ಅಪ್ಪು ರವರಿಗೆ ಸಿಕ್ಕ ಕರ್ನಾಟಕ ರತ್ನ ಪ್ರಶಸ್ತಿ ಬಂಗಾರದ ಪದಕ ಎಷ್ಟು ಗ್ರಾಂ ಇದೆ ಗೊತ್ತೇ?? ಖರ್ಚು ಮಾಡಿದ ಹಣ ಎಷ್ಟು ಗೊತ್ತೇ??

ಕಳೆದ ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶ್ರೀ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಕರ್ನಾಟಕ ರತ್ನ ಪ್ರಶಸ್ತಿಯು ಕರ್ನಾಟಕ ಸರ್ಕಾರ ಕೊಡ ಮಾಡುವ ಅತ್ಯುನ್ನತ ಪುರಸ್ಕಾರವಾಗಿದೆ. ಇದುವರೆಗೆ ಸಾಕಷ್ಟು ಸಾಹಿತಿಗಳು, ರಾಜಕಾರಣಿಗಳು ಮತ್ತು ಇತರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಪ್ರತಿಮ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಕುವೆಂಪುರವರು ಸ್ವೀಕರಿಸಿದ್ದಾರೆ. ಜೊತೆಗೆ ಪುನೀತ್ ಅವರ ತಂದೆ ವರನಟ ಡಾಕ್ಟರ್ ರಾಜಕುಮಾರ್ ಅವರು ಕೂಡ ಕುವೆಂಪುರವರು ಪ್ರಶಸ್ತಿ ಸ್ವೀಕರಿಸಿದ ಕೆಲವು ದಿನಗಳ ನಂತರ ತಮ್ಮ ಅದ್ವಿತೀಯ ನಟನೆಗಾಗಿ ಕರ್ನಾಟಕ ರತ್ನ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಂದ ಹಾಗೆ ಈ ಪ್ರಶಸ್ತಿಯ ಮೊತ್ತ ಮತ್ತು ಚಿನ್ನದ ಪದಕದ ತೂಕದ ಬಗ್ಗೆ ಇಲ್ಲಿದೆ ವಿವರ.

ಪುನೀತ್ ಅವರ ಸಮಾಜ ಸೇವೆ, ವ್ಯಕ್ತಿತ್ವ ಗುರುತಿಸಿ ಕರ್ನಾಟಕ ಸರ್ಕಾರದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯದ ಅತ್ಯುನ್ನತ ನಾಗರಿಕ ಗೌರವ ಪುರಸ್ಕಾರವಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಿಸಿತ್ತು. ಈ ಪ್ರಶಸ್ತಿಯನ್ನು ವಿಶೇಷವಾಗಿ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿಯೇ ಕೊಡುವ ನಿರ್ಧಾರವನ್ನು ಮಾಡಲಾಗಿತ್ತು. ಅದರಂತೆ ಇದೇ ನವೆಂಬರ್ ಒಂದರಂದು ವಿಧಾನಸೌಧದ ಮುಂಭಾಗದಲ್ಲಿ ಡಾಕ್ಟರ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ ಜಾಗದಲ್ಲಿಯೇ ಪುನೀತ್ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಯಿತು. ಈ ಪ್ರಶಸ್ತಿಯನ್ನು ಪುನೀತ್ ಅವರ ಪರವಾಗಿ ಅವರ ಪತ್ನಿ ಶ್ರೀಮತಿ ಅಶ್ವಿನಿ ಪುನೀತ್ ಸ್ವೀಕರಿಸಿದರು. ರಾಜ್ಯ ಸರ್ಕಾರದ ಪರವಾಗಿ ಸುಧಾ ಮೂರ್ತಿಯವರು ಈ ಪ್ರಶಸ್ತಿಯನ್ನು ಅಶ್ವಿನಿ ಅವರಿಗೆ ನೀಡಿದರು.

karnataka ratna | ಅಪ್ಪು ರವರಿಗೆ ಸಿಕ್ಕ ಕರ್ನಾಟಕ ರತ್ನ ಪ್ರಶಸ್ತಿ ಬಂಗಾರದ ಪದಕ ಎಷ್ಟು ಗ್ರಾಂ ಇದೆ ಗೊತ್ತೇ?? ಖರ್ಚು ಮಾಡಿದ ಹಣ ಎಷ್ಟು ಗೊತ್ತೇ??
ಅಪ್ಪು ರವರಿಗೆ ಸಿಕ್ಕ ಕರ್ನಾಟಕ ರತ್ನ ಪ್ರಶಸ್ತಿ ಬಂಗಾರದ ಪದಕ ಎಷ್ಟು ಗ್ರಾಂ ಇದೆ ಗೊತ್ತೇ?? ಖರ್ಚು ಮಾಡಿದ ಹಣ ಎಷ್ಟು ಗೊತ್ತೇ?? 2

ಕರ್ನಾಟಕ ರತ್ನ ಪ್ರಶಸ್ತಿ ಪ್ರಶಸ್ತಿಯ ಇನ್ನಿತರ ವಿವರದ ಕುರಿತಾಗಿ ನೋಡುವುದಾದರೆ, ಈ ಪ್ರಶಸ್ತಿಯು 50 ಗ್ರಾಂ ಚಿನ್ನದ ಪದಕ, ನೆನಪಿನ ಕಾಣಿಕೆ, ಶಾಲು ಒಳಗೊಂಡಿರುತ್ತದೆ. ಜೊತೆಗೆ ಈ ಪ್ರಶಸ್ತಿಯನ್ನು ಪಡೆದವರಿಗೆ ಪ್ರಶಸ್ತಿ ಮೊತ್ತದ ರೂಪವಾಗಿ ಎರಡೂವರೆ ಲಕ್ಷ (2.5 Lacks) ನಗದು ಪುರಸ್ಕಾರವನ್ನು ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯ ಮೊತ್ತ, ಚಿನ್ನದ ಪದಕದ ತೂಕ ಏನೇ ಇರಲಿ ಆದರೆ ಕರ್ನಾಟಕ ರತ್ನ ಪ್ರಶಸ್ತಿಗೆ ದೊಡ್ಡ ಗೌರವವಿದೆ. ವಿವಿಧ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಹೀಗಾಗಿ ಈ ಪ್ರಶಸ್ತಿ ಒಂದು ಘನತೆಯ ವಿಷಯ. ಹಾಗಾಗಿ ಪ್ರಶಸ್ತಿಯ ಬೆಲೆ, ನೆನಪಿನ ಕಾಣಿಕೆ, ಪ್ರಶಸ್ತಿಯ ಮೊತ್ತ ಮುಖ್ಯವಾಗುವುದಿಲ್ಲ. ಬದಲಾಗಿ ಪುನೀತ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಮುಖ್ಯವಾಗುತ್ತದೆ.

Comments are closed.