ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಸಾನ್ಯಾ ಐಯ್ಯರ್ ರವರಿಗೆ ಒಂದು ವಾರಕ್ಕೆ ನೀಡುತ್ತಿದ್ದ ಸಂಭಾವನೆ ಎಷ್ಟು ಗೊತ್ತೇ??

ಬಿಗ್ ಬಾಸ್ ನಲ್ಲಿ ಈ ವಾರ ಸಾನ್ಯಾ ಅಯ್ಯರ್ ಮನೆಯಿಂದ ಹೊರ ನಡೆದಿದ್ದಾರೆ. ಈ ವಾರ ಸಾಕಷ್ಟು ಟಫ್ ಕಂಟೆಸ್ಟೆಂಟ್ಗಳು ನಾಮಿನೇಟ್ ಆಗಿದ್ದರು. ಅವರ ಪೈಕಿ ಮನೆಯಿಂದ ಸಾನ್ಯಾ ಔಟ್ ಆಗಿದ್ದಾರೆ. ಸಾಕಷ್ಟು ಕುತೂಹಲ ಕೆರಳಿಸಿದ್ದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಸಾನಿಯಾ ಅಯ್ಯರ್ ಮನೆಯಿಂದ ಹೊರ ಬಿದ್ದಿದ್ದಾರೆ. ಇದೀಗ ಅವರು ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಇದ್ದುದ್ದಕ್ಕಾಗಿ ಪಡೆದ ಸಂಭಾವನೆ ಎಷ್ಟು ಎನ್ನುವುದರ ಕುರಿತು ಚರ್ಚೆ ನಡೆಯುತ್ತಿದೆ. ಬಿಗ್ ಬಾಸ್ ನಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳಿಗೆ ವಾರಕ್ಕೆ ಇಷ್ಟು ಸಂಭಾವನೆ ಎಂದು ಮೊದಲೇ ನಿರ್ಧರಿಸಿ ಮನೆ ಒಳಗೆ ಕಳಿಸಲಾಗಿರುತ್ತದೆ. ಓಟಿಟಿ ಮತ್ತು ಟಿವಿ ಸೀಸನ್ ಎರಡಕ್ಕೂ ಸಾಕಷ್ಟು ದೊಡ್ಡ ಮೊತ್ತದ ಹಣ ಪಡೆದಿದ್ದಾರೆ. ಸಾನಿಯಾ ಕಿರುತೆರೆಗೆ ಬಾಲಕಲಾವಿದೆಯಾಗಿ ಪ್ರವೇಶಿಸಿದರು. ಅತ್ಯಂತ ಜನಪ್ರಿಯ ಧಾರವಾಹಿ ಆದ ಪುಟ್ಟಗೌರಿ ಮದುವೆಯಲ್ಲಿ ಪುಟ್ಟಗೌರಿಯಾಗಿ ಅವರು ಕಾಣಿಸಿಕೊಂಡಿದ್ದರು. ಆ ದಾರವಾಹಿ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತು.

ಆನಂತರ ಕೊಂಚ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದ ಅವರು ಕಲರ್ಸ್ ಕನ್ನಡದಲ್ಲಿ ಇತ್ತೀಚಿಗೆ ಪ್ರಸಾರವಾದ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ನಟನೆಯ ಮೂಲಕ ಹೆಸರಾಗಿದ್ದ ಅವರು ತಮ್ಮ ಡ್ಯಾನ್ಸ್ ಮೂಲಕ ಜನರಿಗೆ ಇಷ್ಟವಾದರು. ಆನಂತರ ಅವರು ಬಿಗ್ ಬಾಸ್ ಓಟಿಟಿ ಸೀಸನ್ಗೆ ಕಾಲಿಟ್ಟರು. ಇದೇ ಮೊದಲ ಬಾರಿಗೆ ಬಿಗ್ ಬಾಸ್ ಒಟ್ಟಿಟಿ ಅನ್ನು ಪ್ರಸಾರ ಮಾಡಲಾಗಿತ್ತು. ಈ ಸೀಸನ್ ನಲ್ಲಿ ಟಾಪ್ ಫೋರ್ ಸ್ಪರ್ಧಿಯಾಗಿದ್ದ ಸಾನಿಯಾ ನಂತರ ಬಿಗ್ ಬಾಸ್ ಟಿವಿ ಸೀಸನ್ಗೆ ಆಯ್ಕೆಯಾದರು. ಇಷ್ಟು ದಿನಗಳ ಕಾಲ ಟಿ ವಿ ಸೀಸನ್ನಲ್ಲೂ ಅವರು ಮಿಂಚುತ್ತಿದ್ದರು. ಈ ನಡುವೆ ಅವರು ರೂಪೇಶ್ ಶೆಟ್ಟಿ ಅವರ ಜೊತೆಗೆ ಗುರುತಿಸಿಕೊಂಡಿದ್ದರು. ಇದೀಗ ಸಾನಿಯಾ ಮನೆಯಿಂದ ಹೊರ ಬಂದಿದ್ದಾರೆ. ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಬಿಗ್ ಬಾಸ್ ಸಾನಿಯಾ ಅವರನ್ನು ಔಟ್ ಮಾಡಿದೆ.

saanya bigg boss samba | ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಸಾನ್ಯಾ ಐಯ್ಯರ್ ರವರಿಗೆ ಒಂದು ವಾರಕ್ಕೆ ನೀಡುತ್ತಿದ್ದ ಸಂಭಾವನೆ ಎಷ್ಟು ಗೊತ್ತೇ??
ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಸಾನ್ಯಾ ಐಯ್ಯರ್ ರವರಿಗೆ ಒಂದು ವಾರಕ್ಕೆ ನೀಡುತ್ತಿದ್ದ ಸಂಭಾವನೆ ಎಷ್ಟು ಗೊತ್ತೇ?? 2

ಇದೀಗ ಬಿಗ್ ಬಾಸ್ ಓಟಿಟಿ ಸೀಸನ್ ಮತ್ತು ಬಿಗ್ ಬಾಸ್ ಟಿವಿ ಸೀಸನ್ ಗಾಗಿ ಅವರು ಪಡೆದ ಸಂಭಾವನೆಯ ಕುರಿತ ಚರ್ಚೆ ನಡೆಯುತ್ತಿದೆ. ಹಾಗಿದ್ದರೆ ಅವರು ಒಟ್ಟು ಎಷ್ಟು ಮೊತ್ತದ ಹಣ ಪಡೆದಿದ್ದಾರೆ ಎನ್ನುವುದರ ಮಾಹಿತಿ ಇಲ್ಲಿದೆ. ಸಾನಿಯಾ ಅವರಿಗೆ ಬಿಗ್ ಬಾಸ್ ಓಟಿಟಿ ಸೀಸನ್ ನಲ್ಲಿ ವಾರಕ್ಕೆ ರೂ.30,000 ಸಂಭಾವನೆ ಎಂದು ನಿರ್ಧರಿಸಲಾಗಿತ್ತು. ಅದರಂತೆ ಓಟಿಪಿ ಸೀಸನ್ 6 ವಾರಗಳ ಕಾಲ ನಡೆಯಿತು. ಓಟಿಟಿ ಸೀಸನ್ನಿಂದ ಸಾನಿಯಾ ಅವರಿಗೆ ದೊರೆತ ಒಟ್ಟು ಮೊತ್ತ 1.8 ಲಕ್ಷ. ಬಿಗ್ ಬಾಸ್ ಟಿವಿ ಸೀಸನ್ ಗೆ ಬಂದ ನಂತರ ಅವರ ಸಂಭಾವನೆಯನ್ನು ವಾರಕ್ಕೆ 45,000 ಎಂದು ನಿರ್ಧರಿಸಲಾಗಿತ್ತು. ಅದರಂತೆ ಇದುವರೆಗೆ ಆರು ವಾರಗಳ ಕಾಲ ಸಾನಿಯಾ ಮನೆಯಲ್ಲಿದ್ದರು. ಅಂದರೆ 2.7 ಲಕ್ಷ ಸಂಭಾವನೆ ಅವರಿಗೆ ದೊರೆಯುತ್ತದೆ. ಓಟಿಟಿ ಸೀಸನ್ನಿಂದ 1.8 ಲಕ್ಷ, ಟಿವಿ ಸೀಸನ್ ಇಂದ 2.7 ಲಕ್ಷ ಸಂಭಾವನೆ ಅವರಿಗೆ ಸಿಗಲಿದೆ.

Comments are closed.