುಗಟ್ಟಲೆ ಕರಿಬೇವನ್ನು ಸ್ಟೋರ್ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಕರಿಬೇವನ್ನು ಸ್ಟೋರ್ ಮಾಡುವ ವಿಧಾನ: ಮೊದಲಿಗೆ ತಂದ ಕರಿಬೇವಿನಲ್ಲಿ ಹುಳುಗಳು ಅಥವಾ ಕೆಟ್ಟ ಎಲೆಗಳು ಇಲ್ಲದ ಹಾಗೆ ಬಿಡಿಸಿಕೊಳ್ಳಿ. ನಂತರ ಒಂದು ಪಾತ್ರೆಗೆ ಕರಿಬೇವನ್ನು ಹಾಕಿ 2 ಬಾರಿ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಕರಿಬೇವಿನ ಎಲೆಗಳನ್ನು ಬಿಡಿಸಿಕೊಂಡು ಒಂದು ಪ್ಲೇಟಿನ ಮೇಲೆ ಹಾಕಿಕೊಳ್ಳಿ.

ನಂತರ ಒಂದು ಕಾಟನ್ ಬಟ್ಟೆಯ ಮೇಲೆ ಕರಿಬೇವಿನ ಎಲೆಗಳನ್ನು ಹರಡಿ ಮತ್ತೊಂದು ಬಟ್ಟೆಯನ್ನು ಅದರ ಮೇಲೆ ಹಾಕಿ ಕೈಯಿಂದ ಮೃದುವಾಗಿ ಎಲೆಗಳನ್ನು ಒತ್ತಿಕೊಳ್ಳಿ. ಈ ರೀತಿ ಮಾಡುವುದರಿಂದ ಕರಿಬೇವಿನಲ್ಲಿರುವ ನೀರಿನ ಅಂಶ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ನಂತರ ಎಲೆಗಳನ್ನು ಒಂದು ಪ್ಲೇಟಿಗೆ ಹಾಕಿಕೊಂಡು ಸಂಪೂರ್ಣ ನೀರಿನ ಅಂಶ ಕಡಿಮೆಯಾಗಲು ಬಿಡಿ.

ನಂತರ ನಾವು ಹೇಳುವ 2 ರೀತಿಯಲ್ಲಿ ಕರಿಬೇವನ್ನು ಸ್ಟೋರ್ ಮಾಡಿ. ಫ್ರಿಡ್ಜ್ ನಲ್ಲಿ ಕರಿಬೇವನ್ನು ಸ್ಟೋರ್ ಮಾಡುವ ವಿಧಾನ: ಕರಿಬೇವನ್ನು ಸ್ಟೋರ್ ಮಾಡುವ ಪಾತ್ರೆಯ ತಳಕ್ಕೆ ಟಿಶ್ಯು ಪೇಪರ್ ನನ್ನು ಹಾಕಿಕೊಳ್ಳಿ. ನಂತರ ಅದರ ಮೇಲೆ ಕರಿಬೇವಿನ ಎಲೆಗಳನ್ನು ಹಾಕಿ ಕೊಳ್ಳಿ. ಮತ್ತೆ ಅದರ ಮೇಲೆ ಟಿಶ್ಯೂ ಪೇಪರನ್ನು ಹಾಕಿಕೊಳ್ಳಿ. ನಂತರ ಮುಚ್ಚಳವನ್ನು ಮುಚ್ಚಿ. ಈ ರೀತಿ ಫ್ರಿಜ್ಜಿನಲ್ಲಿಟ್ಟರೆ 1 ತಿಂಗಳುಗಳ ಕಾಲ ಕರಿಬೇವು ಫ್ರೆಶ್ ಆಗಿರುತ್ತದೆ.

ಫ್ರಿಡ್ಜ್ ಇಲ್ಲದೆ ಸ್ಟೋರ್ ಮಾಡುವ ವಿಧಾನ: ಕರಿಬೇವಿನಲ್ಲಿ ನೀರಿನ ಅಂಶ ಕಡಿಮೆಯಾದ ನಂತರ ಕರಿಬೇವನ್ನು ಮನೆಯ ವಾತಾವರಣದಲ್ಲಿ ಒಣಗಲು ಬಿಡಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಮಧ್ಯಮ ಉರಿಯಲ್ಲಿ ಗ್ಯಾಸ್ ನನ್ನು ಇಟ್ಟು ಕಾಯಲು ಬಿಡಿ. ಎಣ್ಣೆ ಕಾದ ನಂತರ ಅದಕ್ಕೆ ಒಣಗಿದ ಕರಿಬೇವನ್ನು ಹಾಕಿ ಫ್ರೈ ಮಾಡಿಕೊಂಡು ಮತ್ತೊಂದು ಬಟ್ಟಲಿಗೆ ಹಾಕಿ ಕೊಳ್ಳಿ. ತಣ್ಣಗಾದ ನಂತರ ಅದನ್ನು ಒಂದು ಡಬ್ಬಕ್ಕೆ ಹಾಕಿ ಇಟ್ಟರೆ ತಿಂಗಳಾನುಗಟ್ಟಲೆ ಕರಿಬೇವು ಫ್ರೆಶ್ ಆಗಿರುತ್ತದೆ.

Comments are closed.